More

    ಶ್ರೀಲಂಕಾ ಪ್ರವಾಸಕ್ಕೆ ಇಂಗ್ಲೆಂಡ್ ತಂಡದ ಜತೆ ತೆರಳುತ್ತಿರುವ ಕೋಚ್‌ಗಳ ಸಂಖ್ಯೆ ಎಷ್ಟು ಗೊತ್ತೇ.?

    ಲಂಡನ್: ಮುಂದಿನ ತಿಂಗಳು ಇಂಗ್ಲೆಂಡ್ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳುತ್ತಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿದೆ. ಕಳೆದ ಮಾರ್ಚ್‌ನಲ್ಲೇ ಇಂಗ್ಲೆಂಡ್ ತಂಡ ಶ್ರೀಲಂಕಾಗೆ ಆಗಮಿಸಿದರೂ ಕರೊನಾ ವೈರಸ್ ಭೀತಿ ಉಲ್ಬಣಗೊಂಡ ಹಿನ್ನೆಲೆಯಲ್ಲಿ ತವರಿಗೆ ವಾಪಸಾಗಿತ್ತು. ಇದೀಗ ಎರಡು ಪಂದ್ಯಗಳ ಸರಣಿಗಾಗಿ ಮತ್ತೆ ಶ್ರೀಲಂಕಾಗೆ ಇಂಗ್ಲೆಂಡ್ ತಂಡ ಆಗಮಿಸಲಿದೆ. ಇದಕ್ಕಾಗಿ ದಕ್ಷಿಣ ಆಫ್ರಿಕಾದ ದಿಗ್ಗಜ ಆಲ್ರೌಂಡರ್ ಜಾಕ್ಸ್ ಕಾಲಿಸ್ ಅವರನ್ನು ಬ್ಯಾಟಿಂಗ್ ಸಲಹೆಗಾರರಾಗಿ ನೇಮಿಸಿರುವ ಇಂಗ್ಲೆಂಡ್, ಪ್ರವಾಸಕ್ಕೆ ಒಟ್ಟು 7 ಕೋಚ್‌ಗಳನ್ನು ಕರೆದೊಯ್ಯಲಿದೆ.

    ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ವೇಗಿ ಯೋ ಮಹೇಶ್ ನಿವೃತ್ತಿ ಘೋಷಣೆ..

    ಶ್ರೀಲಂಕಾ ಪ್ರವಾಸದ ವೇಳೆ 7 ಕೋಚ್‌ಗಳು ತಂಡದೊಂದಿಗೆ ಇರಲಿದ್ದಾರೆ ಎಂದು ಇಸಿಬಿ ತಿಳಿಸಿದೆ. ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಪೌಲ್ ಕಾಲಿಂಗ್‌ವುಡ್ ತಂಡದ ಸಹಾಯಕ ಕೋಚ್ ಆಗಿದ್ದರೆ, ಬೌಲಿಂಗ್ ಕೋಚ್ ಆಗಿ ಜಾನ್ ಲೆವಿಸ್, ಸ್ಪಿನ್ ಬೌಲಿಂಗ್ ಕೋಚ್ ಆಗಿ ಜೀತನ್ ಪಟೇಲ್, ಫೀಲ್ಡಿಂಗ್ ಕೋಚ್ ಆಗಿ ಕಾರ್ಲ್ ಹಾಪ್‌ಕಿನ್‌ಸನ್ ಹಾಗೂ ವಿಕೆಟ್ ಕೀಪಿಂಗ್ ಸಲಹೆಗಾರರಾಗಿ ಜೇಮ್ಸ್ ಪಾಸ್ಟೆರ್ ನೇಮಕಗೊಂಡಿದ್ದಾರೆ. ಹೀಗೆ ಎಲ್ಲ ವಿಭಾಗಗಕ್ಕೂ ಪ್ರತ್ಯೇಕ ಕೋಚ್ ಹಾಗೂ ಸಲಹೆಗಾರರನ್ನು ನೇಮಿಸಿಕೊಂಡಿರುವ ಇಂಗ್ಲೆಂಡ್, ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್‌ಗೆ (ಡಬ್ಲ್ಯುಟಿಸಿ) ಅಗತ್ಯ ಸಿದ್ಧತೆ ಕೈಗೊಳ್ಳುತ್ತಿದೆ. 2021ರಲ್ಲಿ ತವರಿನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಆಡುವ ಕನಸಿನಲ್ಲಿದೆ.

    ಇದನ್ನೂ ಓದಿ: ಬಿಎಫ್ ಸಿ ಅಜೇಯ ಓಟಕ್ಕೆ ಬ್ರೇಕ್ ಹಾಕಿದ ಎಟಿಕೆ ಮೋಹನ್ ಬಾಗನ್

    ಎರಡು ಟೆಸ್ಟ್ ಪಂದ್ಯಗಳು ಗಾಲೆಯಲ್ಲಿ ನಡೆಯಲಿದ್ದು, ಮೊದಲ ಪಂದ್ಯ ಜನವರಿ 14 ರಿಂದ 18 ರವರೆಗೆ, ಎರಡನೇ ಪಂದ್ಯ ಜನವರು 22 ರಿಂದ 26 ರವರೆಗೆ ನಡೆಯಲಿದೆ.

    ಇಂಗ್ಲೆಂಡ್ ತಂಡಕ್ಕೆ ದಕ್ಷಿಣ ಆಫ್ರಿಕಾದ ದಿಗ್ಗಜ ಬ್ಯಾಟ್ಸ್‌ಮನ್‌ನಿಂದ ಬ್ಯಾಟಿಂಗ್ ಸಲಹೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts