More

    ಬಿಎಫ್ ಸಿ ಅಜೇಯ ಓಟಕ್ಕೆ ಬ್ರೇಕ್ ಹಾಕಿದ ಎಟಿಕೆ ಮೋಹನ್ ಬಾಗನ್

    ಫರ್ಟೋಡ: ಬಲಿಷ್ಠ ಎಟಿಕೆ ಮೋಹನ್ ಬಾಗನ್ ಸವಾಲು ಎದುರಿಸಲು ವಿಫಲವಾದ ಬೆಂಗಳೂರು ಎಫ್ ಸಿ ತಂಡ 7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮೊದಲ ಸೋಲನುಭವಿಸಿತು. ಫರ್ಟೋಡ ಫುಟ್‌ಬಾಲ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಸುನೀಲ್ ಛೇಟ್ರಿ ಬಳಗ 0-1 ಗೋಲುಗಳಿಂದ ಎಟಿಕೆ ಮೋಹನ್ ಬಾಗನ್ ತಂಡಕ್ಕೆ ಶರಣಾಯಿತು. ಟೂರ್ನಿಯಲ್ಲಿ ಇದುವರೆಗೂ ಅಜೇಯ ಸಾಧನೆ ಮಾಡಿದ್ದ ಏಕೈಕ ತಂಡ ಎನಿಸಿದ್ದ ಬಿಎಫ್ ಸಿ ತಂಡದ ಅಜೇಯ ಓಟಕ್ಕೆ ಬ್ರೇಕ್ ಬಿದ್ದಿತ್ತು.

    ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ವೇಗಿ ಯೋ ಮಹೇಶ್ ನಿವೃತ್ತಿ ಘೋಷಣೆ

    ಸೋಲಿನ ನಡುವೆಯೂ ಬಿಎಫ್ ಸಿ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಉಳಿಯಿತು. ಡೇವಿಡ್ ವಿಲಿಯಮ್ಸ್ (33ನೇ ನಿಮಿಷ) ಏಕೈಕ ಗೋಲು ದಾಖಲಿಸಿ ಬಿಎಫ್ ಸಿ ತಂಡಕ್ಕೆ ಆಘಾತ ನೀಡಿದರು. ಮೊದಲಾರ್ಧದಲ್ಲಿ 0-1 ರಿಂದ ಹಿನ್ನಡೆ ಅನುಭವಿಸಿದ ಸುನೀಲ್ ಛೇಟ್ರಿ ಪಡೆ, ದ್ವಿತೀಯಾರ್ಧದಲ್ಲಿ ಪ್ರಬಲ ಪೈಪೋಟಿ ತೋರಿದರೂ ಎಟಿಕೆ ಮೋಹನ್ ಬಾಗನ್ ಪ್ರಬಲ ನಿರ್ವಹಣೆಯಿಂದಾಗಿ ಗೋಲು ದಾಖಲಿಸಲು ವಿಫಲವಾಯಿತು.

    ಇದನ್ನೂ ಓದಿ: ಗ್ರಾಮ ಪಂಚಾಯಿತಿ ಚುನಾವಣೆಗೆ 80 ಸಾವಿರ ಪೊಲೀಸರ ಕಾವಲು

    ಅಂತಿಮ ಕ್ಷಣದವರೆಗೂ ಉಭಯ ತಂಡಗಳ ಹೋರಾಟ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಗೆಲುವಿಗಾಗಿ ಬಿಎಫ್ ಸಿ ನಡೆಸಿದ ಯಾವುದೇ ಯೋಜನೆಗಳು ಕೈಗೂಡಲಿಲ್ಲ. ಬಿಎಫ್ ಸಿ ಇದುವರೆಗೂ ಆಡಿರುವ 7 ಪಂದ್ಯಗಳಲ್ಲಿ ತಲಾ 3 ಜಯ ಹಾಗೂ ಡ್ರಾ ಸಾಧಿಸಿದ್ದರೆ, ಮೊದಲ ಸೋಲು ಕಂಡಿತು. 12 ಅಂಕಗಳೊಂದಿಗೆ 3ನೇ ಸ್ಥಾನದಲ್ಲೆ ಉಳಿಯಿತು. ಮತ್ತೊಂದೆಡೆ, ಎಟಿಕೆ ಮೋಹನ್ ಬಾಗನ್ ತಂಡ ಇದುವರೆಗೂ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ ತಲಾ ಒಂದು ಡ್ರಾ ಹಾಗೂ ಸೋಲು ಕಂಡಿದ್ದು, 16 ಅಂಕಗಳೊಂದಿಗೆ 2ನೇ ಸ್ಥಾನ ಉಳಿಸಿಕೊಂಡಿತು.

    ಮುಂದಿನ ಎದುರಾಳಿ: ಜೇಮ್ಶೆಡ್‌ಪುರ ಬಿಎಫ್ ಸಿ- ಯಾವಾಗ: ಡಿಸೆಂಬರ್ 28 (ಸೋಮವಾರ)

    ‘ಎಂಆರ್’ ನಿಲ್ಲುವುದಿಲ್ಲ … ಚಿತ್ರ ಮುಂದುವರೆಸಲು ರವಿ ಶ್ರೀವತ್ಸ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts