More

    ಕರೊನಾ ಮರೆತು ‘ಪೂಲ್ ಪಾರ್ಟಿ’! 61 ಜನರ ಬಂಧನ

    ನಾಯ್ಡಾ: ಉತ್ತರಪ್ರದೇಶದ ನಾಯ್ಡಾದಲ್ಲಿ ಕರೊನಾ ನಿರ್ಬಂಧಗಳನ್ನು ಗಾಳಿಗೆ ತೂರಿ ‘ಪೂಲ್​ ಪಾರ್ಟಿ’ ನಡೆಸುತ್ತಿದ್ದ 61 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಯಮುನಾ ಎಕ್ಸ್​​ಪ್ರೆಸ್​ವೇ ಠಾಣಾ ವ್ಯಾಪ್ತಿಯಲ್ಲಿ ಬರುವ ಖಾಸಗಿ ಫಾರ್ಮ್​ಹೌಸ್​ ಒಂದರಲ್ಲಿ ಭಾನುವಾರ ರಾತ್ರಿ ಈ ಪ್ರಕರಣ ನಡೆದಿದೆ.

    “ಸೆಕ್ಟರ್​ 135 ರ ಯಮುನಾ ಪ್ರವಾಹ ಪ್ರದೇಶದಲ್ಲಿನ ಗ್ರೀನ್ ಬ್ಯೂಟಿ ಫಾರ್ಮ್‌ಹೌಸ್‌ನಲ್ಲಿ, ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿ, ಪೂಲ್ ಪಾರ್ಟಿ ನಡೆಸಲಾಗುತ್ತಿತ್ತು. ಒಟ್ಟು 46 ಪುರುಷರು ಮತ್ತು 15 ಮಹಿಳೆಯರನ್ನು ಬಂಧಿಸಲಾಗಿದೆ” ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

    ಇದನ್ನೂ ಓದಿ: ಟ್ಯಾಕ್ಸಿ ರೈಡ್ ಮಾಡಿ ದುಡ್ಡಿನ ಬದಲು ಸೆಕ್ಸ್ ಆಫರ್​ ಕೊಡ್ತಾರೆ ಮಹಿಳೆಯರು! ಈ ವಿಚಿತ್ರ ದೇಶದಲ್ಲಿ ಶೇ. 5.6 ಜನರಿಗಿದೆ ಏಡ್ಸ್​

    “ಕರೊನಾ ಮುನ್ನೆಚ್ಚರಿಕೆಯನ್ನು ಮರೆತು ಆರೋಪಿಗಳು ಸ್ವಿಮ್ಮಿಂಗ್​ ಪೂಲ್​ನಲ್ಲಿ ಸ್ನಾನ ಮಾಡುತ್ತಿದ್ದರು. ಯಾರೂ ಮಾಸ್ಕ್​ ತೊಟ್ಟಿರಲಿಲ್ಲ ಮತ್ತು ಕೆಲವರು ಫಾರ್ಮ್​ ಹೌಸಿನ ಆವರಣದಲ್ಲಿ ಉಗಿಯುತ್ತಿದ್ದುದೂ ಕಂಡುಬಂತು” ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಿಂದ ಹರಿಯಾಣದ ಸೀಲ್ ಹೊಂದಿದ 12 ಬಾಟಲ್ ಬೀರ್​ ಮತ್ತು 2 ಬಾಟಲ್ ವಿಸ್ಕಿಯನ್ನು ಜಪ್ತಿಪಡಿಸಿಕೊಳ್ಳಲಾಗಿದೆ.

    ಅನೇಕ ಆರೋಪಿಗಳು ದೆಹಲಿ ನಿವಾಸಿಗಳಾಗಿದ್ದು ಕೆಲವರು ಘಾಜಿಯಾಬಾದ್​ ಮತ್ತು ಎನ್​ಸಿಆರ್​ನ ಪಟ್ಟಣಗಳಿಂದ ಬಂದವರಾಗಿದ್ದಾರೆ. ಕರೊನಾ ಮುನ್ನೆಚ್ಚರಿಕೆ ಮತ್ತು ನಿರ್ಬಂಧಗಳನ್ನು ಉಲ್ಲಂಘಿಸಿರುವುದರಿಂದ ಐಪಿಸಿ ಸೆಕ್ಷನ್​ 188, 269 ಮತ್ತು 270 ರಡಿ ಎಫ್​.ಐ.ಆರ್. ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

    ಅಧಿಕಾರಿಗಳಿಗೆ ಐಷಾರಾಮಿ​ ಕಾರು; ಸರ್ಕಾರದ ಮೇಲೆ ವಿಪಕ್ಷಗಳು ಗರಂ!

    ಸಿದ್ದರಾಮಯ್ಯ ಸಿಎಂ ಆದ್ರೂ ಉಚಿತ ಬಿತ್ತನೆ ಬೀಜ, ಗೊಬ್ಬರ ಕೊಡಲು ಸಾಧ್ಯವಿಲ್ಲ : ಕೃಷಿ ಸಚಿವ ಬಿ.ಸಿ.ಪಾಟೀಲ್ ಟಾಂಗ್

    VIDEO | ನೀರುತುಂಬಿದ ರಸ್ತೆಯಲ್ಲಿ ಕೂರಿಸಿ ಕಂಟ್ರಾಕ್ಟರ್​ಗೆ ಕಸದ ಅಭಿಷೇಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts