More

    ಸಿದ್ದರಾಮಯ್ಯ ಸಿಎಂ ಆದ್ರೂ ಉಚಿತ ಬಿತ್ತನೆ ಬೀಜ, ಗೊಬ್ಬರ ಕೊಡಲು ಸಾಧ್ಯವಿಲ್ಲ : ಕೃಷಿ ಸಚಿವ ಬಿ.ಸಿ.ಪಾಟೀಲ್ ಟಾಂಗ್

    ಬೆಂಗಳೂರು : ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಉಚಿತವಾಗಿ ಕೊಡಲು ಸಿದ್ದರಾಮಯ್ಯ ಸಿಎಂ ಆದರೂ ಸಾಧ್ಯವಾಗುತ್ತದೆಯೆ ? ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರಶ್ನಿಸಿದ್ದಾರೆ. ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಟೀಲ್​, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಉಚಿತವಾಗಿ ಬಿತ್ತನೆ ಬೀಜ, ರಸಗೊಬ್ಬರ ಕೊಡುವಂತೆ ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    “ಉಚಿತ ಬಿತ್ತನೆ ಬೀಜ, ರಸಗೊಬ್ಬರ ಕೊಡಲು ಸಾಧ್ಯವಾ? ಸಿದ್ದರಾಮಯ್ಯ ಸಿಎಂ ಆದರೂ ಇದು ಸಾಧ್ಯವಾಗುತ್ತಾ? ಅವರು ಕೇಳುತ್ತಿರುವುದು ಅವೈಜ್ಞಾನಿಕ. ನಾವು ಸಬ್ಸಿಡಿ ದರದಲ್ಲಿ ಕೊಡುತ್ತಿದ್ದೇವೆ. ಯೂರಿಯಾ ಖರೀದಿಗೆ 1265 ಕ್ಕೆ 1000 ರೂ. ಸಬ್ಸಿಡಿ ಕೊಡುತ್ತಿದ್ದೇವೆ. ಸೂಕ್ಷ್ಮ ನೀರಾವರಿಗೆ ಶೇ. ೯೦ ಸಬ್ಸಿಡಿ ನೀಡುತ್ತಿದ್ದೇವೆ. ಕೃಷಿ ಸನ್ಮಾನ್ ಯೋಜನೆ ಅನುಷ್ಠಾನದಲ್ಲಿ ಯಶಸ್ವಿಯಾಗಿದ್ದೇವೆ” ಎಂದರು.

    ಇದನ್ನೂ ಓದಿ: ಕರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ: ಸಿಎಂ ಘೋಷಣೆ

    ಕಳಪೆ ಬಿತ್ತನೆ ಬೀಜ ಜಪ್ತು ಮಾಡಿದ್ದೇವೆ. ಅಕ್ರಮ ಮಾರಾಟ ಮಾಡುತ್ತಿದ್ದ ರಸಗೊಬ್ಬರ ಜಪ್ತು ಮಾಡಿದ್ದೇವೆ. ರೈತರಿಗೆ ಉತ್ತಮ ಬೀಜ ಸಿಗಬೇಕೆಂಬ ಹಿನ್ನೆಲೆ ಈ ಕ್ರಮ ಕೈಗೊಂಡಿದ್ದೇವೆ. 240 ಅಕ್ರಮ ಮಾರಾಟಗಾರರ ಲೈಸೆನ್ಸ್ ರದ್ದುಪಡಿಸಿದ್ದೇವೆ ಎಂದು ಪಾಟೀಲ್​ ಹೇಳಿದರು. ಈಗ ನ್ಯಾನೋ ಯೂರಿಯಾ ಬಂದಿದೆ. ಅರ್ಧ ಲೀಟರ್ ಗೆ 250 ರೂ. ಬೀಳಲಿದೆ. ಇದು ಒಂದು ಚೀಲ ಯೂರಿಯಾ ಗೊಬ್ಬರಕ್ಕೆ ಸಮ ಎಂದು ತಿಳಿಸಿದರು.

    ಕಳೆದ ವರ್ಷ ಲಾಕ್ಡೌನ್ ಇದ್ದರೂ ಕೃಷಿ ಉತ್ಪಾದನೆ ಚೆನ್ನಾಗಿ ನಡೆದಿತ್ತು. 153 ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. ಈ ವರ್ಷವೂ ಉತ್ತಮ ಬಿತ್ತನೆಯಾಗಿದೆ. ಕೃಷಿ ಉತ್ಪಾದನೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದ ಸಚಿವ ಪಾಟೀಲ್, ಕಳೆದ ಬಾರಿ ತರಕಾರಿಗಳು ಸಿಗುತ್ತಿರಲಿಲ್ಲ. ಆದರೆ, ಈ ಬಾರಿ ಕೈಗಾಡಿಯಲ್ಲಿ‌ ಮಾರಲು ಅವಕಾಶ ಕೊಡಲಾಗಿದೆ‌. ಹಾಗಾಗಿ ತರಕಾರಿ ಈ ಬಾರಿ ನಷ್ಟವಾಗಿಲ್ಲ ಎಂದರು. ಬ್ಯಾಂಕುಗಳ ವಿಲೀನದಿಂದಾಗಿ ಅಕೌಂಟ್​​ಗಳ ಸಮಸ್ಯೆಯಾಗಿದೆ. ಇದರಿಂದ ರೈತರಿಗೆ ಮೆಕ್ಕೆಜೋಳ ಖರೀದಿಸಿದ ಹಣ ಬಿಡುಗಡೆಗೆ ಸ್ವಲ್ಪ ಸಮಸ್ಯೆಯಾಗಿದೆ. ಆದರೆ, ಡಿಬಿಟಿಯಡಿ ಹಣ ಬಿಡುಗಡೆ ಮಾಡಿದ್ದೇವೆ. ಯಾವುದೇ ಬ್ಯಾಲೆನ್ಸ್ ಇಟ್ಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

    ಇದನ್ನೂ ಓದಿ: ಪ್ರತಿಷ್ಠಿತ ವೃತ್ತ ಅಥವಾ ಮೇಲ್ಸೇತುವೆಗೆ ಕವಿ ಡಾ.ಸಿದ್ದಲಿಂಗಯ್ಯ ಹೆಸರಿಡಲು ಮನವಿ

    ಸಿಎಂ ಬದಲಾವಣೆ : ನಾಯಕತ್ವ ಬದಲಾವಣೆ ವಿಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಾಟೀಲ್, ಜೂ. 16 ರಂದು ಸಂಜೆ 5 ಕ್ಕೆ ಸಚಿವರು ಹಾಗೂ ಬಿಜೆಪಿ ಶಾಸಕರ ಸಭೆ ಕರೆಯಲಾಗಿದೆ. ಅಲ್ಲಿ ಏನೇನು ಚರ್ಚೆಯಾಗುತ್ತೋ ಗೊತ್ತಿಲ್ಲ. ಕೆಲವರು ಸಿಎಂ ಬದಲಾವಣೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಆದರೆ ಅಂತಹ ಯಾವುದೇ ಪ್ರಸ್ತಾಪ ಇಲ್ಲ. ಎರಡು ವರ್ಷ ಯಡಿಯೂರಪ್ಪ ಅವರೇ ಮುಂದುವರಿಯುತ್ತಾರೆ. ಇದನ್ನು ರಾಜ್ಯ ಉಸ್ತುವಾರಿ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ಕಟೀಲ್ ಸ್ಪಷ್ಟಪಡಿಸಿದ್ದಾರೆ ಎಂದರು.

    ಸೋಷಿಯಲಿಸಂ ಕೈಹಿಡಿದ ಮಮತಾ ಬ್ಯಾನರ್ಜಿ! ಬಂಗಾಳದಲ್ಲಲ್ಲ, ತಮಿಳುನಾಡಲ್ಲಿ!

    VIDEO | ನೀರುತುಂಬಿದ ರಸ್ತೆಯಲ್ಲಿ ಕೂರಿಸಿ ಕಂಟ್ರಾಕ್ಟರ್​ಗೆ ಕಸದ ಅಭಿಷೇಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts