More

    60 ಪೈಸೆ ಇದ್ದ ಷೇರು ಈಗ 19 ರೂಪಾಯಿ: 4 ವರ್ಷಗಳಲ್ಲಿ 3000% ಏರಿಕೆ, 173 ಕೋಟಿ ರೂ. ಲಾಭದ ನಂತರ ಮತ್ತೆ ಬೇಡಿಕೆ

    ಮುಂಬೈ: ಶೇಕಡಾ 99ರಷ್ಟು ಕುಸಿತ ಕಂಡಿದ್ದ JP ಪವರ್‌ನ ಷೇರುಗಳು ನಂತರದ ದಿನಗಳಲ್ಲಿ 3000% ನಷ್ಟು ಏರಿಕೆ ಕಂಡಿವೆ. ಈಗ ಕಂಪನಿಯ ಷೇರುಗಳಿಗೆ ಬೇಡಿಕೆ ಕುದುರಿದೆ. ಏಕೆಂದರೆ, ಈ ಕಂಪನಿಯು ಡಿಸೆಂಬರ್​ ತ್ರೈಮಾಸಿಕದಲ್ಲಿ 173 ಕೋಟಿ ರೂ ಲಾಭ ಗಳಿಸಿದೆ.

    ಜೆಪಿ ಪವರ್ ಷೇರುಗಳು ಶುಕ್ರವಾರ ಫೆ. 2ರಂದು 4% ಕ್ಕಿಂತ ಹೆಚ್ಚು ಏರಿಕೆ ಕಂಡು 19.03 ರೂಪಾಯಿ ತಲುಪಿದವು. ಜೆಪಿ ಪವರ್ ಷೇರುಗಳು ತಮ್ಮ ಸಾರ್ವಕಾಲಿಕ ಗರಿಷ್ಠ ಬೆಲೆ ಮಟ್ಟದಿಂದ 99% ಕುಸಿತ ಕಂಡಿದ್ದವು. ಇದಾದ ನಂತರ ಕಳೆದ 4 ವರ್ಷಗಳಲ್ಲಿ 3000% ಕ್ಕಿಂತ ಹೆಚ್ಚು ಏರಿಕೆಯನ್ನು ಈ ಷೇರುಗಳು ದಾಖಲಿಸಿವೆ.

    ಜೆಪಿ ಗ್ರೂಪ್‌ನ ಕಂಪನಿಯಾದ ಜಯಪ್ರಕಾಶ್ ಪವರ್ ವೆಂಚರ್ಸ್ ಲಿಮಿಟೆಡ್ (ಜೆಪಿ ಪವರ್) ಷೇರುಗಳು ಶುಕ್ರವಾರ ಶೇಕಡಾ 4 ಕ್ಕಿಂತ ಹೆಚ್ಚು ಏರಿಕೆ ಕಂಡು 19.03 ರೂಪಾಯಿ ತಲುಪಿದವೆ. ಈ ಷೇರುಗಳು 52 ವಾರದ ಗರಿಷ್ಠ ಮಟ್ಟಕ್ಕೆ ಹತ್ತಿರದಲ್ಲಿವೆ.

    ಕಳೆದ ಕೆಲವು ದಿನಗಳಿಂದ ಜೆಪಿ ಪವರ್ ಷೇರುಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಕಂಪನಿಗೆ ಡಿಸೆಂಬರ್ 2023ರ ತ್ರೈಮಾಸಿಕದಲ್ಲಿ ರೂ 172.85 ಕೋಟಿ ಲಾಭ ಮಾಡಿದೆ.

    ಈ ಕಂಪನಿಯ ಷೇರುಗಳ ಬೆಲೆ 99% ಕುಸಿದ ನಂತರ, ಇವುಗಳ ಬೆಲೆ 60 ಪೈಸೆ ತಲುಪಿತ್ತು. ಜೈಪ್ರಕಾಶ್ ಪವರ್ ವೆಂಚರ್ಸ್ ಲಿಮಿಟೆಡ್ (ಜೆಪಿ ಪವರ್) ಷೇರು ಬೆಲೆ ಜನವರಿ 4, 2008 ರಂದು 137 ರೂ ಇತ್ತು. ಮಾರ್ಚ್ 27, 2020 ರಂದು ಕಂಪನಿಯ ಷೇರುಗಳು ಶೇಕಡಾ 99 ಕ್ಕಿಂತ ಹೆಚ್ಚು ಕುಸಿದು, 60 ಪೈಸೆ ತಲುಪಿತ್ತು. ಇಲ್ಲಿ, ಕಳೆದ ಕೆಲವು ವರ್ಷಗಳಲ್ಲಿ, ಜೆಪಿ ಪವರ್‌ನ ಷೇರುಗಳಲ್ಲಿ ಉತ್ತಮ ಏರಿಕೆ ಕಂಡುಬಂದಿದೆ. 2024ರ ಫೆಬ್ರವರಿ 2 ರಂದು ಷೇರಿನ ಬೆಲೆ 19.03ಗೆ ತಲುಪಿದೆ. ಈ ಮೂಲಕ ಕಳೆದ 4 ವರ್ಷಗಳಲ್ಲಿ, ಷೇರುಗಳ ಬೆಲೆ 3043% ರಷ್ಟು ಏರಿಕೆಯಾಗಿದೆ. 52 ವಾರದ ಜೆಪಿ ಪವರ್ ಷೇರುಗಳ ಗರಿಷ್ಠ ಮಟ್ಟ 19.23 ರೂಪಾಯಿ ಇದ್ದರೆ ಕನಿಷ್ಠ ಬೆಲೆ 5.17 ರೂಪಾಯಿ.

    ಕಂಪನಿಯು ರೂ. 172.8 ಕೋಟಿ ಲಾಭ ಗಳಿಸಿದೆ. ಜೈಪ್ರಕಾಶ್ ಪವರ್ ವೆಂಚರ್ಸ್ ಲಿಮಿಟೆಡ್ (ಜೆಪಿ ಪವರ್) ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ರೂ.172.85 ಕೋಟಿ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 217.97 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು. ಕಳೆದ 6 ತಿಂಗಳಲ್ಲಿ JP ಪವರ್ ಷೇರುಗಳು 195% ಜಿಗಿದಿವೆ. ಕಳೆದ 6 ತಿಂಗಳಲ್ಲಿ ಕಂಪನಿಯ ಷೇರುಗಳು 6.45 ರೂ.ನಿಂದ 19 ರೂ. ಮುಟ್ಟಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts