More

    ಗಾಲ್ವಾನ್​ ಸಂಘರ್ಷದಲ್ಲಿ ಹತ್ಯೆಯಾದ ಚೀನಾ ಯೋಧರ ಸಂಖ್ಯೆ 60ಕ್ಕೂ ಹೆಚ್ಚು; ಅಮೆರಿಕ ಮೂಲದಿಂದ ಸತ್ಯ ಬಯಲು…!

    ನವದೆಹಲಿ: 45 ವರ್ಷಗಳ ಬಳಿಕ ಭಾರತ- ಚೀನಾ ಯೋಧರ ನಡುವಿನ ಅತ್ಯಂತ ಭೀಕರ ಸಂಘರ್ಷ ಎನ್ನಲಾದ ಗಾಲ್ವಾನ್​ನಲ್ಲಿ ಕಳೆದ ಜೂನ್​ 15ರಂದು ನಡೆದ ಮಾರಣಾಂತಿಕ ದಾಳಿಯಲ್ಲಿ ಭಾರತದ 20 ಯೋಧರು ಮೃತಪಟ್ಟಿದ್ದರು. ಆದರೆ, ಇದರಲ್ಲಿ ಬಲಿಯಾದ ತನ್ನ ಯೋಧರೆಷ್ಟು ಎಂಬುದನ್ನು ಚೀನಾ ಈವರೆಗೂ ತಿಳಿಸಿಲ್ಲ. ಆದರೆ, ಅಮೆರಿಕ ಮೂಲದಿಂದ ಈ ಸತ್ಯವೀಗ ಬಹಿರಂಗವಾಗಿದೆ.

    ಅಂದು ರಾತ್ರಿಯಿಡೀ ನಡೆದ ದಾಳಿಯಲ್ಲಿ ಚೀನಿ ಯೋಧರು ಮೊಳೆಗಳಿದ್ದ ಕಬ್ಬಿಣದ ಸರಳುಗಳಿಂದ ಮಾರಣಾಂತಿಕ ದಾಳಿ ನಡೆಸಿದ್ದರು ಜತೆಗೆ ಕಲ್ಲು ತೂರಾಟದಲ್ಲೂ ತೊಡಗಿದ್ದರು. ಆದರೆ, ಇದಕ್ಕೆ ಭಾರತೀಯ ಯೋಧರು ಕೂಡ ತಕ್ಕ ಪ್ರತ್ಯುತ್ತರ ನೀಡಿದ್ದರು. ಪ್ರತಿದಾಳಿಯಲ್ಲಿ ಎಷ್ಟು ಜನರು ಮೃತಪಟ್ಟಿದ್ದಾರೆ ಎಂಬುದನ್ನು ಅಮೆರಿಕದ ನ್ಯೂಸ್​ವೀಕ್​ ಪ್ರಕಟಿಸಿದ್ದು, 60ಕ್ಕೂ ಹೆಚ್ಚು ಯೋಧರು ಹತರಾಗಿದ್ದಾರೆ ಎಂದು ಹೇಳಿದೆ.

    ಇದನ್ನೂ ಓದಿ; ಎ.ಕೆ. -47 ಗುಂಡನ್ನು ತಡೆಯಬಲ್ಲುದು ಈ ಭಾಭಾ ಕವಚ….! 

    ಆರಂಭದಲ್ಲಿ 45ಕ್ಕೂ ಪೀಪಲ್ಸ್​ ಲಿಬರೇಷನ್​ ಆರ್ಮಿಯ ಯೋಧರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ಅಮೆರಿಕದ ಫೌಂಡೇಷನ್​ ಫಾರ್​ ಡೆಫೆನ್ಸ್​ ಆಫ್​ ಡೆಮೊಕ್ರಸಿಯ ಕ್ಲಿಯೋ ಪಾಸ್ಕಲ್​ ಹೇಳುವ ಪ್ರಕಾರ ಈ ಸಂಖ್ಯೆ 60ಕ್ಕೂ ಅಧಿಕ ಎಂದು ತಿಳಿಸಿದ್ದಾರೆ.

    ಭಾರತದ ಯೋಧರ ದಾಳಿ ಅತ್ಯುಗ್ರವಾಗಿತ್ತು. ಇದು ಚೀನಿ ಸೇನೆಗೆ ಭಾರಿ ಹಾನಿ ಉಂಟುಮಾಡಿದೆ. 1962ರ ಸೋಲಿನಿಂದ ಭಾರತೀಯ ಯೋಧರು ಚೀನಾದ ಎದುರು ಹತಾಶ ಸ್ಥಿತಿಯಲ್ಲಿದ್ದಾರೆ ಎಂದು ಈವರೆಗೆ ಚೀನಾ ನಂಬಿಕೊಂಡಿತ್ತು. ಆದರೆ, ಗಲ್ವಾನ್​ ಸಂಘರ್ಷ ಇದನ್ನು ಸುಳ್ಳೆಂದು ಸಾಬೀತು ಮಾಡಿದೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.

    ಐಸಿಸ್​ ನೇಮಕಕ್ಕೆ ನೆರವಾಗುತ್ತಿದ್ದ ಬೆಂಗಳೂರಿನ ಯುವಕ ಸಿರಿಯಾದಲ್ಲಿ ಹತ್ಯೆ; ಶ್ರೀಮಂತ ಕುಟುಂಬದವ 7 ವರ್ಷದಿಂದ ಕಣ್ಮರೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts