ಐಸಿಸ್​ ನೇಮಕಕ್ಕೆ ನೆರವಾಗುತ್ತಿದ್ದ ಬೆಂಗಳೂರಿನ ಯುವಕ ಸಿರಿಯಾದಲ್ಲಿ ಹತ್ಯೆ; ಶ್ರೀಮಂತ ಕುಟುಂಬದವ 7 ವರ್ಷದಿಂದ ಕಣ್ಮರೆ…!

ನವದೆಹಲಿ: ಐಸಿಸ್​ಗೆ ಸೇರಿದ್ದನೆನ್ನಲಾದ ಬೆಂಗಳೂರಿನ ಬಿಜಿನೆಸ್​ ಮ್ಯಾನೇಜ್​ಮೆಂಟ್​ ಕಾಲೇಜಿನ ಪದವೀಧರ ಸಿರಿಯಾದಲ್ಲಿ ಹತ್ಯೆಗೀಡಾಗಿದ್ದಾನೆಂದು ಹೇಳಲಾಗಿದೆ. ಬೆಂಗಳೂರಿನ ಶ್ರೀಮಂತ ಕುಟುಂಬದ ಸದಸ್ಯನಾಗಿದ್ದ ಫೈಜ್​ ಮಸೂದ್​ ಎಂಬಾತ ಕಳೆದ ಏಳು ವರ್ಷಗಳಿಂದ ನಾಪತ್ತೆಯಾಗಿದ್ದ. ಈತನಿಗೆ ತಂದೆ- ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಈತನ ಪಾಲಕರು ನಾಪತ್ತೆ ದೂರು ದಾಖಲಿಸಿಲ್ಲ ಎಂದು ಹೇಳಲಾಗಿದೆ. ಐಸಿಸ್​ನೊಂದಿಗೆ ನಂಟು ಹೊಂದಿದ್ದ ಆರೋಪದಲ್ಲಿ ರಾಷ್ಟ್ರೀಯ ಭದ್ರತಾ ದಳದ ಸಿಬ್ಬಂದಿಯಿಂದ ಇತ್ತೀಚೆಗೆ ಬಂಧಿತನಾದ ಬೆಂಗಳೂರಿನ ಬಸವನಗುಡಿಯ ವೈದ್ಯ ಅಬ್ದುರ್​ ರೆಹಮಾನ್​​ ಕೂಡ ಫೈಜ್​ ಮಸೂದ್​ನ ಸಾವನ್ನು … Continue reading ಐಸಿಸ್​ ನೇಮಕಕ್ಕೆ ನೆರವಾಗುತ್ತಿದ್ದ ಬೆಂಗಳೂರಿನ ಯುವಕ ಸಿರಿಯಾದಲ್ಲಿ ಹತ್ಯೆ; ಶ್ರೀಮಂತ ಕುಟುಂಬದವ 7 ವರ್ಷದಿಂದ ಕಣ್ಮರೆ…!