More

    ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೇ ಪತ್ರ ಬರೆದು ಥ್ಯಾಂಕ್ಸ್​ ಹೇಳಿದ 5ನೇ ತರಗತಿ ವಿದ್ಯಾರ್ಥಿನಿ

    ನವದೆಹಲಿ: ಈಕೆ ಜಸ್ಟ್ ಐದನೇ ತರಗತಿಯ ವಿದ್ಯಾರ್ಥಿನಿ. ಆದರೆ ಈ ಹುಡುಗಿ ತನ್ನ ಒಂದು ಧನ್ಯತಾಭಾವದಿಂದ ಇಷ್ಟು ಚಿಕ್ಕ ವಯಸ್ಸಿನಲ್ಲೇ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯವರ ಗಮನ ಸೆಳೆದಿದ್ದಾಳೆ. ಮಾತ್ರವಲ್ಲ ನ್ಯಾಯಮೂರ್ತಿಯವರು ಕೂಡ ಈಕೆಯ ಪತ್ರಕ್ಕೆ ಲಿಖಿತ ರೂಪದಲ್ಲೇ ಉತ್ತರಿಸಿ ಮೆಚ್ಚುಗೆ ಸೂಚಿಸಿದ್ದಾರೆ.

    ಹಾಗೆ ಈಕೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆಯಲು ಮುಖ್ಯ ಕಾರಣ ಸುಪ್ರೀಂಕೋರ್ಟ್​ನ ಒಂದು ಮಹತ್ವದ ಕಾರ್ಯ. ಹೌದು.. ಇತ್ತೀಚೆಗೆ ಕರೊನಾ ಹಾವಳಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಕೋವಿಡ್​-19 ಸೋಂಕಿತರು ಆಮ್ಲಜನಕ ಸಿಗದೆ ಸತ್ತ, ಸಂಕಟಪಟ್ಟ ಸಾಕಷ್ಟು ಪ್ರಕರಣಗಳು ವರದಿಯಾಗಿದ್ದವು. ಇದನ್ನು ಗಮನಿಸಿದ ಸುಪ್ರೀಂಕೋರ್ಟ್ ಎಲ್ಲ ರಾಜ್ಯಗಳಿಗೂ ಸರಿಯಾಗಿ ಆಮ್ಲಜನಕ ಪೂರೈಸಲು ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿತ್ತು. ಪರಿಣಾಮವಾಗಿ ಕರ್ನಾಟಕ-ಕೇರಳವೂ ಸೇರಿ ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಸಿಗುವಂತಾಗಿತ್ತು.

    ಇದನ್ನೂ ಓದಿ: ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು… 

    ಇದೇ ಕಾರಣಕ್ಕೆ ಕೇರಳದ ತ್ರಿಶೂರ್​ ಕೇಂದ್ರೀಯ ವಿದ್ಯಾಲಯದ ಐದನೇ ತರಗತಿ ವಿದ್ಯಾರ್ಥಿನಿ ಲಿಡ್ವಿನಾ ಜೋಸೆಫ್​ ಸುಪ್ರೀಂಕೋರ್ಟ್ ಸಿಜೆ ಎನ್.ವಿ. ರಮಣ ಅವರಿಗೆ ಡ್ರಾಯಿಂಗ್ ಸಹಿತ ಪತ್ರ ಬರೆದು ಮೇಲ್​ ಮೂಲಕ ಕಳಿಸಿ ಥ್ಯಾಂಕ್ಸ್ ಹೇಳಿದ್ದಾಳೆ. ಡಿಯರ್ ಲಿಡ್ವಿನಾ, ಜಡ್ಜ್​ ಕಾರ್ಯನಿರತರಾಗಿರುವ ಡ್ರಾಯಿಂಗ್ ಸಹಿತ ಇರುವ ನಿನ್ನ ಚಂದದ ಪತ್ರ ನನಗೆ ಸಿಕ್ಕಿತು. ನೀನು ಮುಂದೆ ರಾಷ್ಟ್ರನಿರ್ಮಾಣದಲ್ಲಿ ಪರಿಣಾಮಕಾರಿಯಾಗಿ ತೊಡಗಿಕೊಳ್ಳುವ ಜವಾಬ್ದಾರಿಯುತ ಪ್ರಜೆಯಾಗುತ್ತಿ ಎಂದು ಮೆಚ್ಚುಗೆ ಸೂಚಿಸಿರುವ ಸಿಜೆ, ತಮ್ಮ ಹಸ್ತಾಕ್ಷರ ಇರುವ ಸಂವಿಧಾನದ ಪ್ರತಿಯನ್ನು ಕೊಡುಗೆಯಾಗಿ ಕಳುಹಿಸಿಕೊಟ್ಟಿದ್ದಾರೆ.

    ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೇ ಪತ್ರ ಬರೆದು ಥ್ಯಾಂಕ್ಸ್​ ಹೇಳಿದ 5ನೇ ತರಗತಿ ವಿದ್ಯಾರ್ಥಿನಿ
    ವಿದ್ಯಾರ್ಥಿನಿ ಬರೆದಿದ್ದ ಪತ್ರ

    ರಾಜ್ಯದಲ್ಲಿ ಇಳಿಯುತ್ತಿದ್ದ ಸೋಂಕು ಮತ್ತೆ ಏರಿತು!; ಆತಂಕ ಹುಟ್ಟಿಸಿದ ಪಾಸಿಟಿವಿಟಿ ರೇಟ್…

    ಜಾರಕಿಹೊಳಿ ಬ್ಲ್ಯಾಕ್​ಮೇಲ್​ ಆರೋಪಿಗಳಿಗೆ ಸಿಕ್ತು ನಿರೀಕ್ಷಣಾ ಜಾಮೀನು; ನರೇಶ್​, ಶ್ರವಣ್​ ಸದ್ಯ ನಿರಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts