More

    ಶೇ.5 ರಷ್ಟು ಮಾತ್ರ ಮನೆಯಲ್ಲಿ ಮತದಾನ

    ರಬಕವಿ/ಬನಹಟ್ಟಿ: ಲೋಕಸಭೆ ಚುನಾವಣೆಯಲ್ಲಿ ಅಂಗವಿಕಲರು, ಹಿರಿಯ ನಾಗರಿಕರು, ಕೋವಿಡ್-19 ಶಂಕಿತ ಅಥವಾ ಬಾಧಿತ ವ್ಯಕ್ತಿಗಳಿಗೆ ಮನೆಯಲ್ಲೇ ಮತದಾನ ಮಾಡಲು ಆಯೋಗ ಯೋಜನೆ ರೂಪಿಸಿದೆ. ತೇರದಾಳ ವಿಧಾನಸಭೆ ಕ್ಷೇತ್ರದಲ್ಲಿ 4,114 ಅಂಗವಿಕಲರು ಹಾಗೂ 2500 ಜನ 85 ವರ್ಷ ಮೇಲ್ಪಟ್ಟ ವೃದ್ಧರು ಸೇರಿ ಅಂದಾಜು 6,614 ಜನರಿದ್ದಾರೆ.

    ಬಹುತೇಕ ಜನರು ಮನೆಯಲ್ಲಿ ಮತದಾನ ಮಾಡಲು ಆಸಕ್ತಿ ತೋರಿಲ್ಲ. 323 ಜನರು ಅಂದರೆ ಶೇ.5 ರಷ್ಟು ಮಾತ್ರ ಜನರು ಮನೆಯಲ್ಲಿ ಮತದಾನಕ್ಕೆ ಒಪ್ಪಿರುವುದು ಗಮನಾರ್ಹ ಅಂಶ.

    ಲೋಕಸಭಾ ಚುನಾವಣೆಗೆ ಏ.26 ಮತ್ತು 27 ರಂದು 85 ವರ್ಷ ಮೇಲ್ಪಟ್ಟ ವೃದ್ಧರು, ಅಂಗವಿಕಲರು ಹಾಗೂ ಕೋವಿಡ್-19 ಶಂಕಿತ ಅಥವಾ ಬಾಧಿತ ವ್ಯಕ್ತಿಗಳು ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಕ್ಷೇತ್ರಾದ್ಯಂತ ನಡೆಯಲಿದೆ ಎಂದು ಕ್ಷೇತ್ರ ಚುನಾವಣಾಧಿಕಾರಿ ಸಾಜಿದ್ ಮುಲ್ಲಾ ತಿಳಿಸಿದರು.
    ತೇರದಾಳ ವಿಧಾನಸಭೆ ಮತಕ್ಷೇತ್ರದಲ್ಲಿ 12 ಮಾರ್ಗಗಳನ್ನು ಮಾಡಲಾಗಿದೆ. ಮತಗಟ್ಟೆ ಅಧಿಕಾರಿ, ಮೈಕ್ರೋ ಆಬ್ಜರ್ವರ್, ಪೊಲೀಸ್ ಸಿಬ್ಬಂದಿ, ವಿಡಿಯೋಗ್ರಾಫರ್ ಸೇರಿ ನೋಂದಾಯಿತ ಮತದಾರರ ಮನೆಗೆ ತೆರಳಿ ಮತದಾನ ಮಾಡಿಸಲಿದ್ದಾರೆ.

    85 ವರ್ಷ ಮೇಲ್ಪಟ್ಟವರು 206 ಹಾಗೂ ಅಂಗವಿಕಲರು 117 ಜನ ಮತದಾರರಿದ್ದು, ಸೀಮಿತ ಮತದಾರರು ಅಂದಿನ ದಿನ ಮನೆಯಲ್ಲೇ ಇರುವಂತೆ ಮನವಿ ಮಾಡಿದ್ದಾರೆ.

    ಮತದಾರರು ನಿರ್ಲಕ್ಷೃ ವಹಿಸಿ ಮತದಾನ ಮಾಡದಿದ್ದಲ್ಲಿ ಇಂತವರಿಗೆ ಮತಗಟ್ಟೆಯಲ್ಲಿ ಮತದಾನಕ್ಕೆ ಅವಕಾಶವಿಲ್ಲ. ಕಡ್ಡಾಯ ಮತದಾನ ಮಾಡಲು ಸಮಯ ನಿಗದಿಪಡಿಸಿಕೊಳ್ಳಬೇಕು ಎಂದರು.

    ತೇರದಾಳ ಕ್ಷೇತ್ರ ವ್ಯಾಪ್ತಿ ಪುರುಷರು 1,17,962, ಮಹಿಳೆಯರು 1,19,472 ಸೇರಿ ಒಟ್ಟು 2,37,450 ಮತದಾರರಿದ್ದಾರೆ. ಅಕ್ರಮ ತಡೆಗೆ ಈಗಾಗಲೇ 3 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. 236 ಮತಗಟ್ಟೆಗಳಲ್ಲಿ 1,128 ಚುನಾವಣೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಪಿಂಕ್, ಅಂಗವಿಕಲರು, ಯುವ, ಸಾಂಪ್ರದಾಯಿಕ ಹಾಗೂ ಮಾದರಿ ಸೇರಿ ಒಟ್ಟು 9 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 118 ಮತಗಟ್ಟೆಗಳಲ್ಲಿ ನೇರ ಪ್ರಸಾರ ನಡೆಯಲಿದ್ದು, ಇತರ ಮತಗಟ್ಟೆಗಳಲ್ಲಿ ವಿಡಿಯೋ ಹಾಗೂ ಮೈಕ್ರೋ ಆಬ್ಜರ್ವರ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts