More

    ಈ ರಾಜ್ಯಕ್ಕಿದು 5ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ! ಜೇವರ್​ ಏರ್​ಪೋರ್ಟ್​​ಗೆ ಶಿಲಾನ್ಯಾಸ

    ನಾಯ್ಡ: ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮದ ಎದುರಿಗೆ ನಾಯ್ಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಶಿಲಾನ್ಯಾಸವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದರು. ಜೇವರ್​ ವಿಮಾನ ನಿಲ್ದಾಣ ಎಂಬ ಹೆಸರೂ ಹೊಂದಿರುವ ಈ ವಿಮಾನ ನಿಲ್ದಾಣವು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್​​ಸಿಆರ್) ಮತ್ತು ಪಶ್ಚಿಮ ಉತ್ತರ ಪ್ರದೇಶಕ್ಕೆ ಜಾಗತಿಕ ಸಂಪರ್ಕಕೊಂಡಿಯನ್ನು ನಿರ್ಮಿಸುವ ಮಹತ್ವದ ಯೋಜನೆಯಾಗಿದೆ.

    ಸಮುದ್ರ ತೀರದ ಊರುಗಳಲ್ಲಿ ಹೇಗೆ ಬಂದರುಗಳು ವಾಣಿಜ್ಯವಹಿವಾಟುಗಳಿಗೆ ವೇದಿಕೆ ಕಲ್ಪಿಸುತ್ತವೋ, ಹಾಗೇ, ಭೂಪ್ರದೇಶಗಳಿಂದಲೇ ಸುತ್ತುವರಿದಿರುವ ಯುಪಿ ರಾಜ್ಯದ ರೈತರಿಗೆ-ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸಲು ಜೇವರ್​ ವಿಮಾನ ನಿಲ್ದಾಣ ಮಾಧ್ಯಮವಾಗಲಿದೆ ಎಂದ ಪ್ರಧಾನಿ ಮೋದಿ, “20 ವರ್ಷಗಳ ಹಿಂದೆ ವಾಜಪೇಯಿ ಸರ್ಕಾರವಿದ್ದಾಗ ಈ ವಿಮಾನ ನಿಲ್ದಾಣದ ಕನಸು ಹುಟ್ಟಿತ್ತು. ಆದರೆ ನಂತರದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದನ್ನು ಉಪೇಕ್ಷಿಸಿದವು. ಬಿಜೆಪಿಯ ಡಬಲ್​ ಇಂಜಿನ್​ ಸರ್ಕಾರದಿಂದಾಗಿ ಇಂತಹ ಬೃಹತ್​ ಯೋಜನೆ ಈಗ ಕಾರ್ಯರೂಪಕ್ಕೆ ಬರುತ್ತಿದೆ” ಎಂದರು.

    ಇದನ್ನೂ ಓದಿ: ಮಳೆ ಹಾನಿ: ಮನೆ ಬಿದ್ದವರಿಗೆ, ರೈತರಿಗೆ ತಕ್ಷಣ ಪರಿಹಾರ; ನ.26 ರಿಂದ ಎಚ್ಚರಿಕೆ ವಹಿಸಲು ಸೂಚನೆ

    ಈ ಮುಂಚಿನ ಸರ್ಕಾರಗಳು ರಾಜಕೀಯ ಲಾಭಕ್ಕಾಗಿ ಹಲವು ಯೋಜನೆಗಳನ್ನು ಘೋಷಿಸಿಬಿಟ್ಟು, ಅದರ ಅನುಷ್ಠಾನಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳದೆ ಕಾಲ ತಳ್ಳುತ್ತಿದ್ದವು. ಆದರೆ ನಾವು ಈ ನಿಲ್ದಾಣದ ನಿರ್ಮಾಣಕ್ಕೆ ಎಲ್ಲಾ ಅಗತ್ಯ ಕ್ರಮ ತೆಗೆದುಕೊಂಡು ಕೋಟ್ಯಂತರ ರೂಪಾಯಿಗಳ ಹಣ ಒದಗಿಸಿ ನಿರ್ದಿಷ್ಟ ಸಮಯದೊಳಗೆ ಕೆಲಸ ಮುಗಿಸುವ ಬದ್ಧತೆ ತೋರಿದ್ದೇವೆ. ಮೂಲಸೌಕರ್ಯಗಳ ವಿಷಯವನ್ನು ನಾವು ರಾಜನೀತಿಯ ವಿಚಾರವಾಗಿಸಿಲ್ಲ. ಬದಲಿಗೆ ನಮಗದು ದೇಶ ಕಟ್ಟುವ ರಾಷ್ಟ್ರನೀತಿಯ ವಿಚಾರವಾಗಿದೆ. ಅಭಿವೃದ್ಧಿಯ ಪಥದಲ್ಲಿ ನಡೆದಿದ್ದೇವೆ ಎಂದು ಎಂದು ವಿರೋಧ ಪಕ್ಷಗಳ ಕಾಲೆಳೆದರು.

    ಜೇವರ್​ ಏರ್​ಪೋರ್ಟ್​​ ನಿರ್ಮಾಣವು ಪಶ್ಚಿಮ ಉತ್ತರಪ್ರದೇಶದ ಆರ್ಥಿಕ ಪ್ರಗತಿಗೆ ಕಾರಣವಾಗಲಿದ್ದು, ಉದ್ಯೋಗ ಸೃಷ್ಟಿಗೆ ದೊಡ್ಡ ಮಾರ್ಗವಾಗಲಿದೆ ಎಂದ ಮೋದಿ, ಉತ್ತರ ಭಾರತದ ಕೋಟ್ಯಂತರ ಜನರಿಗೆ ಸೇವೆ ಒದಗಿಸಲಿದೆ ಎಂದರು. ನಿಲ್ದಾಣದ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, 2024 ರ ವೇಳೆಗೆ ಅದರು ಕಾರ್ಯಾರಂಭ ಮಾಡುವ ಗುರಿ ಹೊಂದಲಾಗಿದೆ. ಯುಪಿಯಲ್ಲಿ ಈಗಾಗಲೇ 8 ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದ್ದು, ಇದು 5ನೇ ಅಂತರಾಷ್ಟ್ರೀಯ ನಿಲ್ದಾಣವಾಗಲಿದೆ ಎಂದರು.

    ಇದನ್ನೂ ಓದಿ: ಸಿಖ್ಖರ ಬಗ್ಗೆ ನಾಲಿಗೆ ಹರಿಬಿಟ್ಟ ಕಂಗನಾಗೆ ದೆಹಲಿ ಬುಲಾವ್​​

    ಯುಪಿ ಸಿಎಂ ಯೋಗಿ ಆದಿತ್ಯನಾಥ ಮಾತನಾಡಿ, ಈ ನಿಲ್ದಾಣ ಕಾರ್ಯಾರಂಭ ಮಾಡಿದಾಗ ಯುಪಿ ಐದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದ ಏಕೈಕ ರಾಜ್ಯವಾಗಲಿದೆ. ಸುಮಾರು 1.2 ಕೋಟಿ ಪ್ರಯಾಣಿಕರ ಸಾಮರ್ಥ್ಯ ಹೊಂದಲಿರುವ ಈ ನಿಲ್ದಾಣವನ್ನು 1,334 ಹೆಕ್ಟೇರ್​ ಭೂಮಿಯ ಮೇಲೆ ನಿರ್ಮಿಸಲಾಗುವುದು. ಈ ಮಹತ್ವದ ಯೋಜನೆಗಾಗಿ ತಮ್ಮ ಭೂಮಿಯನ್ನು ಕೊಟ್ಟ ರೈತರಿಗೆ ಧನ್ಯವಾದ ಎಂದರು. ಸಮಾರಂಭದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

    ಕತ್ರೀನಾ – ವಿಕಿ ವಿವಾಹಕ್ಕೆ ಸರ್ಕಾರಿ ಮೊಹರು? ಮುಂಬೈನಲ್ಲಿ ಮುಂದಿನ ವಾರ!

    VIDEO| ಬರ್ತ್​ಡೇ ಪಾರ್ಟಿಗೆ ಟ್ರ್ಯಾಕ್ಟರ್​ ಮೇಲೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಪೋರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts