More

    ಬಜೆಟ್: 5ಜಿ ಬಳಸುವ ಆ್ಯಪ್​ ಅಭಿವೃದ್ಧಿಗೆ 100 ಲ್ಯಾಬ್

    ನವದೆಹಲಿ: ಕೇಂದ್ರ ಬಜೆಟ್​ ಈ ಬಾರಿ ಸಂಪೂರ್ಣವಾಗಿ ಪೇಪರ್​ಲೆಸ್​ ಆಗಿದ್ದು ಈಗ ಟೆಕ್ನಾಲಜಿ ಮೇಲೆ ಸರ್ಕಾರ ಹೆಚ್ಚಿನ ಗಮನ ಹರಿಸಲು ಶುರು ಮಾಡಿದೆ. 5ಜಿ ನೆಟ್ವರ್ಕ್​ ಬಂದ ಮೇಲಂತೂ ಇದನ್ನು ಬಳಸಲು ಸರ್ಕಾರ ತುಂಬಾ ಉತ್ಸುಕವಾಗಿದೆ.

    ಈಗಾಗಲೇ ದೇಶಾದ್ಯಂತ ಒಂದಷ್ಟು ಪ್ರಮುಖ ನಗರಗಳಲ್ಲಿ 5ಜಿಯನ್ನು ಶುರು ಮಾಡಲಾಗಿದೆ. ಈಗ ಈ ಟೆಕ್ನಾಲಜಿಯನ್ನು ಇನ್ನಷ್ಟು ಉನ್ನತೀಕರಿಸಲು 5ಜಿಯ ವೇಗದಲ್ಲೇ ಕಾರ್ಯನಿರ್ವಹಿಸಲು ಸಶಕ್ತ ಆ್ಯಪ್​ಗಳ ಅಭಿವೃದ್ಧಿಗೆ ಸರ್ಕಾರ ಪ್ರೋತ್ಸಾಹ ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಒಟ್ಟು 100 ಲ್ಯಾಬ್​ಗಳನ್ನು ಅಭಿವೃದ್ಧಿಪಡಿಸಲಿದೆ.

    ಇವುಗಳನ್ನು ದೇಶದ ಪ್ರಮುಖ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸ್ಥಾಪಿಸಲಾಗುತ್ತದೆ. ಇದರಿಂದಾಗಿ ಸ್ಮಾರ್ಟ್​ ಕ್ಲಾಸ್​ರೂಮ್​, ಪರಿಸಿಶನ್​ ಫ್ರೇಮಿಂಗ್​, ಟ್ರಾನ್ಸ್​ಪೋರ್ಟ್​ ಸಿಸ್ಟಮ್​ ಮುಂತಾದವುಗಳನ್ನು ಅಭಿವೃದ್ಧಿಪಡಸಿಸಲು ಉದ್ದೇಶಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts