More

    ಕರಾವಳಿಯಲ್ಲಿ 530 ಮಂದಿ ಪಾಸಿಟಿವ್

    ಮಂಗಳೂರು/ಉಡುಪಿ: ದ.ಕ ಜಿಲ್ಲೆಯಲ್ಲಿ ಭಾನುವಾರ 3 ಸಾವು ಸೇರಿದಂತೆ 404 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿವೆ.
    ಇದರಲ್ಲಿ 241 ಲಕ್ಷಣ ಸಹಿತ ಹಾಗೂ 163 ಲಕ್ಷಣ ರಹಿತ. 192 ಮಂದಿ ಐಎಲ್‌ಐ ಲಕ್ಷಣ ಇರುವವರು, 20 ಮಂದಿ ತೀವ್ರ ಉಸಿರಾಟ ಸಮಸ್ಯೆ ಇರುವವರು, ನೇರ ಸಂಪರ್ಕ ಇದ್ದ 111 ಮಂದಿ ಹಾಗೂ 81 ಮಂದಿ ಸೋಂಕಿನ ಮೂಲ ತಿಳಿಯದವರು ಇದರಲ್ಲಿ ಸೇರಿದ್ದಾರೆ. ಅತ್ಯಧಿಕ 212 ಮಂದಿ ಮಂಗಳೂರಿನವರಾಗಿದ್ದು 60 ಬೆಳ್ತಂಗಡಿ, 46 ಪುತ್ತೂರು, 27 ಸುಳ್ಯ, 39 ಬೆಳ್ತಂಗಡಿ, 20 ಇತರ ಜಿಲ್ಲೆಯವರು ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು ಕರೊನಾ ಪಾಸಿಟಿವ್ ಪ್ರಕರಣಗಳು 17,363ಕ್ಕೇರಿದ್ದು ಸಕ್ರಿಯ ಪ್ರಕರಣಗಳು ಮತ್ತೆ ಏರುಗತಿ ಕಂಡು 3934 ತಲಪಿವೆ. ಮೃತರ ಒಟ್ಟು ಸಂಖ್ಯೆ 442. ಭಾನುವಾರ 174 ಮಂದಿ ರೋಗಮುಕ್ತರಾಗಿದ್ದು, ಡಿಸ್‌ಚಾರ್ಜ್ ಆದವರ ಒಟ್ಟು ಸಂಖ್ಯೆ 12987.
    ಉಡುಪಿ ಜಿಲ್ಲೆಯಲ್ಲಿ ಭಾನುವಾರ 126 ಮಂದಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದ್ದು, 2,039 ಮಂದಿಯ ವರದಿ ನೆಗೆಟಿವ್ ಬಂದಿದೆ. 305 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ. ಉಡುಪಿಯಲ್ಲಿ 53 ಮಂದಿ, ಕುಂದಾಪುರದಲ್ಲಿ 47 ಮಂದಿ, ಕಾರ್ಕಳದಲ್ಲಿ 20 ಮಂದಿ, ಹೊರ ಜಿಲ್ಲೆಯ 6 ಮಂದಿಗೆ ಸೋಂಕು ತಗುಲಿದೆ. ಇದರಲ್ಲಿ 69 ಮಂದಿ ರೋಗ ಲಕ್ಷಣ ಹೊಂದಿದ್ದು, 57 ಮಂದಿಯಲ್ಲಿ ಲಕ್ಷಣಗಳಿಲ್ಲ. ಕೋವಿಡ್ ಕೇರ್ ಸೆಂಟರ್‌ನಲ್ಲಿ 46 ಮಂದಿಗೆ, ಹೋಂ ಐಸೋಲೇಶನ್‌ನಲ್ಲಿ 80 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    2019 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 50 ಮಂದಿ ಆಸ್ಪತ್ರೆಗಳಿಂದ, 104 ಮಂದಿ ಹೋಂ ಐಸೋಲೇಶನ್‌ನಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1732 ಸಕ್ರಿಯ ಪ್ರಕರಣಗಳಿದ್ದು, 778 ಆಸ್ಪತ್ರೆಯಲ್ಲಿ, 954 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಾಸರಗೋಡಿನ 124 ಮಂದಿಗೆ ಸೋಂಕು
    ಕಾಸರಗೋಡು: ಜಿಲ್ಲೆಯ 124 ಮಂದಿ ಸಹಿತ ರಾಜ್ಯದಲ್ಲಿ ಭಾನುವಾರ 3139 ಮಂದಿಗೆ ಕೋವಿಡ್-19 ರೋಗ ಬಾಧಿಸಿದೆ. ಕಾಸರಗೋಡಿನ 178 ಮಂದಿ ಒಳಗೊಂಡಂತೆ ರಾಜ್ಯದಲ್ಲಿ ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದ 1855 ಮಂದಿ ಭಾನುವಾರ ಗುಣವಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts