More

    52 ವೈದ್ಯಕೀಯ ಸೀಟುಗಳಿಗೆ ಎನ್​ಎಂಸಿ ಅನುಮತಿ

    ಕಾರವಾರ: ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜ್​ಗೆ 15 ವಿಭಾಗಗಳಲ್ಲಿ ಒಟ್ಟು 52 ವೈದ್ಯಕೀಯ ಸೀಟುಗಳಿಗೆ ರಾಷ್ಟ್ರೀಯ ವೈದ್ಯಕೀಯ ಪರಿಷತ್(ಎನ್​ಎಂಸಿ) ಅನುಮತಿ ನೀಡಿದೆ. ಇತ್ತೀಚಿನ 15 ವರ್ಷಗಳಲ್ಲಿ ಪ್ರಾರಂಭವಾದ ಸರ್ಕಾರಿ ವೈದ್ಯಕೀಯ ಕಾಲೇಜೊಂದಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ನಾತಕೋತ್ತರ ಸೀಟುಗಳು ಲಭಿಸಿರುವುದು ಇದೇ ಮೊದಲು ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ. ಸುಜಾತಾ ಶ್ಲಾಘಿಸಿದ್ದಾರೆ.

    ಎಂಸಿಸಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 52 ಎಂಬಿಬಿಎಸ್ ಪದವಿ ಪಡೆದ ವೈದ್ಯರು ಸರ್ಕಾರಿ ಕೋಟಾದಡಿ 3 ವರ್ಷ ಕ್ರಿಮ್ಸ್​ನಲ್ಲಿ ಸೇವೆ ಸಲ್ಲಿಸುತ್ತ, ಸ್ನಾತಕೋತ್ತರ ಶಿಕ್ಷಣ ಪಡೆಯುವರು. 3 ವರ್ಷ ಸೇವೆಯ ಜತೆ ಪ್ರಬಂಧ ಮಂಡಿಸಿ, ಒಂದು ವರ್ಷದ ಸೀನಿಯರ್ ರೆಸಿಡೆನ್ಸ್ ಕಡ್ಡಾಯ ಸೇವೆ ಸಲ್ಲಿಸಿದ ನಂತರ ಅವರಿಗೆ ಪದವಿ ಪ್ರದಾನ ಮಾಡಲಾಗುವುದು.

    ಅವರಿಗೆ ಮೊದಲ ವರ್ಷ 45 ಸಾವಿರ, ಎರಡನೇ ವರ್ಷ 50 ಸಾವಿರ ಹಾಗೂ ಮೂರನೇ ವರ್ಷ 55 ಸಾವಿರ ವಿದ್ಯಾರ್ಥಿವೇತನ ನೀಡಲಾಗುವುದು.

    ಜನರಲ್ ಮೆಡಿಸಿನ್, ಅರವಳಿಕೆ, ಪ್ರಸೂತಿ ಮತ್ತು ಸ್ತ್ರೀ ರೋಗ, ಶಸ್ತ್ರ ಚಿಕಿತ್ಸೆ, ಎಲುಬು ಮತ್ತು ಕೀಲು, ಔಷಧ ವಿಜ್ಞಾನ ಶಾಸ್ತ್ರ ವಿಭಾಗಗಳಿಗೆ ತಲಾ 3, ಚಿಕ್ಕ ಮಕ್ಕಳ ವಿಭಾಗ, ಕಿವಿ-ಮೂಗು-ಗಂಟಲು, ರೋಗ ಲಕ್ಷಣ ಶಾಸ್ತ್ರ, ಸಮುದಾಯ ವೈದ್ಯಶಾಸ್ತ್ರ ವಿಭಾಗಗಳಲ್ಲಿ ತಲಾ-2, ಅಂಗರಚನಾ ಶಾಸ್ತ್ರ , ಜೀವ ರಸಾಯನ ಶಾಸ್ತ್ರ, ನ್ಯಾಯ ವೈದ್ಯಶಾಸ್ತ್ರ, ಶರೀರ ಕ್ರಿಯಾ ಶಾಸ್ತ್ರ, ಮಿಣಿ ಜೀವಶಾಸ್ತ್ರ ವಿಭಾಗಗಳಿಗೆ ತಲಾ 5 ಸೀಟುಗಳನ್ನು ನೀಡಲಾಗಿದೆ ಎಂದು ಕ್ರಿಮ್್ಸ ಡೀನ್ ಡಾ. ಗಜಾನನ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts