More

    ಮಾರುಕಟ್ಟೆ ಪ್ರದೇಶದಲ್ಲಿ ಬೆಂಕಿ; 50ಕ್ಕೂ ಹೆಚ್ಚು ಅಂಗಡಿಗಳು ಭಸ್ಮ

    ಆಸ್ಸಾಂನ ಪಶ್ಚಿಮ ಕಾರ್ಬಿ ಆಂಗ್ಲಾಂಗ್​​ನಲ್ಲಿರು ಮಾರುಕಟ್ಟೆ ಪ್ರದೇಶದಲ್ಲಿ ಬೆಂಕಿ ಅವಘಡ ನಡೆದಿದೆ.
    ಖೆರೋನಿ ಬಝಾರ್​ನಲ್ಲಿರುವ ಸುಮಾರು 50 ಅಂಗಡಿಗಳು ಬೆಂಕಿಗೆ ಆಹುತಿಯಾಗಿ, 1 ಕೋಟಿ ರೂಪಾಯಿ ನಷ್ಟವುಂಟಾಗಿದೆ. ಕೆಲವು ಉದ್ಯಮ ಮಳಿಗೆಗಳೂ ಸಂಪೂರ್ಣ ನಾಶವಾಗಿವೆ.

    ಬೆಂಕಿ ಅವಘಡದಲ್ಲಿ ಯಾರೂ ಸಾವನ್ನಪ್ಪಿದ ಬಗ್ಗೆ ವರದಿಯಾಗಿಲ್ಲ.  ಮೊದಲು ಬೆಂಕಿ ಕಾಣಿಸಿಕೊಂಡಿದ್ದು ಕಿರಾಣಿ ಅಂಗಡಿಯೊಂದರಲ್ಲಿ. ನಂತರ ಅದರ ಅಕ್ಕಪಕ್ಕದಲ್ಲಿದ್ದ ವ್ಯಾಪಾರಿ ಮಳಿಗೆಗಳು, ಉಳಿದ ಅಂಗಡಿಗಳಿಗೂ ಪಸರಿಸಿ, ಅನಾಹುತವಾಗಿದೆ. ಇದನ್ನೂ ಓದಿ: ಹದಿಮೂರರ ಬಾಲಕಿ ಮೇಲೆ ಅತ್ಯಾಚಾರ ನಡೆಸುತ್ತಿದ್ದವನ ಕಾವಲಿಗೆ ನಿಂತಿದ್ದ ದುರುಳ

    ಬೆಂಕಿಯನ್ನು ನೋಡಿದ ಸ್ಥಳೀಯರು ಅದನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಅಷ್ಟೇ ಅಲ್ಲ, ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರಿಗೂ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗೆ ಈ ಬೆಂಕಿ ನಂದಿಸಲು ಹಲವು ತಾಸುಗಳೇ ಬೇಕಾಯಿತು.
    ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಬೆಂಕಿ ಹೊತ್ತಿದ್ದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಮಹಿಳೆಯರ ಮದುವೆ ವಯಸ್ಸು ಹದಿನೆಂಟಲ್ಲ..! ಕನಿಷ್ಠ ಪ್ರಾಯ ಹೆಚ್ಚಳದ ಸುಳಿವು ನೀಡಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts