More

    ಮತ್ತೊಮ್ಮೆ ಕಂಪ್ಲೀಟ್ ಲಾಕ್​ಡೌನ್​ನತ್ತ ಹೊರಳುತ್ತಿದೆ ಈ ರಾಜ್ಯ

    ಮುಂಬೈ: ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಮಹಾರಾಷ್ಟ್ರ ಸರ್ಕಾರ ಇಂದು ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

    ಶಾಲಾ ಕಾಲೇಜುಗಳನ್ನು ಈಗಾಗಲೇ ಬಂದ್ ಮಾಡಿರುವ ಅಲ್ಲಿನ ಸರ್ಕಾರ, ಚಿತ್ರಮಂದಿರ, ಆಡಿಟೋರಿಯಮ್​ಗಳು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಶೇ 50 ರಷ್ಟು ಜನಕ್ಕೆ ಮಾತ್ರ ಪ್ರವೇಶ ಕಲ್ಪಿಸುವ ಆದೇಶ ನೀಡಿದೆ. ಮಾರ್ಚ್ 31 ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಆರೋಗ್ಯ ಹಾಗೂ ತುರ್ತು ಸೇವೆಗೆ ಇದರಲ್ಲಿ ವಿನಾಯಿತಿ ಇದೆ.

    ಇದನ್ನೂ ಓದಿ: ಸಿಎಂ ಸಾಹೇಬ್ರೆ… ಹೊಗಳುಭಟ್ಟರ ಕಾಲ ಹೋಯ್ತು… ನಿಮ್​ ಸುತ್ತಲೂ ಇರೋ ಬ್ಯಾಂಡ್​ಸೆಟ್​ನವ್ರನ್ನ ನಿಯಂತ್ರಿಸಿ…

    ಗುರುವಾರದ ಒಂದೇ ದಿನ ಮಹಾರಾಷ್ಟ್ರದಲ್ಲಿ 25,833 ಹೊಸ ಸೋಂಕಿತ ಪ್ರಕರಣಗಳು ಕಂಡು ಬಂದಿದ್ದು, ರಾಜ್ಯ ಸಂಪೂರ್ಣ ಲಾಕ್​ಡೌನ್​​ನತ್ತ ಹೊರಳಲಿದೆಯೇ ಎಂಬುದನ್ನು ಇದು ಬಲವಾಗಿ ಸೂಚಿಸುತ್ತದೆ.

    ಈಗಾಗಲೇ ಕೇಂದ್ರ ಸರ್ಕಾರ ಕರೊನಾವೈರಸ್​ನ ಎರಡನೇ ಅಲೆ ಮಹಾರಾಷ್ಟ್ರದಲ್ಲಿ ಕಂಡು ಬಂದಿದೆ ಎಂದು ಹೇಳಿರುವುದರಿಂದ ಜನರು ಸುರಕ್ಷತಾ ಕ್ರಮಗಳನ್ನು ಪಾಲಿಸದಿದ್ದರೇ ಲಾಕ್​ಡೌನ್ ಜಾರಿಗೊಳಿಸಲಾಗುವುದು ಎಂಬ ಎಚ್ಚರಿಕೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿದ್ದಾರೆ.

    ಕೆಲಸಕ್ಕೆ ರಾಜೀನಾಮೆ ನೀಡಿ ‘ಅಡಲ್ಟ್​ ಸ್ಟಾರ್’​ ಆದ ಮಾಜಿ ಪೊಲೀಸ್​ ಅಧಿಕಾರಿ: ಕಾರಣ ಕೇಳಿದ್ರೆ ಬೆರಗಾಗ್ತಿರಾ!

    ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಮಹಿಳಾ ಸಿಬ್ಬಂದಿಗಳಿಬ್ಬರ ಭರ್ಜರಿ ಎಣ್ಣೆ ಪಾರ್ಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts