More

    50 ಸೆಲೆಬ್ರಿಟಿಗಳು ಏಕಕಾಲಕ್ಕೆ ಬಿಡುಗಡೆ ಮಾಡಿದರು ‘ಕೆಟಿಎಂ’ ಚಿತ್ರದ ಟೀಸರ್ …

    ಬೆಂಗಳೂರು: ಒಂದು ಚಿತ್ರದ ಟೀಸರ್​ ಅಥವಾ ಹಾಡಾನ್ನು ನಾಲ್ಕಾರು ಸೆಲೆಬ್ರಿಟಿಗಳು ಒಟ್ಟಿಗೆ ಬಿಡುಗಡೆ ಮಾಡುವುದು ಹೊಸ ವಿಷಯವೇನಲ್ಲ. ಆದರೆ, ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಟನೆಯ ‘ಕೆಟಿಎಂ’ ಸಿನಿಮಾ ಈ ವಿಷಯದಲ್ಲಿ ಹೊಸ ದಾಖಲೆ ಮಾಡಿದೆ. ಈ ಚಿತ್ರದ ಟೀಸರ್​ನ್ನು 50 ಸೆಲೆಬ್ರಿಟಿಗಳು ಬಿಡುಗಡೆ ಮಾಡಿದ್ದಾರೆ.

    ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ‘ವಿರಾಟಪುರ ವಿರಾಗಿ’ ಚಿತ್ರದ 75 ಸಾವಿರ ಟಿಕೆಟ್​ಗಳ ಮಾರಾಟ

    ಈ ಹಿಂದೆ, ‘ಅಥರ್ವ’ ನಿರ್ದೇಶಿಸಿದ್ದ ಅರುಣ್, ಈಗ ಸದ್ದಿಲ್ಲದೆ ‘ಕೆಟಿಎಂ’ ಎಂಬ ಹೊಸ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಟೀಸರ್​ ಇದೀಗ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದ್ದು, ವಿಕ್ರಮ್ ರವಿಚಂದ್ರನ್, ಶೃತಿ ಹರಿಹರನ್, ವಿಜಯ್​ ರಾಘವೇಂದ್ರ, ದೀಪಿಕಾ ದಾಸ್, ಅನುಪಮಾ ಗೌಡ, ನವೀನ್ ಶಂಕರ್, ಮೇಘಾ ಶೆಟ್ಟಿ, ಸಿದ್ದು ಮೂಲಿಮನಿ, ಖುಷಿ ರವಿ, ಇಶಾನ್, ಶೈನ್ ಶೆಟ್ಟಿ ಸೇರಿದಂತೆ 50 ಸೆಲೆಬ್ರೆಟಿಗಳು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ನವಿರಾದ ಪ್ರೇಮಕಥೆ ಇರುವ ಈ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಾಯಕ ನಟನಾಗಿ ನಟಿಸಿದ್ದು, ನಾಲ್ಕು ಶೇಡ್ ನಲ್ಲಿ ತೆರೆ ಮೇಲೆ ಕಾಣಸಿಗಲಿದ್ದಾರೆ. ಕಾಜಲ್ ಕುಂದರ್ ಹಾಗೂ ಸಂಜನಾ ದಾಸ್​ ಚಿತ್ರದಲ್ಲಿ ನಾಯಕಿಯರಾಗಿ ತೆರೆ ಹಂಚಿಕೊಂಡಿದ್ದಾರೆ. ಉಷಾ ಭಂಡಾರಿ, ಪ್ರಕಾಶ್ ತುಮ್ಮಿನಾಡು, ರಘು ರಮಣಕೊಪ್ಪ, ಬಾಬು ಹಿರಿಯಣಯ್ಯ, ದೇವ್ ದೇವಯ್ಯ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    ಇದನ್ನೂ ಓದಿ: ‘ಎಲ್ಲಿದ್ದೆ ಇಲ್ಲಿ ತನಕ’ ನಿರ್ದೇಶಕರ ಹೊಸ ಚಿತ್ರದಲ್ಲಿ ಶಿವರಾಜಕುಮಾರ್​

    ‘ಕೆಟಿಎಂ’ ಚಿತ್ರವನ್ನು ಮಹಾಸಿಂಹ ಮೂವೀಸ್​ ಬ್ಯಾನರ್​ನಡಿ ವಿನಯ್​ ಕುಮಾರ್​ ಮತ್ತು ರಕ್ಷಯ್​ ಜತೆಯಾಗಿ ನಿರ್ಮಿಸಿದ್ದು, ನವೀನ್​ ಕುಮಾರ್​ ಚಲ್ಲ ಛಾಯಾಗ್ರಹಣ ಮತ್ತು ಚೇತನ್​ ರಾವ್​ ಅವರ ಸಂಗೀತವಿದೆ. ಸದ್ಯ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು, ಕೆಲವೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.

    ಕೆವಿಎನ್​ ಪ್ರೊಡಕ್ಷನ್ಸ್​ಗೆ ಯಶ್​ ಮುಂದಿನ ಚಿತ್ರ ಕನ್ಫರ್ಮ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts