More

    ಅಪ್ರಮಾಣಿಕರಿಂದ 5 ವರ್ಷದ ಪ್ರಾಮಾಣಿಕ ಬಾಲಕನಿಗೆ ವಂಚನೆ!

    ನವದೆಹಲಿ: ಅದು ಇಂಗ್ಲೆಂಡ್​ನ ರಮಣೀಯ ಮಲ್ವರೆನ್​ ಬೆಟ್ಟದ ತಪ್ಪಲಿನಲ್ಲಿರುವ ಊರು. ಹೆಸರು ವೋರಸೆಸ್ಟೈರ್​. ಇಂಥ ಊರಿನಲ್ಲಿ 5 ವರ್ಷದ ಪೋರ ಹ್ಯಾರಿ ಕ್ಲಾರಿ ಎಂಬಾತ ಹಾನೆಸ್ಟಿ ಶಾಪ್​ (ಪ್ರಾಮಾಣಿಕತೆಯ ಅಂಗಡಿ) ತೆರೆದಿದ್ದ. ಬಾಲಕನಿಗೆ ಹಣ ಮಾಡುವುದಕ್ಕಿಂತಲೂ ಹೆಚ್ಚಿನದಾಗಿ ತನ್ನ ಊರಿನವರಿಗೆ ಅವರಿಗೆ ಸರಿಯೆನಿಸಿದ ಬೆಲೆಯಲ್ಲಿ ಸೋಪು, ಲಿಪ್​ಬಾಮ್​, ಮೊಟ್ಟೆಗಳು ಮತ್ತು ಕುರಿಯ ಹಾಲು ಸುಲಭವಾಗಿ ಸಿಗುವಂತೆ ಮಾಡುತ್ತಿದ್ದ.

    ಅಂದರೆ, ಬಾಲಕ ಬೆಳಗ್ಗೆ ಶಾಲೆಗೆ ಹೋಗುವ ಮುನ್ನ ತನ್ನ ಅಮ್ಮನೇ ತಯಾರಿಸುತ್ತಿದ್ದ ಸೋಪು, ಲಿಪ್​ಬಾಮ್​, ಕುರಿಯ ಹಾಲು ಮತ್ತು ಮೊಟ್ಟೆಗಳನ್ನು ಮನೆಯ ಹೊರಗೆ ಟೇಬಲ್​ ಮೇಲೆ ಒಪ್ಪ ಓರಣವಾಗಿ ಜೋಡಿಸುತ್ತಿದ್ದ. ಅವುಗಳ ಜತೆಗೆ ರೇಟ್​ಕಾರ್ಡ್​ ಅನ್ನೂ ಇಡುತ್ತಿದ್ದ. ಟೇಬಲ್​ನ ತುದಿಗೆ ಹಣದ ಡಬ್ಬಿಯನ್ನೂ ಕಟ್ಟಿರುತ್ತಿದ್ದ. ಈ ಟೇಬಲ್​ ಮೇಲಿರುವ ವಸ್ತುಗಳು ಬೇಕೆಂದವರು ರೇಟ್​ಕಾರ್ಡ್​ನಲ್ಲಿ ನಮೂದಿಸಿರುವ ಬೆಲೆಯನ್ನು ನೋಡಿ, ತಮಗೆ ಸರಿಯೆಂದು ತೋಚಿದ ಮೊತ್ತವನ್ನು ಹಣದ ಡಬ್ಬಿಯೊಳಗೆ ಹಾಕಿ ಕೊಂಡೊಯ್ಯಬಹುದಿತ್ತು.

    ಅದೊಂದು ದಿನ ಅಪರಿಚಿತರೊಬ್ಬರು ಟೇಬಲ್​ ಮೇಲಿದ್ದ ವಸ್ತುಗಳಲ್ಲದೆ, ಹಣದ ಡಬ್ಬಿಯನ್ನೂ ಕದ್ದು ಪರಾರಿಯಾಗಿದ್ದಾರೆ. ಶಾಲೆಯಿಂದ ಮರಳಿದ ಬಾಲಕನಿಗೆ ಇದನ್ನು ಕಂಡು ತುಂಬಾ ದುಃಖವಾಗಿದೆ. ಈತನ ದುಃಖವನ್ನು ಗಮನಿಸಿದ ಪಕ್ಕದ ಮನೆಯ ನಿವಾಸಿ ಹರಾಜು ಮಾಡುವ ಕೆಲಸದಲ್ಲಿರುವ ಫಿಲಿಪ್​ ಸೆರೆಲ್​ ಎಂಬುವರು ಟ್ವೀಟ್​ ಮಾಡಿ, ಹ್ಯಾರಿ ಎಂಬ 5 ವರ್ಷದ ಪುಟ್ಟ ಬಾಲಕ ನನ್ನ ಸೇಲ್​ರೂಂ ಬಳಿ ಹಾನೆಸ್ಟಿ ಶಾಪ್​ ತೆಗೆದಿದ್ದ. ಯಾರೋ ಅಪರಿಚಿತರು ಹಾನೆಸ್ಟಿ ಶಾಪ್​ನಲ್ಲಿದ್ದ ವಸ್ತುಗಳ ಜತೆಗೆ ಹಣದ ಡಬ್ಬಿಯನ್ನೂ ದೋಚಿಕೊಂಡು ಪರಾರಿಯಾಗಿದ್ದಾರೆ. ಅದನ್ನು ಮರಳಿಸಲು ಅವರಿಗೆ ಸಂಕೋಚ, ಮುಜುಗರ ಆಗುತ್ತಿರಬಹುದು. ಅದು ಇಲ್ಲವಾದರೆ, ಕನಿಷ್ಠ ಈ ಟ್ವೀಟ್​ ಅನ್ನು ಓದಿದ ಬಳಿಕ ಪಶ್ಚಾತ್ತಾಪವಾಗಿ ಒಂದೆರಡು ರಾತ್ರಿಯ ನಿದ್ದೆಯನ್ನಾದರೂ ಕಳೆದುಕೊಳ್ಳಲಿ ಎಂಬ ಸಂದೇಶ ಪ್ರಕಟಿಸಿದ್ದರು.

    ಇದನ್ನೂ ಓದಿ: ಕೊಡಲಿಯಿಂದ ಕೊಚ್ಚಿ ಕೊಲೆಗೈದ, ಆ ತಲೆ ಹಿಡಿದುಕೊಂಡು ಬಂದು ಪೊಲೀಸರಿಗೆ ಶರಣಾದ

    ಆ ಡಬ್ಬದಲ್ಲಿ ಹೆಚ್ಚೆಂದರೆ 40 ಪೌಂಡ್​ (3,769 ರೂ.) ಸಂಗ್ರಹವಾಗಿದ್ದಿರಬಹುದು. ಆ ಮೊತ್ತ ದೊಡ್ಡದೇನಲ್ಲದಿದ್ದರೂ, 5 ವರ್ಷದ ಬಾಲಕನಿಂದ ಅಷ್ಟೊಂದು ಹಣ ಕದ್ದು ಆತನ ಮನಸ್ಸಿಗೆ ನೋವುಂಟು ಮಾಡುವುದು ತರವಲ್ಲ ಎಂದು ಸಂದೇಶವನ್ನು ಮುಗಿಸಿದ್ದರು.

    ಸೆರೆಲ್​ ಅವರ ಈ ಟ್ವೀಟ್​ ಸಂದೇಶ ನೆಟ್ಟಿಗರ ಗಮನಸೆಳೆದಿದೆ. ಕ್ಷಣಾರ್ಧದಲ್ಲಿ ಸಹಸ್ರಾರು ನೆಟ್ಟಿಗರು ಇದಕ್ಕೆ ಸ್ಪಂದಿಸಿ, ಪ್ರಾಮಾಣಿಕತೆಯೇ ನಶಿಸುತ್ತಿರುವ ಇಂದಿನ ಜಗತ್ತಿನಲ್ಲಿ ಪುಟ ಬಾಲಕನೊಬ್ಬ ಪ್ರಾಮಾಣಿಕತೆಯನ್ನು ಜಗತ್ತಿಗೆ ಕಲಿಸುವ ನಿಟ್ಟಿನಲ್ಲಿ ಪುಟ್ಟ ಹೆಜ್ಜೆಯನ್ನಿಡುತ್ತಿದ್ದ. ಇಂಥದ್ದರಲ್ಲಿ ಪಾಪಾತ್ಮರು ಆತನ ಹಣ ಮತ್ತು ವಸ್ತುವನ್ನು ದೋಚುವ ದುಸ್ಸಾಹಸ ಮಾಡಿದ್ದಾರೆ. ಅವರಿಗೆ ದೇವರು ತಕ್ಕ ಶಾಸ್ತಿ ಮಾಡಲಿ. ಪ್ರಮಾಣಿಕತೆಯ ಪಾಠವನ್ನು ಮುಂದುವರಿಸಲು ಬಾಲಕನಿಗೆ ಏನು ಬೇಕಾದರೂ ಸಹಾಯ ಮಾಡುವುದಾಗಿ ಸಂದೇಶ ರವಾನಿಸಿದ್ದಾರೆ.

    ಯಾರೋ ದುಷ್ಕರ್ಮಿಗಳು ಹೀಗೆ ಮಾಡಿದರು ಎಂದು ಹ್ಯಾರಿ ಎದೆಗುಂದುವುದು ಬೇಡ. ಆತ ಮತ್ತೊಮ್ಮೆ ಹಾನೆಸ್ಟಿ ಶಾಪ್​ ಅನ್ನು ಆರಂಭಿಸಲು. ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಡುತ್ತೇವೆ ಮತ್ತು ಸಹಕರಿಸುತ್ತೇವೆ ಎಂದು ಇನ್ನೊಂದಷ್ಟು ಜನರು ಭರವಸೆ ನೀಡಿದ್ದಾರೆ.
    ಇದೀಗ ಆ ಪುಟ್ಟ ಬಾಲಕ ಮತ್ತೊಮ್ಮೆ ತನ್ನ ಹಾನೆಸ್ಟಿ ಶಾಪ್​ ತೆಗೆದಿದ್ದಾನೆ. ತನ್ನ ಅಮ್ಮ ತಯಾರಿಸುವ ವಸ್ತುಗಳನ್ನು ಅಂಗಡಿಯಲ್ಲಿಟ್ಟಿದ್ದಾನೆ. ಈಗ ಹಿಂದಿಗಿಂತಲೂ ಹೆಚ್ಚಿನ ವ್ಯಾಪಾರ ಆಗುತ್ತಿದೆ ಎನ್ನಲಾಗಿದೆ.

    ಜರ್ಮನಿ, ಜಪಾನ್‌ನಿಂದಲೇ ಬಂದಿದೆ ನೋಡಿ ಡ್ರೋನ್‌ ಪ್ರತಾಪ್‌ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts