More

    ಮತ್ತೊಂದು ದುರಂತ: ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದ ಲಾರಿ ಪಲ್ಟಿ, 5 ಮಂದಿ ಸಾವು

    ನರಸಿಂಗ್​ಪುರ: ಈಗೆರಡು ದಿನಗಳ ಹಿಂದೆ ಹಳಿ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್​ ರೈಲು ಹರಿದು 16 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು. ಅವರೆಲ್ಲರೂ ಮಧ್ಯಪ್ರದೇಶದವರು ಆಗಿದ್ದರು.

    ಇದನ್ನೂ ಓದಿ: ಊರಿಗೆ ಹೋಗುವ ಧಾವಂತ- ಅಪಘಾತಗಳಿಗೆ ಜೀವಕೊಟ್ಟ ವಲಸೆ ಕಾರ್ಮಿಕರು!

    ಈಗ ಮತ್ತೊಂದು ಅಂಥದ್ದೇ ದುರಂತ ಮಧ್ಯಪ್ರದೇಶದಲ್ಲಿ ಸಂಭವಿಸಿದೆ. ವಲಸೆ ಕಾರ್ಮಿಕರು ಪ್ರಯಾಣ ಮಾಡುತ್ತಿದ್ದ ಟ್ರಕ್​ ಪಲ್ಟಿಯಾಗಿ ಐವರು ಕಾರ್ಮಿಕರು ಮೃತಪಟ್ಟಿದ್ದು, 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಭೋಪಾಲ್​ನಿಂದ 200 ಕಿ.ಮೀ.ದೂರದಲ್ಲಿರುವ ನರಸಿಂಗ್​ಪುರದಲ್ಲಿ ಈ ದುರ್ಘಟನೆ ನಡೆದಿದೆ. ಹೈದರಾಬಾದ್​​ನಿಂದ 20 ವಲಸೆ ಕಾರ್ಮಿಕರು ಲಾರಿಯಲ್ಲಿ ಮಧ್ಯಪ್ರದೇಶದ ಝಾನ್ಸಿಗೆ ತೆರಳುತ್ತಿದ್ದರು. ಇದು ಮಾವಿನ ಹಣ್ಣನ್ನು ತುಂಬಿಕೊಂಡ ಲಾರಿಯಾಗಿದ್ದು, ಹೈದರಾಬಾದ್​ನಿಂದ ಉತ್ತರ ಪ್ರದೇಶಕ್ಕೆ ಹೋಗುತ್ತಿತ್ತು.

    ಇದನ್ನೂ ಓದಿ: ವಲಸೆ ಕಾರ್ಮಿಕರನ್ನು ಕದ್ದುಮುಚ್ಚಿ ಕಳಿಸಲು ಪ್ರಯತ್ನಿಸಿ ಸಿಕ್ಕಿಬಿದ್ದ ಗ್ರಾಪಂ ಉಪಾಧ್ಯಕ್ಷ

    ಗಾಯಗೊಂಡ ವಲಸೆ ಕಾರ್ಮಿಕರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅದರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಊರಿಗೆ ತೆರಳಲು ಹರಸಾಹಸಪಡುತ್ತಿದ್ದಾರೆ. ಇಂಥ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಶ್ರಮಿಕ್​ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಅದರ ಮಧ್ಯೆಯೂ ಕೆಲವು ಕಾರ್ಮಿಕರು ಹೀಗೆ ಸಿಕ್ಕಿದ ಲಾರಿ, ವಾಹನ ಹತ್ತಿಕೊಂಡು ತಮ್ಮ ಊರಿಗೆ ತೆರಳುತ್ತಿದ್ದಾರೆ. ಕಾಲ್ನಡಿಗೆಯಲ್ಲೇ ಹೋಗುತ್ತಿದ್ದಾರೆ. (ಏಜೆನ್ಸೀಸ್)

    ಕರೊನಾ ರೋಗಿಗಳಿಗೆ ಹೊಸ ಮಾರ್ಗಸೂಚಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts