More

    ಸಿಬ್ಬಂದಿ ವರ್ತನೆಯಿಂದ ಇಂಡಿಗೋ ಸಂಸ್ಥೆಗೆ ಬಿತ್ತು ಭಾರೀ ಮೊತ್ತದ ದಂಡ! ಕಾರಣ ಇಲ್ಲಿದೆ

    ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯ ಇಂಡಿಗೋ ವಿಮಾನಯಾನ ಸಂಸ್ಥೆಗೆ 5 ಲಕ್ಷ ರೂ.ದಂಡ ವಿಧಿಸಿದೆ. ಮೇ 7 ರಂದು ವಿಶೇಷಚೇತನ ಮಗುವಿಗೆ ಅವಕಾಶ ನೀಡಲು ನಿರಾಕರಿಸಿದ್ದರಿಂದ ಡಿಜಿಸಿಯ ಈ ಕ್ರಮ ಕೈಗೊಂಡಿದೆ.

    ಮೇ 7 ರಂದು ರಾಂಚಿಯಿಂದ ಹೊರಡಬೇಕಿದ್ದ ವಿಮಾನದಲ್ಲಿ ಸಂಚರಿಸಲು ಪೋಷಕರೊಂದಿಗೆ ಬಂದಿದ್ದ ಈ ಮಗುವನ್ನು ಇಲ್ಲಿನ ಸಿಬ್ಬಂದಿ ಪ್ರವೇಶ ನೀಡಿರಲಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

    ವಿಶೇಷ ಸನ್ನಿವೇಶಗಲ್ಲಿ ವಿಮಾನ ಸಿಬ್ಬಂದಿ ಪ್ರಯಾಣಿಕರಿಗೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ಮಾಡಿಕೊಡಬೇಕಿತ್ತು. ಆದರೆ ಇದನ್ನು ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಏರ್​ಕ್ರಾಪ್ಟ್​ ನಿಯಮಗಳ ಅನ್ವಯ ಶನಿವಾರ ಇಂಡಿಗೋಗೆ 5 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಡಿಜಿಸಿಎ ಮಹಾನಿರ್ದೇಶಕ ಅರುಣ್​​ ಕುಮಾರ್ ತಿಳಿಸಿದ್ದಾರೆ.

    ಪ್ರಕರಣ ಸಂಬಂಧ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಮೇ 9 ರಂದು ತನಿಖೆಗೆ ಆದೇಶಿಸಿದ್ದರು. ಅಲ್ಲದೇ ಸಿಬ್ಬಂದಿ ವರ್ತನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. (ಏಜೆನ್ಸೀಸ್​)

    ಹಾಟ್​​ ಫೋಟೋ ತೆಗೆಸಿದ ವೈದ್ಯೆಗೆ ಭಾರೀ ಸಂಕಷ್ಟ! ತನ್ನ ಜೀವನದಲ್ಲಿ ಹೀಗಾಗುತ್ತೆ ಎಂದು ಕನಸಲ್ಲೂ ಎಣಿಸಿರಲಿಲ್ಲ

    ಹಿಜಾಬ್ ಹಾಕಿಕೊಂಡು ಶಾಲೆಗೆ ಬರುವಂತಿಲ್ಲ, ಕೋರ್ಟ್​ ಆದೇಶ ಪಾಲಿಸಿ: ಶಿಕ್ಷಣ ಸಚಿವರ ಖಡಕ್​​ ವಾರ್ನಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts