More

    5.35 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ


    • ಹಾಸನ : ಅರಕಲಗೂಡು ತಾಲೂಕಿನ ಕತ್ತಿಮಲ್ಲೇನಹಳ್ಳಿ, ಹೊಳಲಗೋಡು ಮತ್ತು ದೊಡ್ಡಬೆಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಪರಿಮಿತಿಯಲ್ಲಿ 5.35 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಟಿ.ರಾಮಸ್ವಾಮಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.

    • ಕತ್ತಿಮಲ್ಲೇನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಶಾಸಕರು, ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ 2 ಕೋಟಿಗೂ ಅಧಿಕ ಹಣದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಚಾಲನೆ ನೀಡಲಾಗುತ್ತಿದೆ. ಯಾವುದೇ ಗ್ರಾ.ಪಂ.ನ ಚುನಾಯಿತ ಸದಸ್ಯರು ನನ್ನ ಬಳಿ ಅರ್ಜಿ ಹಾಕಿ ಕೆಲಸ ಮಾಡಿ ಎಂದು ಕೇಳಿಕೊಂಡಿಲ್ಲ. ನಾನೇ ಖುದ್ದು ಸಮಸ್ಯೆ ನಿವಾರಣೆಗೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರುತಿದ್ದೇನೆ. ಇದು ನನ್ನ ಕರ್ತವ್ಯವಾಗಿದೆ. ಜನರು ಕಾಮಗಾರಿ ನಡೆಯುವ ವೇಳೆ ಖುದ್ದು ಹಾಜರಿದ್ದು, ಗುಣಮಟ್ಟದ ಕೆಲಸ ಮಾಡಿಸಿಕೊಳ್ಳುವತ್ತ ಗಮನಹರಿಸಬೇಕು ಎಂದರು.

    • ಕತ್ತಿಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಿಮಿತಿಯಲ್ಲಿ 2.60 ಕೋಟಿ ರೂ., ದೊಡ್ಡಬೆಮ್ಮತ್ತಿ ಗ್ರಾ.ಪಂ. ವ್ಯಾಪ್ತಿಯಲ್ಲಿ 174.10 ಲಕ್ಷ ರೂ.ಗಳು ಹಾಗೂ ಹೊಳಲಗೂಡು ಗ್ರಾ.ಪಂ. ಪರಿಮಿತಿಯಲ್ಲಿ 122.00ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

    • ಇಡೀ ರಾಜ್ಯದಲ್ಲಿಯೇ ಬಗರ್ ಹುಕುಂ ಸಮಿತಿ ವಿಶೇಷವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲವೂ ಪಾರದರ್ಶಕವಾಗಿ ಜನರ ಮುಂದೆಯೇ ಫಲಾನುಭವಿಗಳ ಕಡತವನ್ನು ಪರಿಶೀಲನೆ ಮಾಡಿ ಮಂಜೂರಾತಿ ಕೊಡಲಾಗುತ್ತಿದೆ. ಜನರು ಯಾವುದೇ ಕಾರಣಕ್ಕೂ ಹಣ, ಇತರೆ ರೀತಿಯಲ್ಲಿ ಸಹಕಾರ ಮಾಡಬಾರದು ಎಂದು ಮನವಿ ಮಾಡಿದರು.
      ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಣೇಶ್, ಜಿ.ಪಂ. ಕಿರಿಯ ಇಂಜಿನಿಯರ್ ರಾಜೇಂದ್ರ ಇತರರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts