More

    ಸಿಹಿ ಸಿಹಿ ಸಂಸತ್​ ಭವನ!

    • ಸೇಂಟ್​ ಜೋಸೆಫ್ಸ್ ಶಾಲೆ ಮೈದಾನದಲ್ಲಿ ಕೇಕ್​ ಶೋ
    • ಚಂದ್ರಯಾನ-3, ಶಿವಾಜಿ, ದುರ್ಗಾದೇವಿ ಮತ್ತಿತರ ಆಕೃತಿಗಳ ಅನಾವರಣ

    ಬೆಂಗಳೂರು: ಕ್ರಿಸ್​ಮಸ್​ ಹಾಗೂ ಹೊಸ ವರ್ಷದ ಪ್ರಯುಕ್ತ “ಇನ್​ಸ್ಟ್ಟಿಟ್ಯೂಟ್​ ಆ್​ ಬೇಕಿಂಗ್​ ಆ್ಯಂಡ್​ ಕೇಕ್​ ಆರ್ಟ್​’ (ಐಬಿಸಿಎ) ಮತ್ತು “ಮೈ ಬೇಕರ್ಸ್​ ಮಾರ್ಟ್​’ ಸಹಯೋಗದಲ್ಲಿ ಯುಬಿ ಸಿಟಿ ಬಳಿಯ ಸೇಂಟ್​ ಜೋಸೆಫ್ಸ್ ಶಾಲಾ ಮೈದಾನದಲ್ಲಿ ಶುಕ್ರವಾರದಿಂದ ಹದಿನೈದು ದಿನಗಳ ಕಾಲ (ಡಿ.15& ಜ.1) 49ನೇ ಕೇಕ್​ ಶೋ ಆಯೋಜಿಸಲಾಗಿದೆ.

    ನವದೆಹಲಿಯ ನೂತನ ಸಂಸತ್​ ಭವನ ಹಾಗೂ “ಚಂದ್ರಯಾನ&3′ ಈ ಬಾರಿಯ ಮತ್ತು ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಉಚಿತ ಬಸ್​ ಪ್ರಯಾಣ ಯೋಜನೆ ಪರಿಚಯಿಸುವ “ಶಕ್ತಿ’ ಕೇಕ್​ ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಿವೆ. ಇವಲ್ಲದೆ ಶಿವಾಜಿ ಮಹಾರಾಜ್​ ಕೇಕ್​, ದುರ್ಗಾದೇವಿ, ಶಾಪಿಂಗ್​ ಕ್ಯಾಮಲ್​ ಕೇಕ್​, ಅಲಿಗೇಟರ್​ ಇನ್​ ಎ ಸ್ವಾಂಪ್​ ಕೇಕ್​, ಡಾಲ್​ ಕೇಕ್​ ಸೇರಿ 20ಕ್ಕೂ ಹೆಚ್ಚು ಕೇಕ್​ ಆಕೃತಿಗಳು ಪ್ರೇಕ್ಷಕರನ್ನು ಚಕಿತಗೊಳಿಸಲು ಅಣಿಯಾಗಿವೆ.

    ಸಂಸತ್​ ಭವನದ ಪ್ರತಿಕೃತಿ: ನವದೆಹಲಿಯ ನೂತನ ಸಂಸತ್​ ಭವನ ವೇದಕಾಲದಿಂದ ಈವರೆಗಿನ ಪರಂಪರೆಯ ಕಥೆಗಳನ್ನು ಸಾರಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆದುಬಂದ ಹಾದಿಯನ್ನು ಬಿಂಬಿಸುವ ಹಲವು ವಸ್ತುಗಳನ್ನು ಇದರಲ್ಲಿ ಪ್ರದರ್ಶಿಸಲಾಗಿದೆ. ಸುಮಾರು 14 ಅಡಿ ಅಗಲ, 14 ಅಡಿ ಉದ್ದ ಹಾಗೂ 9 ಅಡಿ ಎತ್ತರ ಇರುವ 1,120 ಕೆ.ಜಿ. ತೂಕದ ಈ ಕೇಕ್​ ಅನ್ನು ಸಂಪೂರ್ಣ ಸಕ್ಕರೆ ಮತ್ತು ಆಹಾರದ ಬಣ್ಣ ಬಳಸಿ ನಿರ್ಮಿಸಲಾಗಿದ್ದು, ಇದಕ್ಕಾಗಿ ಕಲಾವಿದರು ಎರಡೂವರೆ ತಿಂಗಳ ಕಾಲ ಶ್ರಮಪಟ್ಟಿದ್ದಾರೆ.

    ಚಂದ್ರಯಾನ 3: ಭಾರತದ ಹೆಮ್ಮೆಯ ಕ್ಷಣವಾದ ಚಂದ್ರಯಾನ & 3 ಉಡಾವಣೆಯ ಸಂಭ್ರಮಾಚರಣೆಗಾಗಿ ಲ್ಯಾಂಡರ್​ ಮತ್ತು ರೋವರ್​ನ ಸಕ್ಕರೆ ಪ್ರತಿಕೃತಿಯನ್ನು ರಚಿಸಲಾಗಿದೆ. ಇದು ಮಿಷನ್​ನ ನಿಖರತೆ ಮತ್ತು ನಾವೀನ್ಯತೆಯನ್ನು ಪ್ರತಿಬಿಂಬಿಸುತ್ತದೆ. ಇದರ ಮೂಲಕ ಬಾಹ್ಯಾಕಾಶ ಸಂಶೋಧನೆಯ ಸಾರವನ್ನು ಮರುಸೃಷ್ಟಿಸಲಾಗಿದೆ. ಸುಮಾರು 4 ಅಡಿ ಅಗಲ, 4 ಅಡಿ ಉದ್ದ ಹಾಗೂ 3 ಅಡಿ ಎತ್ತರದ ಈ ಕೇಕ್​ಅನ್ನು 25 ದಿನಗಳ ಶ್ರಮದೊಂದಿಗೆ ಕಲಾವಿದರು ನಿರ್ಮಿಸಿದ್ದಾರೆ.

    ಕಲಾವಿದರ ಕೈಚಳಕ: ಸಕ್ಕರೆ, ಚಾಕೊಲೇಟ್​, ಕ್ರೀಮ್​, ಮೊಟ್ಟೆ, ಕಾರ್ನ್ ಫ್ಲೋರ್, ಎಡಿಬಲ್​ ಗಮ್​ ಹಾಗೂ ಇತರ ಪರಿಕರಗಳನ್ನು ಬಳಸಿ 20ಕ್ಕೂ ಹೆಚ್ಚು ಅಕರ್ಷಕ ಕೇಕ್​ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಸುಮಾರು 20 ಸಾವಿರ ಚದರ ಮೀಟರ್​ ವ್ಯಾಪ್ತಿಯಲ್ಲಿ ಅನಾವರಣಗೊಳ್ಳಲಿವೆ.

    ಪ್ರವೇಶ ದರ : ಕೇಕ್​ ಪ್ರಸದರ್ಶನ ಕಣ್ತುಂಬಿಕೊಳ್ಳಲು ಬಯಸುವವ ಎಲ್ಲ ವಯೋಮಾನದವರಿಗೆ 100 ರೂ. ಪ್ರವೇಶ ದರ ನಿಗದಿಪಡಿಲಾಗಿದೆ. ನಿತ್ಯ ಬೆಳಗ್ಗೆ 11ರಿಂದ ರಾತ್ರಿ 9ರವರೆಗೆ ಪ್ರದರ್ಶನ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts