More

    ಬನಶಂಕರಿ ದೇಗುಲದಲ್ಲಿ ಡಿಶ್‌ವಾಷರ್ ಅಳವಡಿಕೆ

    ಬೆಂಗಳೂರು: ಮುಜರಾಯಿ ಇಲಾಖೆ ಅಧೀನದ ಬನಶಂಕರಿ ದೇವಾಲಯವು ಪರಸರಸ್ನೇಹಿ ಆಲಯದೊಂದಿಗೆ ಭಕ್ತಸ್ನೇಹಿಯಾಗಿ ಮಾರ್ಪಾಡಾಗುತ್ತಿದೆ. ಇಲ್ಲಿ ಭಕ್ತರ ಆರೋಗ್ಯದ ದೃಷ್ಟಿಯಿಂದ ಪ್ರಸಾದ ವಿತರಣೆಯಲ್ಲಿ ನೈರ್ಮಲ್ಯ ಕಾಪಾಡಲು 50 ಲಕ್ಷ ರೂ. ವೆಚ್ಚದಲ್ಲಿ ಡಿಶ್‌ವಾಷರ್ ಅಳವಡಿಸಲಾಗಿದೆ.

    ದೇವಾಲಯದಲ್ಲಿ ಅನ್ನದಾಸೋಹ ಪ್ರಾರಂಭವಾದಾಗಿನಿಂದ ಅಡಿಕೆ ತಟ್ಟೆಯಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತಿತ್ತು. ಆದರೆ, ಇದರಿಂದ ವಿಪರೀತ ತ್ಯಾಜ್ಯ ಸಂಗ್ರಹಣೆಯಾಗುತ್ತಿತ್ತು. ಇದನ್ನು ತಪ್ಪಿಸಲು ಸ್ಟೀಲ್ ತಟ್ಟೆಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಪ್ರಸಾದ ಸೇವಿಸಿದ ನಂತರ ಭಕ್ತರು ತಟ್ಟೆಗಳನ್ನು ಸ್ವಚ್ಛಗೊಳಿಸುತ್ತಿರಲಿಲ್ಲ. ಇದರಿಂದ ಇತರ ಭಕ್ತರಿಗೆ ಅದೇ ತಟ್ಟೆಯಲ್ಲಿ ಪ್ರಸಾದ ಸೇವಿಸಲು ಮುಜುಗರವಾಗುತ್ತಿತ್ತು. ಈ ಎಲ್ಲ ಸಮಸ್ಯೆಗಳನ್ನು ತಪ್ಪಿಸಲು ಡಿಶ್‌ವಾಷರ್ ಅಳವಡಿಸಲಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀ ತಿಳಿಸಿದ್ದಾರೆ.

    ಯಂತ್ರದ ನೆರವಿನಿಂದ ಒಂದು ತಾಸಿನಲ್ಲಿ 8 ಸಾವಿರ ತಟ್ಟೆಗಳನ್ನು ತೊಳೆಯಬಹುದು. ಒಮ್ಮೆ ಸೋಪು ನೀರು ಮತ್ತೊಮ್ಮೆ ಬಿಸಿನೀರಿನಿಂದ ತಟ್ಟೆಗಳು ಸ್ವಚ್ಛಗೊಳಲಿವೆ. ಇದರಿಂದ ಪ್ರಸಾದ ವಿತರಣೆಯಲ್ಲಿ ನೈರ್ಮಲ್ಯ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ. ಜತೆಗೆ ಭಕ್ತರೇ ತಟ್ಟೆ ತೊಳೆಯುವುದರಿಂದ ವಿಪರೀತ ನೀರು ಪೋಲಾಗುವುದನ್ನು ತಡೆದಂತಾಗಲಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts