More

    ಬಳವಡಿಯಲ್ಲಿ ೪೨ ಮಂಗಗಳ ಸೆರೆ

    ವಾಡಿ: ಬಳವಡಗಿ ಗ್ರಾಮದಲ್ಲಿ ಮಂಗಗಳ ಕಾಟಕ್ಕೆ ಅರಣ್ಯ ಇಕಾಖೆ ಅಧಿಕಾರಿಗಳು ಬ್ರೇಕ್ ಬಿದ್ದಿದ್ದು, ಜನರು ನಿಶ್ಚಿಂತೆಯಿಂದ ಜೀವನ ನಡೆಸುವಂತಾಗಿದೆ.

    ಬಳವಡಗಿಯಲ್ಲಿ ಮಂಗಗಳ ದಾಳಿಯಿಂದಾಗಿ ಜನರು ಭಯಗೊಂಡಿದ್ದರು. ಇದಲ್ಲದೆ ಇತ್ತೀಚೆಗೆ ಐವರಿಗೆ ಕಚ್ಚಿ ಗಾಯಗೊಳಿಸಿದ್ದವು. ಹೀಗಾಗಿ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ತಿಳಿಸಿದ್ದು, ಮಂಗಳ ಕಾಟಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದರು.

    ಶುಕ್ರವಾರ ಬೆಳಗ್ಗೆ ವಲಯ ಅರಣ್ಯ ಅಧಿಕಾರಿ ವಿಜಯಕುಮಾರ ಬಡಿಗೇರ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಅಧಿಕಾರಿಗಳು, ಗ್ರಾಮದೆಲ್ಲೆಡೆ ಸಂಚರಿಸಿ ಸುಮಾರು ೪೨ ಮಂಗಗಳನ್ನು ಹಿಡಿದಿದ್ದಾರೆ. ಇನ್ನು ೨-೩ ದಿನ ಕಾರ್ಯಾಚರಣೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
    ಅರಣ್ಯ ಇಲಾಖೆಯ ಮಂಜುನಾಥ, ಪರಸಪ್ಪ, ಗೌತಮ, ವೆಂಕಟೇಶ, ಜಾಫರ್ ಇತರರಿದ್ದರು.

    ಬಳವಡಗಿ ಸೇರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಂಗಳಗಳ ಕಾಟ ಹೆಚ್ಚಾಗಿದ್ದು, ಜನರು ದೂರು ನೀಡಿದ್ದರು. ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಕಾರ್ಯಾಚರಣೆ ಮುಗಿಸಿದ್ದೇವೆ. ಇನ್ನು ಎರಡು ದಿನ ಕಾರ್ಯಾಚರಣೆ ನಡೆಯಲಿದೆ. ಪ್ರಾಣಿಗಳು ಹಾಗೂ ಜನರಿಗೆ ತೊಂದರೆ ಆಗದಂತೆ ಅರಣ್ಯ ಇಲಾಖೆ ಕೆಲಸ ಮಾಡುತ್ತಿದೆ.
    | ವಿಜಯಕುಮಾರ ಬಡಿಗೇರ, ವಲಯ ಅರಣ್ಯಾಧಿಕಾರಿ

    ವನು ಜೀವಿಗಳಿಗೆ ಆಹಾರ ಕೊಡಬೇಡಿ: ಅರಣ್ಯದಲ್ಲಿರುವ ವನ್ಯ ಜೀವಿಗಳಿಗೆ ಯಾವುದೇ ಆಹಾರ ನೀಡುವ ಕೆಲಸ ಮಾಡಬೇಡಿ. ವನ್ಯ ಜೀವಿಗಳು ಅರಣ್ಯದಲ್ಲಿನ ಆಹಾರಕ್ಕೆ ಹೊಂದಿಕೊಂಡಿರುತ್ತದೆ. ಅವುಗಳಿಗೆ ಜನರು ಆಹಾರ ಕೊಡುವುದರಿಂದ ರಸ್ತೆ ಹಾಗೂ ಹಳ್ಳಿಗಳಿಗೆ ಬರುತ್ತವೆ. ಅಲ್ಲದೆ ಯಾವುದೇ ಕಾರಣಕ್ಕೂ ಪ್ರಾಣಿಗಳ ಮೇಲೆ ದಾಳಿ ಮಾಡಬೇಡಿ. ಏನೇ ಸಮಸ್ಯೆ ಆದರೂ ಅರಣ್ಯ ಇಲಾಖೆಗೆ ಮಾಹಿತಿ ಕೊಡಿ. ನಾವು ನಿಮ್ಮ ಸೇವೆಗೆ ಸದಾ ಸಿದ್ಧರಿದ್ದೇವೆ ಎಂದು ವಲಯ ಅರಣ್ಯ ಅಧಿಕಾರಿ ವಿಜಯಕುಮಾರ ಬಡಿಗೇರ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts