More

    ಚೀನಾದ ಕುರಿಗಳ ಶಿಸ್ತುಬದ್ಧ ನಡಿಗೆಗೆ ನೆಟ್ಟಿಗರು ಫಿದಾ; ಏನಿದೆ ಆ ಕುರಿಗಳ ಸಾಲಿನಲ್ಲಿ ಇಲ್ಲಿದೆ ನೋಡಿ ಮಾಹಿತಿ

    ಇಲ್ಲಿ ಕುರಿಗಳ ಶಿಸ್ತುಬದ್ಧ ನಡಿಗೆ ನೆಟ್ಟಿಗರನ್ನು ಚಕಿತಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

    400ಕ್ಕೂ ಹೆಚ್ಚು ಕುರಿಗಳ ಹಿಂಡು ಶಿಸ್ತುಬದ್ಧವಾಗಿ, ತರಬೇತಿ ಪಡೆದ ಸೈನಿಕರಂತೆ ನೇರ ಸಾಲಿನಲ್ಲಿ ನಡೆದು ಹೋಗುವುದನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

    ಈ ಕುರಿ ಹಿಂಡು ಬಯಲಲ್ಲಿ ಮೇಯ್ದು ಮನೆಗೆ ಹಿಂದಿರುಗುವಾಗ ಈ ರೀತಿ ಶಿಸ್ತು ಪಾಲಿಸುತ್ತ ಮನೆಗೆ ತೆರಳುತ್ತಿವೆ. ಇಂತಹ ವಿಡಿಯೋ ಚೀನಾದ ಈಶಾನ್ಯ ಭಾಗದಲ್ಲಿ ಅಪ್​ಲೋಡ್​ ಮಾಡಲಾಗಿದೆ.

    ಈ ಕರುಗಳನ್ನು ಅಷ್ಟು ಶಿಸ್ತಿನಲ್ಲಿ ತರಬೇತಿ ನೀಡಲಾಗಿದೆ. ಮಾತ್ರವಲ್ಲ ಈ ನನ್ನ ಕುರಿಗಳು ಮಾತ್ರ ಇಷ್ಟು ಶಿಸ್ತು ಕಲಿತಿರುವುದು ಎನ್ನುತ್ತಾನೆ ಕುರಿಗಾಹಿ ನೈ ಎಂಬಾತ.

    ಇವು ಪ್ರತಿದಿನ ಸಂಜೆ ಮನೆಗೆ ಹೋಗುವಾಗ ಹೀಗೆ ಶಿಸ್ತು ಪಾಲಿಸುತ್ತವೆ. ಅಷ್ಟೇ ಅಲ್ಲ, ಈ ಪ್ರತಿಯೊಂದು ಸಾಲಿಗೂ ಒಬ್ಬ ಲೀಡರ್​ ಕುರಿ ಇದ್ದಾನೆ. ಆ ಲೀಡರ್​ನ್ನು ಉಳಿದ ಕುರಿಗಳು ಹಿಂಬಾಲಿಸುತ್ತವೆ ಎನ್ನುತ್ತಾರೆ ನೈ.

    ಈ ವಿಡಿಯೋವನ್ನು 6.5 ಮಿಲಿಯನ್​ ಬಾರಿ ವೀಕ್ಷಿಸಲಾಗಿದೆ. ಈತ ಚೀನಾ ಮತ್ತು ರಷ್ಯಾದ ಗಡಿಭಾಗದಲ್ಲಿರುವ ಕಿಕಿಹಾರ್​ ಎಂಬ ಪ್ರದೇಶದ ನಿವಾಸಿಯಾಗಿದ್ದಾನೆ.

    ನನ್ನ ಕುರಿಗಳು ಸಾಲಿನಲ್ಲಿ ತೆರಳಲು ಸೂಕ್ತವಾಗಿ ಕಲಿತಿವೆ. ಇಲ್ಲಿನ ಪ್ರದೇಶದಲ್ಲಿ ಹಳ್ಳ ಕೊಳ್ಳಗಳಿವೆ. ಒಂದೇ ಬದಿಯಲ್ಲಿ ಹೀಗೆ ಸಾಗುವುದು ಪ್ರಾಣಿಗಳಿಗೆ ಸುಲಭ ಎನ್ನುತ್ತಾನೆ ನೈ.

    ಅಲ್ಲದೆ ಪ್ರತಿಯೊಂದು ಕುರಿಗಳಿಗೂ ಆತ ಹೆಸರಿಟ್ಟಿದ್ದಾನೆ . ಆತ ಆ ಹೆಸರು ಕೂಗುತ್ತಿದ್ದಂತೆ ಆ ಕುರಿ ಈತನ ಹತ್ತಿರಕ್ಕೆ ಬರುತ್ತದೆ. ಇದನ್ನು ಕಂಡ ನೆಟ್ಟಿಗರು ಬಗೆಬಗೆಯ ರೀತಿ ಪ್ರತಿಕ್ರಿಯಿಸಿದ್ದಾರೆ.

    ಒಬ್ಬರು “ಈ ಕುರಿಗಳು ಚಲಿಸುತ್ತಿರುವ ಮಟನ್​ಗಳು” ಎಂದರೆ, ಇನ್ನೊಬ್ಬರು “ಈ ಕುರಿಗಳಿಗೆ ಎಷ್ಟು ಮ್ಯಾನರ್ಸ್​ ಇದೆ” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts