More

    ಹಿಂದು ಧರ್ಮಕ್ಕೆ ಮರಳುತ್ತಿವೆ ಮುಸ್ಲಿಂ ಕುಟುಂಬಗಳು!

    ಹಿಸಾರ್​: ಹರಿಯಾಣ ರಾಜ್ಯದ ಹಿಸಾರ್​ ಜಿಲ್ಲೆ ಬಿಧ್ಮಿರಾ ಗ್ರಾಮದಲ್ಲಿ ವಾಸಿಸುತ್ತಿರುವ ಸುಮಾರು 40 ಮುಸ್ಲಿಂ ಕುಟುಂಬವು ಹಿಂದು ಸಂಪ್ರದಾಯ ಪಾಲಿಸಿಕೊಂಡು ಬರುತ್ತಿವೆ. ಶುಕ್ರವಾರ ಮೃತಪಟ್ಟಿದ್ದ ವೃದ್ಧೆಯೊಬ್ಬರ ಅಂತ್ಯ ಸಂಸ್ಕಾರವನ್ನೂ ಹಿಂದು ಧರ್ಮದಂತೆಯೇ ನೆರವೇರಿವೆ. ಏ.18ರಂದು ದನೋಡಾ ಕಲಾನ್ ಗ್ರಾಮದಲ್ಲಿ 6 ಕುಟುಂಬದ 35 ಜನರು ಹಿಂದುಧರ್ಮ ಸ್ವೀಕರಿಸಿದ್ದರು.

    ಬಿಧ್ಮಿರಾ ಗ್ರಾಮದ ಸತ್ಬೀರ್ ಎಂಬುವವ​ರ ತಾಯಿ ಫೂಲಿ ದೇವಿ(84) ವಯೋಸಹಜವಾಗಿ ಅಸುನೀಗಿದ್ದರು. ತಾಯಿಯ ಅಂತ್ಯಸಂಸ್ಕಾರವನ್ನು ಹಿಂದು ಸಂಪ್ರದಾಯದಂತೆ ನೆರವೇರಿಸಲು ಪುತ್ರ ಇಚ್ಛಸಿದ್ದಕ್ಕೆ ಸಹಮತ ಸೂಚಿಸಿದ ಗ್ರಾಮಸ್ಥರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಬಿಧ್ಮಿರಾದಲ್ಲಿ 40 ಕುಟುಂಬಗಳ 250 ಜನರು ವಾಸಿಸುತ್ತಿದ್ದಾರೆ.

    ಇದನ್ನೂ ಓದಿರಿ ಬಾಸುಮತಿ ಅಕ್ಕಿ ರಫ್ತುದಾರರಿಂದ 411 ಕೋಟಿ ರೂ. ಪಂಗನಾಮ!

    ಸತ್ಬೀರ್​ ಮಾತನಾಡಿ, ಹಿಂದುಗಳಾಗಿದ್ದ ನಮ್ಮ ಪೂರ್ವಜರು ಪರಿಶಿಷ್ಟ ಜಾತಿಗೆ ಸೇರುವ ದೂಮ್ ಜಾತಿಯವರು. ಮೊಗಲ್​ ದೊರೆ ಔರಂಗಜೇಬ್​ನ ಆಡಳಿತಾವಧಿಯಲ್ಲಿ ನಮ್ಮ ಪೂರ್ವಜನರು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಬೇಕಾಯಿತು. ನಮ್ಮ ಇಡೀ ಗ್ರಾಮದ ಜನರು ಹಿಂದು ಧರ್ಮದ ಎಲ್ಲ ಹಬ್ಬವನ್ನೂ ಆಚರಿಸುತ್ತಾರೆ. ಆದರೆ, ಮೃತರ ಶವ ಸಂಸ್ಕಾರವನ್ನು ಮುಸ್ಲಿಂ ಧರ್ಮದಂತೆ ಮಾಡುತ್ತಿದ್ದೆವು. ಈಗ ಹಿಂದು ಸಂಪ್ರದಾಯದಂತೆಯೇ ನೆರವೇರಿಸಿದ್ದೇವೆ. ಈ ಬಗ್ಗೆ ಯಾರಿಂದಲೂ ನಮಗೆ ಯಾವುದೇ ಒತ್ತಡವಾಗಲಿ, ಕಿರುಕುಳವಾಗಲಿ ಬಂದಿಲ್ಲ ಎಂದು ಹೇಳಿದ್ದಾರೆ. ಗ್ರಾಮಸ್ಥರು ಹೇಳುವಂತೆ, ಬಿಧ್ಮಿರಾ ನಿವಾಸಿಗಳು ಸ್ವಾತಂತ್ರ್ಯಕ್ಕೂ ಮುನ್ನ ದನೋಡಾ ಕಲಾನ್ ಗ್ರಾಮದಲ್ಲಿ ವಾಸಿಸುತ್ತಿದ್ದರಂತೆ.

    ಇದನ್ನೂ ಓದಿರಿ ತಬ್ಲಿಘಿಗಳಿಂದ ಹಿಂದು ಯುವಕ ಮತಾಂತರ

    ಮೀಸಲಾತಿಗಾಗಿ?: ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಸ್ಲಿಂ ಕಲ್ಯಾಣ ಸಂಸ್ಥೆಯ ರಾಜ್ಯಾಧ್ಯಕ್ಷ ಹರ್ಫೂಲ್ ಖಾನ್, ಪರಿಶಿಷ್ಟ ಜಾತಿಯಲ್ಲಿರುವ ಸೌಲಭ್ಯ ಪಡೆಯಲು ದನೋಡಾ ಕಲಾನ್ ಗ್ರಾಮಸ್ಥರು ಹಿಂದು ಧರ್ಮ ಸ್ವೀಕರಿಸಿದ್ದಾರೆ. ಬಿಧ್ಮಿರಾ ಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. 1951ರ ಅಧಿಸೂಚನೆ ಪ್ರಕಾರ ಮುಸ್ಲಿಂ ಮತ್ತು ಕ್ರಿಶ್ಚಿಯನ್​ ಧರ್ಮದವರಿಗೆ ಪರಿಶಿಷ್ಟ ಜಾತಿಯ ದೂಮ್​ ಕೆಟಗರಿಯ ಮೀಸಲಾತಿ ಸೌಲಭ್ಯ ಸಿಗುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿರಿ ನಿಮಗೆ ಜನ ಸೇವೆ ಸಲ್ಲಿಸುವ ಆಸಕ್ತಿ ಇದೆಯೆ? ಇಲ್ಲಿದೆ ಉತ್ತಮ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts