More

    ವಿವೇಕಾನಂದರ ಬದುಕು ವಿಶ್ವಕ್ಕೆ ದಾರಿದೀಪ

    ಕಡೂರು: ಸ್ವಾಮಿ ವಿವೇಕಾನಂದರ ಚಿಂತನೆ, ಆದರ್ಶದ ಬದುಕು ಇಡೀ ವಿಶ್ವಕ್ಕೆ ದಾರಿದೀಪ ಎಂದು ಕಡೂರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.

    ತಾಲೂಕಿನ ಪಂಚೆಹೊಸಹಳ್ಳಿ ಗ್ರಾಮದಲ್ಲಿ ಗೆಳೆಯರ ಬಳಗ ಶನಿವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
    ಸಾಮಾನ್ಯ ಬಾಲಕನಾಗಿದ್ದ ನರೇಂದ್ರ ದತ್ತ, ರಾಮಕೃಷ್ಣ ಪರಮಹಂಸ ಅವರ ಶಿಷ್ಯರಾಗಿ ವಿವೇಕಾನಂದರಾದರು. ಪ್ರಖರ ವಾಗ್ಮಿಯಾಗಿದ್ದ ಅವರು ಭಾರತ ದೇಶ ಮತ್ತು ಹಿಂದು ಧರ್ಮದ ಬಗ್ಗೆ ಅಪಾರ ಅಭಿಮಾನ ಉಳ್ಳವರಾಗಿದ್ದರು. ಅದ್ಭುತ ವಿಚಾರಧಾರೆಯಿಂದ ಸಾವಿರಾರು ಜನ ಶಿಷ್ಯರನ್ನು ಸಂಪಾದಿಸಿದ್ದರು. ಮಾನವೀಯ ಮೌಲ್ಯಗಳ ಜತೆಗೆ ಏಕತೆಯ ಚಿಂತನಾ ಸಿದ್ಧಾಂತವನ್ನು ವಿಶ್ವಕ್ಕೆ ಬೋಧಿಸಿ ಯುವ ಜನತೆಗೆ ಸ್ಫೂರ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.
    ಗ್ರಾಪಂ ಸದಸ್ಯ ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ರಘುಗೌಡ, ರಾಜು, ಗೋಪಿ, ಮಹೇಶ್, ಚೇತನ್, ಗೆಳೆಯರ ಬಳಗದ ರಾಜೇಶ್, ಶರತ್, ದಿನೇಶ್, ಮಧು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts