More

    ಬಾಸುಮತಿ ಅಕ್ಕಿ ರಫ್ತುದಾರರಿಂದ 411 ಕೋಟಿ ರೂ. ಪಂಗನಾಮ!

    ನವದೆಹಲಿ: ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾಗೆ 173 ಕೋಟಿ ರೂ. ಸೇರಿ ಒಕ್ಕೂಟದ 6 ಬ್ಯಾಂಕ್​ಗಳಿಗೆ ಒಟ್ಟು 411 ಕೋಟಿ ರೂ. ಪಂಗನಾಮ ಹಾಕಿರುವ ರಾಮ್ ದೇವ್ ಇಂಟರ್‌ನ್ಯಾಷನಲ್‌ ಕಂಪನಿಯ ಮೂವರು ಆರೋಪಿಗಳು ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
    ಪಶ್ಚಿಮ ಏಷ್ಯಾ ಮತ್ತು ಯೂರೋಪಿಯನ್ ದೇಶಗಳಿಗೆ ಬಾಸುಮತಿ ಅಕ್ಕಿ ರಫ್ತು ಮಾಡುವ ಈ ಕಂಪನಿಯು ಎಸ್‌ಬಿಐ, ಕೆನರಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕಾರ್ಪೋರೇಶನ್​ ಬ್ಯಾಂಕ್​ಗಳಿಗೆ ಒಟ್ಟು 411 ಕೋಟಿ ರೂ. ಸಾಲ ಪಾವತಿಸಬೇಕಿದೆ. ಈ ಪೈಕಿ ಎಸ್​ಬಿಐಗೆ 173 ಕೋಟಿ ರೂ. ಬರಬೇಕಿದೆ. 2016ರ ಜನವರಿಯಿಂದ ಸಾಲ ಪಾವತಿಸದ ಈ ಕಂಪನಿಯು ಅನುತ್ಪಾದಕ ಆಸ್ತಿ (ಎನ್​ಪಿಎ) ಪಟ್ಟಿಗೆ ಸೇರಿದೆ.

    ಇದನ್ನೂ ಓದಿ ಪೊಲೀಸರ ಪಾಡು ಹೇಳತೀರದ್ದು..; ಕೈಚೆಲ್ಲಿ ಕುಳಿತಿದ್ದಾರೆ ಮುಖ್ಯಮಂತ್ರಿ

    4 ವರ್ಷಗಳ ನಂತರ ಅಂದರೆ ಕಳೆದ ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ಬ್ಯಾಂಕ್​ಗಳು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ವಂಚನೆ ಬಯಲಾಗಿದೆ. ಕರ್ನೂಲ್​ನಲ್ಲಿದ್ದ ಘಟಕಗಳ ಬಾಗಿಲು ಹಾಕಿ ಆರೋಪಿಗಳು ಪರಾರಿಯಾಗಿದ್ದಾರೆ. ಈ ಘಟಕಗಳ ಬಳಿ ಹರಿಯಾಣ ಪೊಲೀಸ್​ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

    ಬ್ಯಾಂಕ್​ಗೆ ಹಣ ಪಾವತಿಸದೆ ವಂಚಿಸಿದ ಕಂಪನಿ ಮತ್ತು ನಿರ್ದೇಶಕರಾದ ನರೇಶ್ ಕುಮಾರ್, ಸುರೇಶ್ ಕುಮಾರ್, ಸಂಗಿತಾ ವಿರುದ್ಧ
    ಎಸ್​ಬಿಐ 2020ರ ಫೆಬ್ರವರಿ 25ರಂದು ಸಿಬಿಐಗೆ ದೂರು ದಾಖಲಿಸಿತ್ತು. ಈ ಮೂವರೂ ತಲೆಮರೆಸಿಕೊಂಡಿದ್ದಾರೆ.

    ಇದನ್ನೂ ಓದಿ ಅಧಿಕಾರಿಗಳು ಕರೆ ಸ್ವೀಕರಿಸಿದ್ದರೆ ಬದುಕಿ ಬರುತ್ತಿದ್ದರೆ 16 ವಲಸೆ ಕಾರ್ಮಿಕರು?

    ಕರೊನಾ ಲಾಕ್​ಡೌನ್ ​ಇದ್ದ ಕಾರಣ ಬ್ಯಾಂಕ್​ಗಳಿಗೆ ವಂಚನೆ ಪ್ರಕರಣ ತನಿಖೆ ವಿಳಂಬವಾಗಿತ್ತು. ಆರೋಪಿಗಳು ತನಿಖೆಗೆ ಹಾಜರಾಗದಿದ್ದಲ್ಲಿ ಸಮನ್ಸ್​ ಜಾರಿ ಮಾಡಲಾಗುವುದು ಎಂದು ಸಿಬಿಐ ತಿಳಿಸಿದೆ.

    ಕಂಪನಿಯು ಹರಿಯಾಣದ ಕಾರ್ನಾಲ್ ಜಿಲ್ಲೆಯಲ್ಲಿ 3 ಅಕ್ಕಿ ಗಿರಣಿ, ಅಕ್ಕಿ ವಿಂಗಡಣೆ ಮತ್ತು ಶ್ರೇಣೀಕರಣ ಮಾಡುವ 8 ಘಟಕ ಹೊಂದಿದೆ. ವ್ಯಾಪಾರ ಉದ್ದೇಶಗಳಿಗಾಗಿ ಸೌದಿ ಅರೇಬಿಯಾ ಮತ್ತು ದುಬೈನಲ್ಲಿ ಕಚೇರಿಗಳನ್ನು ಹೊಂದಿದೆ.(ಏಜೆನ್ಸೀಸ್​)

    ಇದನ್ನೂ ಓದಿ ತಬ್ಲಿಘಿಗಳಿಂದ ಹಿಂದು ಯುವಕ ಮತಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts