More

    ಅಂಬೇಡ್ಕರ್ ಕುರಿತು ಹೆಚ್ಚು ಚಿತ್ರಗಳು ಬಂದಿದ್ದು ಕನ್ನಡದಲ್ಲೇ!

    ಇಂದು ‘ಸಂವಿಧಾನ ಶಿಲ್ಪಿ’ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ. ಅಂಬೇಡ್ಕರ್ ಅವರ ಕುರಿತು ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಕೆಲವು ಬಯೋಪಿಕ್ ಚಿತ್ರಗಳು ಈಗಾಗಲೇ ಬಿಡುಗಡೆಯಾಗಿವೆ. ಆ ಪೈಕಿ ಪ್ರಮುಖವಾದುದು ಜಬ್ಬಾರ್ ಪಟೇಲ್ ನಿರ್ದೇಶನದ ‘ಡಾ. ಬಾಬಾಸಾಹೇಬ್ ಅಂಬೇಡ್ಕರ್’. 20 ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರದಲ್ಲಿ, ಮಲಯಾಳಂನ ಖ್ಯಾತ ನಟ ಮಮ್ಮೂಟ್ಟಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅತ್ಯುತ್ತಮ ನಟನೆಗಾಗಿ 1999ನೇ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

    ವಿಶೇಷವೆಂದರೆ, ಅಂಬೇಡ್ಕರ್ ಅವರ ಕುರಿತು ಇದುವರೆಗೂ ಕನ್ನಡದಲ್ಲಿ ನಾಲ್ಕು ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ ಮೊದಲನೆಯದು ‘ಬಾಲಕ ಅಂಬೇಡ್ಕರ್’. ಹೆಸರೇ ಸೂಚಿಸುವಂತೆ, ಈ ಚಿತ್ರವು ಅಂಬೇಡ್ಕರ್ ಅವರ ಬಾಲ್ಯದ ಕುರಿತು ಬೆಳಕು ಚೆಲ್ಲುತ್ತದೆ. 1980ರ ದಶಕದಲ್ಲಿ ಬಂದ ಈ ಚಿತ್ರವನ್ನು ಬಸವರಾಜ್ ಕೆಸ್ತೂರ್ ನಿರ್ದೇಶನ ಮಾಡಿದ್ದರು. ನಂತರ ಬಂದ ಚಿತ್ರವೆಂದರೆ, ‘ಡಾ.ಬಿ.ಆರ್. ಅಂಬೇಡ್ಕರ್’. ಇದು ಅಂಬೇಡ್ಕರ್ ಅವರ ಪೂರ್ಣಪ್ರಮಾಣದ ಬಯೋಪಿಕ್ ಆಗಿತ್ತು. ವಿಷ್ಣುಕಾಂತ್ ಅಭಿನಯದ ಈ ಚಿತ್ರದಲ್ಲಿ ಅಂಬೇಡ್ಕರ್ ಅವರ ಕೊಡುಗೆ, ಸಾಧನೆಗಳ ಬಗ್ಗೆ ವಿವರವಾಗಿ ಹೇಳಲಾಗಿತ್ತು.

    ಅಂಬೇಡ್ಕರ್ ಅವರ ಪತ್ನಿ ರಮಾಬಾಯಿ ಕುರಿತು ‘ರಮಾಬಾಯಿ – ಮಿಸ್ಸೆಸ್ ಅಂಬೇಡ್ಕರ್’ ಎಂಬ ಚಿತ್ರವೊಂದು ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಅಂಬೇಡ್ಕರ್ ಅವರ ಬೆಳವಣಿಗೆಯ ಹಿಂದೆ ಅವರ ಪತ್ನಿಯ ಕೊಡುಗೆ ಎಷ್ಟಿತ್ತು ಎಂದು ತೋರಿಸಲಾಗಿತ್ತು. ಈ ಚಿತ್ರದಲ್ಲಿ ರಮಾಬಾಯಿ ಅವರ ಪಾತ್ರಕ್ಕೆ ಅದೆಷ್ಟು ಪ್ರಾಮುಖ್ಯತೆ ಇತ್ತೋ, ಅಂಬೇಡ್ಕರ್ ಅವರ ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆ ಇತ್ತು.
    ಸುಚೇಂದ್ರ ಪ್ರಸಾದ್ ಅಭಿನಯದ ‘ಇಂಗಳೆ ಮಾರ್ಗ’ ಚಿತ್ರವು, ಅಂಬೇಡ್ಕರ್ ಅವರನ್ನು ನೆನಪಿಸುವ ಇನ್ನೊಂದು ಚಿತ್ರ. ಡಾ. ಸರಜೂ ಕಾಟ್ಕರ್ ವಿರಚಿತ ‘ದೇವರಾಯ’ ಕಾದಂಬರಿಯನ್ನಾಧರಿಸಿ ಈ ಚಿತ್ರ ನಿರ್ಮಾಣವಾಗಿತ್ತು. ಮೂಲ ಕಥೆ ದೇವರಾಯ ಇಂಗಳೆ ಅವರ ಕುರಿತ್ತಾದಾದರೂ, ಅವರಿಗೆ ಸ್ಫೂರ್ತಿಯಸೆಲೆಯಾಗಿದ್ದವರು ಡಾ.ಬಿ.ಆರ್. ಅಂಬೇಡ್ಕರ್. ಹೀಗೆ ಅಂಬೇಡ್ಕರ್ ಅವರ ಸ್ಫೂರ್ತಿಯಿಂದ ಇಂಗಳೆ ಅವರು ಹೇಗೆ ಹೋರಾಟ ನಡೆಸುತ್ತಾರೆ ಎಂದು ಸಾರುವ ಚಿತ್ರ ಇದು.

    ಹೀಗೆ ಅಂಬೇಡ್ಕರ್ ಅವರ ಕೊಡುಗೆ, ಸಾಧನೆ ಕುರಿತಾಗಿ ಇದುವರೆಗೂ ನಾಲ್ಕು ಚಿತ್ರಗಳು ಬಿಡುಗಡೆಯಾಗಿದ್ದು, ಬಹುಶಃ ಅಂಬೇಡ್ಕರ್ ಅವರ ಜೀವನದ ಕುರಿತು ಇಷ್ಟೊಂದು ಸಂಖ್ಯೆಯ ಚಿತ್ರಗಳು ಯಾವುದೇ ಭಾಷೆಯಲ್ಲೂ ಬಿಡುಗಡೆಯಾಗಿಲ್ಲ ಎನ್ನುವುದು ವಿಶೇಷ.

    ಲಾಕ್‌ಡೌನ್: ಹಿರಿಯ ನಟಿ ಜಯಂತಿ ಎಲ್ಲಿದ್ದಾರೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts