More

    ನಾಲ್ಕು ಕಣ್ಣುಳ್ಳ ವಿಚಿತ್ರ ಜೀವಿ ಪತ್ತೆಯಾಗಿದ್ದೆಲ್ಲಿ? ಇದರ ಬಗ್ಗೆ ಹರಿದಾಡುತ್ತಿರೋ ಸ್ಫೋಟಕ ಸುದ್ದಿ ನಿಜವೇ?

    ನವದೆಹಲಿ: ನಾಲ್ಕು ಕಣ್ಣುಳ್ಳ ಮೇಕೆ ರೀತಿಯ ಪ್ರಾಣಿಯು ದಕ್ಷಿಣ ಸುಡಾನ್​ನಲ್ಲಿ ಪತ್ತೆಯಾಗಿದೆ ಎಂದು ಅಡಿಬರಹ ಇರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಫೋಟೋ ಕುರಿತಾದ ಅಸಲಿ ಸುದ್ದಿ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ.

    ಅನಿಲ್​ ಕುಮಾರ್​ ಠಾಕೂರ್​ ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ಫೋಟೋ ಶೇರ್​ ಮಾಡಲಾಗಿದೆ. ನಾಲ್ಕು ಕಣ್ಣುಳ್ಳ ಈ ಹೊಸ ಪ್ರಾಣಿಯನ್ನು ದಕ್ಷಿಣ ಸುಡಾನ್​ನಲ್ಲಿ ಪತ್ತೆಹಚ್ಚಲಾಗಿದೆ. ದಕ್ಷಿಣ ಆಫ್ರಿಕಾದ ನಂಬಲಾಗದ ಸೌಂದರ್ಯವನ್ನೊಮ್ಮೆ ನೋಡಿ. ಈ ಪ್ರಾಣಿಯನ್ನು ಏನೆಂದು ಕರೆಯುತ್ತಾರೆ? ಎಂದು ಫೋಟೋ ಕುರಿತು ಬರೆಯಲಾಗಿದ್ದು, ಸಿಕ್ಕಾಪಟ್ಟೆ ಶೇರ್​ ಆಗುವ ಮೂಲಕ ವೈರಲ್​ ಆಗಿದೆ.

    ಇದನ್ನೂ ಓದಿ: ಹುಡುಗನೊಬ್ಬ ಕಾಡ್ತಿದ್ದಾನೆ- ರಾತ್ರಿ ಬೇಕು ಅಂತಾನೆ, ಬೆಳಗ್ಗೆ ಬೇಡ ಅಂತಾನೆ; ಏನು ಮಾಡೋದು?

    ನಾಲ್ಕು ಕಣ್ಣುಳ್ಳ ವಿಚಿತ್ರ ಜೀವಿ ಪತ್ತೆಯಾಗಿದ್ದೆಲ್ಲಿ? ಇದರ ಬಗ್ಗೆ ಹರಿದಾಡುತ್ತಿರೋ ಸ್ಫೋಟಕ ಸುದ್ದಿ ನಿಜವೇ?

    ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು
    ವೈರಲ್​​ ಫೋಟೋ ಬಗೆಗಿನ ನಿಜಾಂಶ ಏನೆಂದು ತಿಳಿಯಲು ನ್ಯೂಸ್​ ಮೀಟರ್​ ಫ್ಯಾಕ್ಟ್​ಚೆಕ್​ ನಡೆಸಿದ್ದು, ಸ್ಪ್ಯಾನೀಶ್​ ಕಲಾವಿದರೊಬ್ಬರು ಕೈಯಲ್ಲು ಮೂಡಿಬಂದಿರುವ ಬಾಸ್ಕ್ ಪೌರಾಣಿಕ ಪ್ರಾಣಿಯ ಪ್ರತಿಮೆಯ ಫೋಟೋ ಎಂದು ತಿಳಿದುಬಂದಿದೆ.

    ಇದನ್ನೂ ಓದಿ: 70 ವರ್ಷದ ವೃದ್ಧನಿಗೆ ಮಹಿಳೆಯೊಂದಿಗೆ ಲಿವ್​ ಇನ್​ ರಿಲೇಷನ್​ಶಿಪ್​! ವಿಚಾರ ತಿಳಿದ ಮಕ್ಕಳು ಮಾಡಿದ್ದೇನು ಗೊತ್ತಾ?

    ಗೂಗಲ್​ ರಿವರ್ಸ್​ ಇಮೇಜ್​ ಸರ್ಚ್​ ಇಂಜಿನ್​ ಸಹಾಯದ ಮೂಲಕ ಹುಡುಕಾಡಿದಾಗ ಇದೇ ಫೋಟೋ ಸ್ಪ್ಯಾನಿಶ್​ ಕಲಾವಿದ ಅಲ್ವರೋ ಹೆರಾಂಜ್​ ಅವರಿಗೆ ಸಂಬಂಧಿಸಿದ fuegofatuoart ಹೆಸರಿನ ಇನ್​​ಸ್ಟಾಗ್ರಾಂ ಪೇಜ್​ನಲ್ಲಿ ಪತ್ತೆಯಾಗಿದೆ. ಹೆರಾಂಜ್​ ಓರ್ವ ಶಿಲ್ಪಿ ಮತ್ತು ಸೃಜನಶೀಲ ಕಲಾವಿದರಾಗಿದ್ದಾರೆ.

    ಇನ್​ಸ್ಟಾಗ್ರಾಂ ಪೇಜ್​ನ ಮತ್ತೊಂದು ಪೋಸ್ಟ್​ನಲ್ಲಿ ಪ್ರಾಣಿಯ ಬಗ್ಗೆ ತಿಳಿಸಲಾಗಿದೆ. ನಿಮಗೆ ಪುಟ್ಟ ಅಕೆರ್​ಬೆಲ್ಟ್ಜ್​ ಪರಿಚಯಿಸಲು ಅವಕಾಶ ನೀಡಿ. ಅಕೆರ್​ಬೆಲ್ಟ್ಜ್ ಉತ್ತರ ಸ್ಪೇನ್‌ನ ಬಾಸ್ಕ್ ಪುರಾಣದ​ ಒಂದು ಪೌರಾಣಿಕ ಜೀವಿ. ಮೂಲತಃ ಇದನ್ನು ಪ್ರಾಣಿಗಳು ಮತ್ತು ಪ್ರಕೃತಿಯ ರಕ್ಷಕ ಎಂದು ಪರಿಗಣಿಸಲಾಗಿದೆ. ಪ್ರಾಚೀನ ಯುಗದ ಮಾಟಗಾತಿಯರು ಮತ್ತು ಕ್ರಿಶ್ಚಿಯನ್ ಧರ್ಮವು ಪ್ರಾಣಿಯನ್ನು ದೆವ್ವಕ್ಕೆ ಸಂಬಂಧಿಸಿದ ದುಷ್ಟ ಜೀವಿಗಳೆಂದು ಪರಿಗಣಿಸುವಂತೆ ಮಾಡಿತು. ನೀವು ಏನಾದರೂ ಭಾವಿಸಿ, ಆದರೆ, ಇದೊಂದು ಒಳ್ಳೆಯ ಜೀವಿಯಂತೆ ಕಾಣುತ್ತದೆ. ನಿಮಗೆ ಏನನಿಸುತ್ತದೆ ಎಂದು ಇನ್​ಸ್ಟಾಗ್ರಾಂನಲ್ಲಿ ಪ್ರಶ್ನಿಸಲಾಗಿದೆ.

    ಇದನ್ನೂ ಓದಿ: ‘ದೃಶ್ಯ’ ಸಿನಿಮಾ ಕಥೆ ನೆನಪಿಸಿತು ಅರ್ಚಕರ ಕೊಲೆ ರಹಸ್ಯ; ಕ್ಲೈಮ್ಯಾಕ್ಸ್​ನತ್ತ ತನಿಖೆ…

    ಹೀಗಾಗಿ ಫೇಸ್​ಬುಕ್​ ಬಳಕೆದಾರ ಹೇಳಿರುವಂತೆ ನಾಲ್ಕು ಕಣ್ಣುಳ್ಳ ಮೇಕೆ ರೀತಿಯ ಜೀವಿ ದಕ್ಷಿಣ ಸುಡಾನ್​ನಲ್ಲಿ ಪತ್ತೆಯಾಗಿಲ್ಲ. ಫ್ಯಾಕ್ಟ್​ಚೆಕ್​ ಪ್ರಕಾರ ಇದೊಂದು ಸ್ಪೇನ್​ನ ಪುರಾಣ ಕತೆಗಳಲ್ಲಿ ಬರುವ ಜೀವಿಯಾಗಿದೆ. ಸದ್ಯ ಇದರ ಉಪಸ್ಥಿತಿಯಿಲ್ಲ. ಇದೊಂದು ಕಾಲ್ಪನಿಕವಷ್ಟೇ ಎಂಬ ಸತ್ಯಾಂಶ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. (ಏಜೆನ್ಸೀಸ್​)

    ಶೌಚಗೃಹದಲ್ಲಿ ಮಹಿಳಾ ಪೇದೆ ಮೊಬೈಲ್ ನಂಬರ್: ಇದರ ಹಿಂದಿದೆ ವಾಟ್ಸ್​ಆ್ಯಪ್​ ಗ್ರೂಪ್​ ದುರ್ಬಳಕೆ!

    ಮೊದಲ ರಾತ್ರಿಯೇ ನರಕ ದರ್ಶನ: ಪತ್ನಿಗೆ ಅರಿವಳಿಕೆ ಇಂಜೆಕ್ಷನ್​ ನೀಡಿ ಟೆಕ್ಕಿ ಮಾಡಿದ್ದು ನೀಚ ಕೃತ್ಯ!

    VIDEO| ಭಾರೀ ಗಾತ್ರದ ಮೊಸಳೆಯ ಮಿಂಚಿನ ವೇಗದ ಬೇಟೆ ನೋಡಿ ಬೆಕ್ಕಸ ಬೆರಗಾದ ನೆಟ್ಟಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts