More

    ಬರೋಬ್ಬರಿ 4 ಬೋನಸ್​ ಷೇರು ಫೆ. 1ರಂದು ಹಂಚಿಕೆ: ಒಂದೇ ತಿಂಗಳಲ್ಲಿ ಬೆಲೆ ದುಪ್ಪಟ್ಟಾದ ಷೇರಿಗೆ ಭರ್ಜರಿ ಬೇಡಿಕೆ

    ಮುಂಬೈ: ಈ ಕಂಪನಿಯು ಕೇಂದ್ರ ಬಜೆಟ್​ ದಿನವಾದ ಫೆ. 1ರಂದು ಬೋನಸ್​ ಷೇರು ನೀಡುವುದಾಗಿ ಘೋಷಿಸಿದೆ. ಒಂದು ಷೇರಿಗೆ ಬರೋಬ್ಬರಿಗೆ 4 ಬೋನಸ್​ ಷೇರು ನೀಡುವುದಾಗಿ ಹೇಳಿದೆ.

    1 ರೂಪಾಯಿ ಮುಖಬೆಲೆಯ ಪ್ರತಿ ಷೇರಿಗೆ 4 ಷೇರುಗಳನ್ನು ಅರ್ಹ ಹೂಡಿಕೆದಾರರಿಗೆ ಬೋನಸ್ ಆಗಿ ನೀಡಲಾಗುವುದು ಎಂದು ಕಂಪನಿಯು ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ. ಈ ಬೋನಸ್ ಷೇರು
    ನೀಡುವ ದಾಖಲೆ ದಿನಾಂಕವನ್ನು ಫೆಬ್ರವರಿ 1 ಎಂದು ನಿಗದಿಪಡಿಸಲಾಗಿದೆ.

    ಇದೇ ಸಲಾಸರ್ ಟೆಕ್ನೋ ಇಂಜಿನಿಯರಿಂಗ್ ಲಿಮಿಟೆಡ್​ (Salasar Techno Engineering Ltd.) ಕಂಪನಿ. ಸೋಮವಾರ ಈ ಕಂಪನಿಯ ಷೇರುಗಳು ಮತ್ತೆ ಶೇಕಡಾ 10 ರ ಅಪ್ಪರ್ ಸರ್ಕ್ಯೂಟ್ ತಲುಪಿದವು. ಈ ಮೊದಲು ಕೂಡ ಕಂಪನಿಯ ಷೇರು ಗುರುವಾರದಂದು ಶೇಕಡಾ 10 ರಷ್ಟು ಅಪ್ಪರ್ ಸರ್ಕ್ಯೂಟ್ ತಲುಪಿತ್ತು.

    ಕಂಪನಿಯ ಷೇರುಗಳಲ್ಲಿ ಈ ಬಿರುಸಿನ ಏರಿಕೆಯ ಹಿಂದಿನ ಕಾರಣವೆಂದರೆ ಬೋನಸ್ ಷೇರುಗಳ ಘೋಷಣೆ ಎಂಬುದು ಸ್ಪಷ್ಟವಾಗಿದೆ.

    ಫೆಬ್ರವರಿ 1ರಂದು ಈ ಕಂಪನಿಯ ಹೂಡಿಕೆದಾರರು ತಮ್ಮ ಪ್ರತಿ ಷೇರಿಗೆ 4 ಬೋನಸ್​ ಷೇರುಗಳನ್ನು ಉಚಿತವಾಗಿ ಪಡೆಯುತ್ತಾರೆ. ಕಂಪನಿಯು ಬೋನಸ್ ಷೇರುಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2021 ರಲ್ಲಿ ಕೂಡ ಬೋನಸ್ ಷೇರುಗಳನ್ನು ಕಂಪನಿ ವಿತರಿಸಿದೆ. ಪ್ರತಿ 1 ಷೇರಿಗೆ 1 ಬೋನಸ್ ಷೇರು ನೀಡಿತ್ತು. ಅದಲ್ಲದೆ, ಕಂಪನಿಯು 2022 ರಲ್ಲಿ ತನ್ನ ಸ್ಟಾಕ್ ಅನ್ನು 10 ಭಾಗಗಳಾಗಿ ವಿಂಗಡಿಸಿತ್ತು.

    ಕಂಪನಿಯ ಷೇರುಗಳ ಬೆಲೆ ಸೋಮವಾರ ಬಿಎಸ್‌ಇಯಲ್ಲಿ 10 ಪ್ರತಿಶತದ ಅಪ್ಪರ್ ಸರ್ಕ್ಯೂಟ್ ಅನ್ನು ಹೊಡೆದ ನಂತರ ರೂ 132.20 ರ ಮಟ್ಟವನ್ನು ತಲುಪಿದವು. ಈ ಷೇರಿನ 52 ವಾರದ ಕನಿಷ್ಠ ಬೆಲೆ 36 ರೂಪಾಯಿ ಇದೆ.

    ಬೋನಸ್ ಷೇರು ನೀಡುತ್ತಿರುವ ಈ ಕಂಪನಿಯ ಷೇರ ಬೆಲೆ ಕಳೆದ ಒಂದು ತಿಂಗಳಲ್ಲೇ ಶೇ.100ರಷ್ಟು ಏರಿಕೆಯಾಗಿದೆ. ಅಂದರೆ ಈ ಒಂದೇ ತಿಂಗಳಲ್ಲಿ ಹೂಡಿಕೆದಾರರ ಹಣ ದ್ವಿಗುಣಗೊಂಡಿದೆ. ಅಲ್ಲದೆ, ಈ ಕಂಪನಿಯ ಷೇರು ಬೆಲೆ ಕಳೆದ 3 ತಿಂಗಳಲ್ಲಿ ಶೇ. 188ರಷ್ಟು ಏರಿಕೆ ಕಂಡಿದೆ.

    ಸಲಾಸರ್ ಟೆಕ್ನೋ ಇಂಜಿನಿಯರಿಂಗ್ ಲಿಮಿಟೆಡ್ ಸ್ಟೀಲ್ ಫ್ಯಾಬ್ರಿಕೇಶನ್ ಮತ್ತು ಮೂಲಸೌಕರ್ಯ ನಿರ್ಮಾಣ ಸೇವೆಗಳನ್ನು ಒದಗಿಸುತ್ತದೆ. ಕಂಪನಿಯು ವಿದ್ಯುದ್ದೀಕರಣ, ವಿದ್ಯುತ್ ಪ್ರಸರಣ ಮಾರ್ಗಗಳು ಮತ್ತು ಸೌರ ವಿದ್ಯುತ್ ಸ್ಥಾವರಗಳಿಗೆ ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿಯಂತ್ರಣ ಸೇವೆಗಳನ್ನು ನೀಡುತ್ತದೆ.

    ​ನೆಟ್​ ಬ್ಯಾಂಕ್​ನಲ್ಲಿ ತಕ್ಷಣ ಹಣ ಟ್ರಾನ್ಸಫರ್ ಮಿತಿ ಏರಿಕೆ: 1 ಲಕ್ಷದ ಬದಲು ಇನ್ನು 5 ಲಕ್ಷ ರೂ.ವರೆಗೆ ಕಳುಹಿಸಬಹುದು….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts