More

    ಜಮ್ಮು-ಕಾಶ್ಮೀರದ ಬಿಜೆಪಿ ಮುಖಂಡರಲ್ಲಿ ಹೆಚ್ಚುತ್ತಿದೆ ಭಯ; ಇಂದು ನಾಲ್ವರು ರಾಜೀನಾಮೆ

    ಶ್ರೀನಗರ: ಇಂದು ಜಮ್ಮುಕಾಶ್ಮೀರದಲ್ಲಿ ಬಿಜೆಪಿ ಮುಖಂಡನೋರ್ವನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಬೆನ್ನಲ್ಲೇ, ಬಿಜೆಪಿಯ ನಾಲ್ವರು ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

    ಇಂದು ಬುಡ್​ಗಾಮ್​​ ಜಿಲ್ಲೆಯ ಒಬಿಸಿ ಮೋರ್ಚಾ ಅಧ್ಯಕ್ಷ ಅಬ್ದುಲ್​ ಹಮೀದ್​ ನಜರ್​ ಮೇಲೆ ಗುಂಡಿನ ದಾಳಿ ನಡೆದಿದೆ. ಅವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಇದೀಗ ಬುಡ್​ಗಾಮ್ ಜಿಲ್ಲೆಯ ಬಿಜೆಪಿ ಎಂಎಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೇರಿ ಒಟ್ಟು ನಾಲ್ವರು ರಾಜೀನಾಮೆ ನೀಡಿದ್ದಾರೆ.
    ಇಂದು ಮುಂಜಾನೆ ಉಗ್ರರು ಅಬ್ದುಲ್​ ಮೇಲೆ ಗುಂಡು ಹಾರಿಸಿದ್ದಾರೆ. ಕಾಶ್ಮೀರದಲ್ಲಿ ಬಿಜೆಪಿ ನಾಯಕರ ಮೇಲಿನ ದಾಳಿಗಳು ಹೆಚ್ಚಾಗುತ್ತಿವೆ. ಇದು ಪಾಕಿಸ್ತಾನ ಹತಾಶೆಯಿಂದ ಮಾಡುತ್ತಿರುವ ಕೆಲಸ ಎಂದು ಜಮ್ಮುಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದ್ರ ರೈನಾ ತಿಳಿಸಿದ್ದಾರೆ.  ಇದನ್ನೂ ಓದಿ: PHOTO GALLERY: ಕಿಚ್ಚ ಸುದೀಪ್​ ದತ್ತು ಪಡೆದ ಶಾಲೆಗಳ ನೈಜ ಸ್ಥಿತಿ ಇಲ್ಲಿದೆ ನೋಡಿ..

    ಜಮ್ಮುಕಾಶ್ಮೀರದಲ್ಲಿ ಬಿಜೆಪಿ ನಾಯಕರ ಸಂಖ್ಯೆ ಹೆಚ್ಚುತ್ತಿರುವುದನ್ನು ಪಾಕಿಸ್ತಾನಕ್ಕೆ ಸಹಿಸಲಾಗುತ್ತಿಲ್ಲ. ಹಾಗಾಗಿ ಉಗ್ರರನ್ನು ಛೂ ಬಿಡುವ ಮೂಲಕ, ಹೇಡಿತನದ ನಡೆ ತೋರುತ್ತಿದೆ ಎಂದು ಹೇಳಿದ್ದಾರೆ.

    ಜುಲೈನಲ್ಲಿ ಬಂಡಿಪೋರಾ ಬಿಜೆಪಿ ನಾಯಕ ಶೇಖ್​ ವಾಸೀಂ ಬಾರಿ ಅವರನ್ನು ಉಗ್ರರು ಕೊಂದಿದ್ದಾರೆ. ಅವರ ಸೋದರ, ತಂದೆಯೂ ಕೂಡ ಸಾವನ್ನಪ್ಪಿದ್ದಾರೆ. ಇವೆಲ್ಲ ಬೆಳವಣಿಗೆಗಳ ಬಳಿಕ ಈಗ ನಾಲ್ಕು ಮುಖಂಡರು ರಾಜೀನಾಮೆ ನೀಡಿದ್ದಾರೆ. (ಏಜೆನ್ಸೀಸ್​)

    ಕಡತಗಳಿಗೆ ಸಹಿ ಹಾಕಲೆಂದೆ ಐಎಎಸ್ ಅಧಿಕಾರಿಯಾದೆ; ಅಪ್ಪನ ಕನಸು ನನಸಾದ ಸಾರ್ಥಕತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts