More

    ಭಾರತ-ಪಾಕ್ ಗಡಿಯಲ್ಲಿ 3 ವರ್ಷದಿಂದ ಪ್ರಾಣ ಕಳೆದುಕೊಂಡವರು 39 ಮಂದಿ- ಬಾಂಗ್ಲಾ ಗಡಿಯಲ್ಲಿ ಒಳನುಸುಳಿದವರೆಷ್ಟು?

    ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ 39 ಮಂದಿ ಸಾವನ್ನಪ್ಪಿದ್ದು, 124 ಒಳನುಸುಳುವಿಕೆ ಘಟನೆಗಳು ನಡೆದಿವೆ ಎಂದು ಗೃಹ ಸಚಿವಾಲಯ ಲೋಕಸಭೆಗೆ ತಿಳಿಸಿದೆ.

    ಇದನ್ನೂ ಓದಿ: ಲೋಕಸಭೆ ಕಲಾಪ ವೇಳೆ ಭದ್ರತಾ ಲೋಪ; ಅಧಿವೇಶನದ ಪಾಸ್​ ಪಡೆಯಲು ಆರೋಪಿ ಮೂರು ತಿಂಗಳು ಅಲೆದಿದ್ದ
    ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಅವರು, ದೇಶದ ಗಡಿಗಳನ್ನು ಕಾಪಾಡುವವಲ್ಲಿ ಭದ್ರತಾ ಪಡೆಗಳು ಸಮರ್ಥವಾಗಿ ಕೆಲಸ ಮಾಡಿವೆ. ಮರುಭೂಮಿ, ಪರ್ವತಗಳು, ಅರಣ್ಯ ಮತ್ತು ನದಿ ಪ್ರದೇಶಗಳು ಗಡು ಹಂಚಿಕೊಂಡಿದ್ದು, ಅಂತಹ ಕಡೆ ಕಣ್ತಪ್ಪಿಸಿ ನುಸುಳುಕೋರರು ಬರಬಹುದು. ಆದರೆ ಅಂತಹ ಪ್ರಯತ್ನಗಳನ್ನೂ ವಿಫಲಗೊಳಿಸಲಅಗಿದೆ ಎಂದು ತಿಳಿಸಿದರು.

    ಭಾರತ-ಚೀನಾ ಗಡಿ ಮತ್ತು ಭಾರತ-ಭೂತಾನ್ ಗಡಿಯಲ್ಲಿ ಯಾವುದೇ ಒಳನುಸುಳುವಿಕೆ, ಹತ್ಯೆ ಅಥವಾ ಗಾಯಗೊಂಡ ಘಟನೆ ವರದಿಯಾಗಿಲ್ಲ ಎಂದು ಅವರು ಹೇಳಿದರು.

    ‘ಕಳೆದ ಮೂರು ವರ್ಷದಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ 17 ಜನ ಗಾಯಗೊಂಡಿದ್ದಾರೆ. ಇದೇ ಅವಧಿಯಲ್ಲಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿ 2,654 ಒಳನುಸುಳುವಿಕೆ ಘಟನೆಗಳು ದಾಖಲಾಗಿವೆ. 13 ಜನ ಸಾವನ್ನಪ್ಪಿದ್ದಾರೆ. ಭಾರತ-ನೇಪಾಳ ಗಡಿಯಿಂದ 34 ಒಳನುಸುಳುವಿಕೆ ಘಟನೆಗಳು ದಾಖಲಾಗಿವೆ. ಭಾರತ-ಮ್ಯಾನ್ಮಾರ್ ಗಡಿಯಲ್ಲಿ 17 ಜನರು ಗಾಯಗೊಂಡಿದ್ದಾರೆ. ಗಡಿಯಾಚೆಗಿನ ನುಸುಳುವಿಕೆಯನ್ನು ನಿಲ್ಲಿಸಲು ಮತ್ತು ನಮ್ಮ ಪ್ರದೇಶಗಳನ್ನು ಭದ್ರಪಡಿಸಲು ಕೇಂದ್ರವು ಬಹುಮುಖಿ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ ಎಂದು ಪ್ರಮಾಣಿಕ್ ಹೇಳಿದರು.

    ಅಂತರಾಷ್ಟ್ರೀಯ ಗಡಿಗಳಲ್ಲಿ ಗಡಿ ಭದ್ರತಾ ಪಡೆಗಳ ನಿಯೋಜನೆಯನ್ನು ಈ ತಂತ್ರವು ಒಳಗೊಳ್ಳುತ್ತದೆ. ಗಸ್ತು ತಿರುಗುವುದು, ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸುವುದು, ಗಡಿ ವೀಕ್ಷಣಾ ಪೋಸ್ಟ್‌ಗಳಲ್ಲಿ ಸಿಬ್ಬಂದಿ ನಿಯೋಜನೆ, ಬಾರ್ಡರ್ ಔಟ್ ಪೋಸ್ಟ್‌ಗಳ ಮ್ಯಾಪಿಂಗ್ (ಬಿಒಪಿಎಸ್​), ಕಣ್ಗಾವಲು ಉಪಕರಣಗಳ ನಿಯೋಜನೆ, ಗುಪ್ತಚರ ಜಾಲವನ್ನು ಬಲಪಡಿಸುವುದು, ಬೇಲಿ ಮತ್ತು ಫ್ಲಡ್‌ಲೈಟ್‌ಗಳನ್ನು ಗಡಿಯುದ್ದಕ್ಕೂ ಅಳವಡಿಸುವುದು ಇತ್ಯಾದಿ. ತಾಂತ್ರಿಕ ಪರಿಹಾರಗಳ ನಿಯೋಜನೆಯ ಮೂಲಕ ಗಡಿಗಳ ಪರಿಣಾಮಕಾರಿ ನಿಯಂತ್ರಣ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

    ಮಹಿಳೆಯೊಂದಿಗೆ ಡೇಟಿಂಗ್: ಕೊಲಂಬಿಯಾದಲ್ಲಿ ಯುಎಸ್ ಹಾಸ್ಯನಟನ ಅಪಹರಿಸಿ ಕೊಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts