More

    ಲೋಕಸಭೆ ಕಲಾಪ ವೇಳೆ ಭದ್ರತಾ ಲೋಪ; ಅಧಿವೇಶನದ ಪಾಸ್​ ಪಡೆಯಲು ಆರೋಪಿ ಮೂರು ತಿಂಗಳು ಅಲೆದಿದ್ದ

    ನವದೆಹಲಿ: ಇತ್ತೀಚೆಗಷ್ಟೇ ಉದ್ಘಾಟನೆಯಾದ ನೂತನ ಸಂಸತ್​ ಭವನದಲ್ಲಿ ಭಾರಿ ಭದ್ರತಾ ಲೋಪ ಕಂಡುಬಂದಿದ್ದು, ಎರಡು ಪ್ರತ್ಯೇಕ ಘಟನೆಯಲ್ಲಿ ನಾಲ್ವರು ಅಪರಿಚಿತರು ಸದನದ ಒಳಗೆ ಮತ್ತು ಹೊರಗೆ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಒಂದರಲ್ಲಿ ಆರೋಪಿ ಮನೋರಂಜನ್ ಅಧಿವೇಶನದ ಪಾಸ್​ಗಾಗಿ ಮೂರು ತಿಂಗಳುಗಳ ಕಾಲ ಸಂಸದರ ಕಚೇರಿ ಅಲೆದಾಡಿದ್ದ ಎಂದು ತಿಳಿದು ಬಂದಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಪ್ರತಾಪ್​ ಸಿಂಹ ಆಪ್ತರೊಬ್ಬರು, ಹೊಸ ಸಂಸತ್​ ಭವನ ವೀಕ್ಷಿಸುವ ಸಲುವಾಗಿ ಆರೋಪಿ ಪಾಸ್​ ಪಡೆದಿದ್ದ. ಇದಲ್ಲದೆ ಮಹಿಳೆ ಸೇರಿದಂತೆ ಇನ್ನಿಬ್ಬರು ಪಾಸ್​ ಪಡೆದಿದ್ದರು ಎಂದು ತಿಳಿಸಿದ್ದಾರೆ.

    ಆರೋಪಿ ಮನೋರಂಜನ್​ ಕಳೆದ ಮೂರು ತಿಂಗಳಿನಿಂದ ಸಂಸದರ ಕಚೇರಿಗೆ ಪಾಸ್​ಗಾಗಿ ಅಲೆದಾಟ ನಡೆಸಿದ್ದ. ಇದಲ್ಲದೆ ಸಹ ಆರೋಪಿ ಸಾಗರ್​ ಶರ್ಮಾನನ್ನು ತನ್ನ ಸ್ನೇಹಿತ ಎಂದು ಸಂಸದರ ಕಚೇರಿಗೆ ಪರಿಚಯಿಸಿದ್ದ. ನೂತನ ಸಂಸತ್​ ಭವನ ನೋಡಲು ಪಾಸ್​ ಬೇಕಾಗಿದೆ ಎಂದು ಹೇಳಿ ಆರೋಪಿಗಳು ಪಾಸ್​ ಪಡೆದಿದ್ದರು.

    Teargas

    ಇದನ್ನೂ ಓದಿ: ಲೋಕಸಭೆ ಕಲಾಪ ವೇಳೆ ಭದ್ರತಾ ಲೋಪ; ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೇರಿಸಲಿ ಮನೋರಂಜನ್ ತಂದೆ

    ಬುಧವಾರ ಸಂಸದ ಪ್ರತಾಪ್​ ಸಿಂಹ ಅವರ ಆದೇಶದ ಮೇರೆಗೆ ಮೂರು ಪಾಸ್​ಗಳನ್ನು ನೀಡಲಾಗಿತ್ತು. ಈ ಪೈಕಿ ಓರ್ವ ಮಹಿಳೆ ಸಹ ಪಾಸ್​ ಪಡೆದಿದ್ದರು. ಆದರೆ, ಕಾರಣಾಂತರಗಳಿಂದ ಅವರು ಕಲಾಪವನ್ನು ವೀಕ್ಷಿಸದೆ ಪಾಸ್​ ಹಿಂತಿರುಗಿಸಿ ತೆರಳಿದ್ದಾರೆ. ಘಟನೆಗೂ ಮಹಿಳೆಗೂ ಯಾವುದೇ ಸಂಬಂಧವಿಲ್ಲ. ಆರೋಪಿ ಮನೋರಂಜನ್​ ಕಳೆದ ಮೂರು ತಿಂಗಳಿನಿಂದ ಸಂಸದರ ಕಚೇರಿಗೆ ನಿರಂತರವಾಗಿ ಭೇಟಿ ನೀಡಿದ ಕಾರಣ ಅವರಿಗೆ ಪಾಸ್​ ನೀಡಲಾಗಿತ್ತು.

    ಸಾಮಾನ್ಯವಾಗಿ ತಮ್ಮ ಕ್ಷೇತ್ರದ ಜನರು ಕಲಾಪವನ್ನು ವೀಕ್ಷಿಸಲು ಪಾಸ್​ ಕೇಳಿದಾಗ ಸಂಸದರು ನೀಡುತ್ತಾರೆ. ಅದೇ ರೀತಿ ಪ್ರತಾಪ್​ ಸಿಂಹ ಅವರು ಪಾಸ್​ ನೀಡಿದ್ದಾರೆ. ಇದರಲ್ಲಿ ಯಾವುದೇ ರೀತಿಯ ದುರುದ್ದೇಶವಿಲ್ಲ ಎಂದು ಪ್ರತಾಪ್​ ಸಿಂ ಆಪ್ತರೊಬ್ಬರು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts