More

    39 ಗ್ರಾಪಂಗೆ 27ರಂದು ಮತದಾನ

    ಹಾನಗಲ್ಲ: ಹಾನಗಲ್ಲ ತಾಲೂಕಿನ 39 ಗ್ರಾಮ ಪಂಚಾಯಿತಿಗಳ 559 ಸ್ಥಾನಗಳಿಗೆ ಡಿ. 27ರಂದು ಮತದಾನ ಜರುಗಲಿದೆ. ಕೋವಿಡ್ ನಿಯಮಾವಳಿಗಳನ್ವಯ ಎಲ್ಲ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದ್ದು, ನಿರ್ಭಯವಾಗಿ ಮತದಾನ ಮಾಡಬಹುದು ಎಂದು ಚುನಾವಣಾಧಿಕಾರಿಗಳೂ ಆಗಿರುವ ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಹೇಳಿದರು.

    ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ತಾಲೂಕಿನಲ್ಲಿ ಒಟ್ಟು 42 ಗ್ರಾಪಂಗಳಿದ್ದು, ಹಾವಣಗಿ, ಹುಲ್ಲತ್ತಿ, ಕೂಡಲ ಗ್ರಾಪಂಗಳ ಅವಧಿ ಪೂರ್ಣಗೊಳ್ಳದ ಕಾರಣ ಕೇವಲ 39 ಗ್ರಾಪಂಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದೆ. ಒಟ್ಟು 257 ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಪ್ರಸ್ತುತ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸಾವಿರಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವ ಗ್ರಾಮಗಳಲ್ಲಿ ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ತಾಲೂಕಿನಲ್ಲಿ 87,219 ಪುರುಷ, 80,360 ಮಹಿಳೆಯರು ಹಾಗೂ 5 ಇತರೆ ಸೇರಿದಂತೆ ಒಟ್ಟು 1,67,584 ಮತದಾರರಿದ್ದಾರೆ. ಇದರೊಂದಿಗೆ 72 ಜನ ಸೇವಾ ಮತದಾರರಿದ್ದಾರೆ ಎಂದರು.

    ಡಿ. 12ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಡಿ. 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. 17ರಂದು ನಾಮಪತ್ರಗಳ ಪರಿಶೀಲನೆ, 19 ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನ. 27ರಂದು ಮತದಾನ ನಡೆಯುತ್ತದೆ. 30ರಂದು ಪಟ್ಟಣದ ಕುಮಾರೇಶ್ವರ ಪದವಿ ಕಾಲೇಜ್​ನಲ್ಲಿ ಮತ ಎಣಿಕೆ ಜರುಗಲಿದೆ. ಕೋವಿಡ್ ಸೋಂಕಿತರೂ ಮತ ಚಲಾಯಿಸಬಹುದಾಗಿದ್ದು, ಸೋಂಕಿತರಿಗೆ ಸಂಜೆ 4 ರಿಂದ 5 ರವರೆಗೆ ಅವಕಾಶ ನೀಡಲಾಗಿದೆ ಎಂದರು.

    ನ. 30ರಿಂದಲೇ ನೀತಿ ಸಂಹಿತೆ ಆರಂಭಗೊಂಡಿದ್ದು, ಡಿ. 31ರವರೆಗೆ ಜಾರಿಯಲ್ಲಿರುತ್ತದೆ. ಹಾನಗಲ್ಲ ಪಟ್ಟಣ ಹೊರತುಪಡಿಸಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಚುನಾವಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೊಂಡಿದೆ. ಯಾವುದೇ ಸಭೆ-ಸಮಾರಂಭ, ಸರ್ಕಾರಿ ಯೋಜನೆಗಳ ಚಾಲನೆ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಕೈಗೊಳ್ಳುವಂತಿಲ್ಲ. ಕಾನೂನು ಪಾಲನೆಗಾಗಿ 14 ಸೆಕ್ಟರ್ ಆಫೀಸರ್ ನೇಮಕಗೊಳಿಸಲಾಗಿದೆ. ನಾಮಪತ್ರ ಸ್ವೀಕಾರಕ್ಕಾಗಿ 42 ಆರ್​ಒ, 43 ಎಆರ್​ಒಗಳನ್ನು ನೇಮಕಗೊಳಿಸಲಾಗಿದೆ ಎಂದರು.

    ಕಾನೂನು ಪಾಲಿಸಿ ಶಾಂತಿಯುತ ಚುನಾವಣೆ ನಡೆಸಲು ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದ್ದು, ಕಾನೂನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು. ಯಾವುದೇ ಪಕ್ಷದ ಚಿಹ್ನೆ ಹೊಂದಿರದ ಅಭ್ಯರ್ಥಿಗಳ ಚುನಾವಣೆ ಇದಾಗಿದ್ದು, ಅಕ್ರಮಗಳು ಜರುಗಿದ ಮಾಹಿತಿಗಳಿದ್ದಲ್ಲಿ ತಹಸೀಲ್ದಾರ್ ಕಚೇರಿಯ ಸಹಾಯವಾಣಿ 08379-262241 ಇಲ್ಲಿಗೆ ದೂರು, ಮಾಹಿತಿ ನೀಡಬಹುದು.

    | ಪಿ.ಎಸ್. ಎರ್ರಿಸ್ವಾಮಿ, ಚುನಾವಣಾಧಿಕಾರಿ, ತಹಸೀಲ್ದಾರ್ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts