More

    ಸಂಸ್ಕೃತಿ, ಪರಂಪರೆ ಬಿಂಬಿಸುವ ಜಾತ್ರೋತ್ಸವ

    ಕಾಳಗಿ: ಜಾತ್ರೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಮ್ಮ ನಾಡಿನ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುತ್ತವೆ ಎಂದು ಅಚಲೇರಿಯ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಹೇಳಿದರು.

    ಮಂಗಲಗಿಯಲ್ಲಿ ಶ್ರೀ ಸದ್ಗುರು ಯಲ್ಲಾಲಿಂಗ ಮಹಾರಾಜರ ೩೮ನೇ ಜಾತ್ರೋತ್ಸವ ನಿಮಿತ್ತ ಬುಧವಾರ ಸಂಜೆ ಆಯೋಜಿಸಿದ್ದ ಮಹಾದಾಸೋಹಿ ಶರಣಬಸವೇಶ್ವರ ಪುರಾಣ ಮಹಾಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿ, ಆಧುನಿಕತೆಯ ಅಬ್ಬರದ ಮಧ್ಯೆಯೂ ಗ್ರಾಮೀಣ ಪ್ರದೇಶಗಳಲ್ಲಿ ಸಂಭ್ರಮದಿಂದ ಜಾತ್ರೋತ್ಸವ, ಪುರಾಣ- ಪ್ರವಚನ ಕಾರ್ಯಕ್ರಮ ನಡೆಯುತ್ತಿವೆ. ಇವುಗಳಿಂದ ಸಂತಹ ಹೆಚ್ಚಾಗಿ, ಸಂಸ್ಕೃತಿ ಉಳಿಯಲಿದೆ ಎಂದರು.

    ಶ್ರೀನಿವಾಸ ಸರಡಗಿ ಶಕ್ತಿಪೀಠದ ಶ್ರೀ ಡಾ.ಅಪ್ಪರಾವ ದೇವಿ ಮುತ್ಯಾ ಆಶಿರ್ವಚನ ನೀಡಿ, ನಮ್ಮೆಲ್ಲ ಕಷ್ಟಗಳನ್ನು ದೂರ ಮಾಡುವ ಶಕ್ತಿ ಭಗವಂತನಿಗಿದೆ. ಶ್ರದ್ಧಾ, ಭಕ್ತಿಯಿಂದ ಮಾಡುವ ಪ್ರಾರ್ಥನೆ ದೇವರು ಸ್ವೀಕರಿಸುತ್ತಾನೆ. ಹೀಗಾಗಿ ಸದೃಢ ನಂಬಿಕೆಯೊಂದಿಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

    ಸುಲೇಪೇಟ ಏಕದಂಡಗಿ ಮಠದ ಶ್ರೀ ದೊಡ್ಡೇಂದ್ರ ಸ್ವಾಮೀಜಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ್ ಕಾಳಗಿ ಮಾತನಾಡಿದರು.

    ಪ್ರಮುಖರಾದ ಗುರುನಾಥ ಮಹಾರಾಜ, ಸಾಯಿಬಣ್ಣ ಕೋಟನೂರ, ಬಾಬುರಾವ ಪೂಜಾರಿ, ಭೀಮರಾವ ದಂಡೋತಿ, ದೊಂಡಿಬಾ ಪಾಟೀಲ್, ರಾಜಶೇಖರ ನೀಲಹಳ್ಳಿ, ಗುಂಡಪ್ಪ ಭೂತಪುರ, ಕಲ್ಯಾಣಕುಮಾರ ಶೀಲವಂತ, ಮಲ್ಲಿಕಾರ್ಜುನ ಉಪ್ಪಾಣಿ, ಶ್ರೀಕಾಂತ ಕಲಬುರಗಿ, ವೀರೇಶ ಭೂತಪುರ, ಬಸವರಾಜ ದುಲಗುಂಡಿ, ಮೋನಪ್ಪ ವಿಶ್ವಕರ್ಮ, ಸೂರ್ಯಕಾಂತ ಕಟ್ಟಿಮನಿ, ಸಲಾವೋದ್ದಿನ್, ಅಕ್ಷಯ ಕುಲಕರ್ಣಿ ಇತರರಿದ್ದರು.

    ಮಲ್ಲಿಕಾರ್ಜುನ ಶಾಸ್ತಿç ಪುರಾಣ ನೀಡಿದರು. ಶ್ರೀಶೈಲಕುಮಾರ ವಗ್ಗಾವಿ ಸಂಗೀತ, ಮನೋಹರ ವಿಶ್ವಕರ್ಮ ತಬಲಾ ಸಾಥ್ ನೀಡಿದರು. ಮಹೇಶ ತುಪ್ಪದ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts