More

    ವಾರದಲ್ಲಿ 2ನೇ ಬಾರಿ 37 ಡಿಗ್ರಿ ಸೆ. ದಾಖಲು

    ಬೆಂಗಳೂರು: ಮಹಾನಗರದಲ್ಲಿ ಬಿಲಿಸಿನ ಝಳ ಮತ್ತೆ ಹೆಚ್ಚಾಗುತ್ತಿದ್ದು, ಮಂಗಳವಾರ 37.2 ಡಿಗ್ರಿ ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಒಂದು ವಾರದ ಅಂತರದಲ್ಲಿ ಎರಡನೇ ಬಾರಿ 37 ಡಿಗ್ರಿ ಸೆ. ದಾಖಲಾಗಿರುವುದು ನಾಗರಿಕರು ಬೇಸಿಗೆಯ ಬೇಗೆಯಲ್ಲಿ ಬೇಯುವಂತಾಗಿದೆ.

    ಈ ವರ್ಷದ ಮಾರ್ಚ್ ತಿಂಗಳು ಪೂರ್ತಿ ಒಂದು ಹನಿ ಮಳೆಯೂ ಆಗಿಲ್ಲ. ಯುಗಾದಿ ಹಬ್ಬ ಸಮೀಪಿಸುತ್ತಿದ್ದರೂ, ಮಳೆ ಬೀಳುವ ಕುರುಹು ಕಾಣುತ್ತಿಲ್ಲ. ಹೀಗಾಗಿ ಏಪ್ರಿಲ್ ತಿಂಗಳಲ್ಲೂ ಸುಡು ಬಿಸಿಲು ಮುಂದುವರಿಯುವ ಲಕ್ಷಣಗಳು ಗೋಚರಿಸಿದೆ.

    ದೇಶದ ಹಲವೆಡೆ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಿನಲ್ಲಿ ಬಿಸಿಲ ಬೇಗೆ ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದ ಮರುದಿನವೇ ನಗರದಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆ. ದಾಟಿದೆ. ಮಂಗಳವಾರ ಮಧ್ಯಾಹ್ನ ಸುಡು ಬಿಸಿಲಿನ ವಾತಾವರಣ ಇದ್ದ ಕಾರಣ ರಸ್ತೆಗಳಲ್ಲಿ ವಾಹನ ಸಂಚಾರ ತುಸು ಕಡಿಮೆಯಿತ್ತು. ಆದರೂ, ಕೆಲವೆಡೆ ಮಾರುಕಟ್ಟೆ ಹಾಗೂ ಮನರಂಜನಾ ತಾಣಗಳಲ್ಲಿ ಜನಸಂದಣಿ ಕಂಡಿತು. ಸದ್ಯ ಶಾಲಾ ವಿದ್ಯಾರ್ಥಿಗಳ ಪರೀಕ್ಷೆ ಮುಗಿದಿರುವ ಕಾರಣ ಅವರೆಲ್ಲರೂ ಮನೆಯಲ್ಲೇ ಇರುವಂತಾಗಿದೆ. ಮುಂದಿನ ದಿನಗಳಲ್ಲಿ ಜನರು ಬಿಸಿಲಿನಲ್ಲಿ ಅನಗತ್ಯವಾಗಿ ಓಡಾಟ ಮಾಡದಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts