More

    ಜೆಎನ್​ಯು ಹಿಂಸಾಚಾರ| ಏಮ್ಸ್​ನ ಟ್ರೌಮಾ ಸೆಂಟರ್​ನಲ್ಲಿ ಹಿಂಸಾಚಾರದಿಂದ ಗಾಯಗೊಂಡ 36 ಜನರಿಗೆ ಚಿಕಿತ್ಸೆ, ಬಿಡುಗಡೆ

    ನವದೆಹಲಿ: ಜೆಎನ್​ಯು ಹಿಂಸಾಚಾರ ಪ್ರಕರಣದಲ್ಲಿ ಗಾಯಗೊಂಡ 36 ಜನರಿಗೆ ಚಿಕಿತ್ಸೆ ನೀಡಿ ಸೋಮವಾರ ಬೆಳಗ್ಗೆ ಬಿಡುಗಡೆ ಮಾಡಲಾಗಿದೆ ಎಂದು ಏಮ್ಸ್​ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಮೂವತ್ತಾರು ಜನರ ಪೈಕಿ ನಾಲ್ವರು ಜೆಎನ್​ಯುನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು. ಅವರಿಗೆ ಸಣ್ಣ ಪ್ರಮಾಣದ ಗಾಯ ತಲೆಗೆ ಆಗಿದ್ದವು. ಇನ್ನುಳಿದವರಿಗೆ ಮೂಳೆ ಮುರಿತ, ಸ್ನಾಯು ಹರಿದುಹೋಗಿರುವಂಥದ್ದು ಆಗಿತ್ತು. ಎಲ್ಲರಿಗೂ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ.

    ಎಲ್ಲರನ್ನೂ ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು. ಸೋಮವಾರ ನಸುಕಿನ 2 ಗಂಟೆಗೆ ಬಿಡುಗಡೆ ಮಾಡಲಾಗಿದೆ. ಗಾಯಗೊಂಡವರಲ್ಲಿ ಯೋಗೇಂದ್ರ ಯಾದವ್ ಕೂಡ ಒಬ್ಬರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts