More

    ‘ಮಹಾ’ ವರುಣಾಘಾತ: ಭೂಕುಸಿತಕ್ಕೆ 36 ಮಂದಿ ಬಲಿ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

    ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ 36 ಮಂದಿ ಸಾವಿಗೀಡಾಗಿದ್ದಾರೆ. ರಾಜ್ಯದ ಕೊಂಕಣ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿರುವ ಪರಿಣಾಮ ಭೂಕುಸಿತ ಉಂಟಾಗಿದೆ.

    ಭೂಕುಸಿತವು ಗುರುವಾರ ಸಂಭವಿಸಿದ್ದು, ಇಂದು 32 ಶವಗಳು ಒಂದೇ ಸ್ಥಳದಲ್ಲಿ ಪತ್ತೆಯಾಗಿವೆ ಮತ್ತು ಉಳಿದ ನಾಲ್ಕು ಶವಗಳು ಬೇರೆ ಸ್ಥಳದಲ್ಲಿ ಸಿಕ್ಕಿವೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯು ಇದೆ. ಪ್ರವಾಹ ಹಾಗೂ ಭೂಕುಸಿತ ಭೀತಿಯಲ್ಲಿ ಸಾವಿರಾರು ಮಂದಿ ಸಿಲುಕಿದ್ದು, ಹೆಲಿಕಾಪ್ಟರ್​ ಸಹಾಯದಿಂದ ಜನರನ್ನು ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ.

    ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರೇ ಸ್ವತಃ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದು, ಸ್ಥಳೀಯ ಅಧಿಕಾರಿಗಳ ಜತೆ ಇಂದು ಮಾತನಾಡಿದ್ದಾರೆ. ನೌಕಾಪಡೆಯ ಎರಡು ರಕ್ಷಣಾ ತಂಡ, 12 ಸ್ಥಳೀಯ ಪರಿಹಾರ ತಂಡಗಳು, ಕರಾವಳಿ ಪಡೆಯಿಂದ ಎರಡು ತಂಡ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ಮೂರು ತಂಡ ಸ್ಥಳದಲ್ಲಿ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. (ಏಜೆನ್ಸೀಸ್​)

    VIDEO | ವೇದಿಕೆಯಲ್ಲಿ ‘ಬ್ಯಾಟಿಂಗ್’ ಸಿದ್ಧತೆ ತೋರಿದ ಸಿಧು!

    ಇದು ದೇಶದ್ರೋಹ… ಇದಕ್ಕೆ ಬೇರೆ ಪದಗಳೇ ಇಲ್ಲ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

    ವರದಕ್ಷಿಣೆಯಾಗಿ 21 ಆಮೆ, ಕಪ್ಪು ಬಣ್ಣದ 1 ನಾಯಿ, ಬುದ್ಧನ ಗೊಂಬೆಗೆ ಬೇಡಿಕೆ: ವರ ಕೊಟ್ಟ ಕಾರಣ ಹೀಗಿದೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts