ತವರಿನಲ್ಲಿದ್ದ ಪತ್ನಿ ಜತೆ ಮೊಬೈಲ್​ನಲ್ಲಿ ಮಾತನಾಡುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಪತಿ ಸಾವು

Disease Maneesh
Published on

ಕೊಚ್ಚಿ: ಪತ್ನಿಯೊಂದಿಗೆ ಮೊಬೈಲ್​ನಲ್ಲಿ ಮಾತನಾಡುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಪೆರುಂಬವೂರ್​ನಲ್ಲಿ ನಡೆದಿದೆ.

ಮನೀಶ್​ ಅಲಿಯಾಸ್​ ಮನು (35) ಮೃತ ದುರ್ದೈವಿ. ಈತ ಪೆರುಂಬವೂರ್​ನ ಇಮುರಿ ನಿವಾಸಿ. ಈ ಘಟನೆ ಶುಕ್ರವಾರ ರಾತ್ರಿ 9 ಗಂಟೆಗೆ ನಡೆದಿದೆ.

ಪತಿಯಿಂದ ಬರದ ಪ್ರತಿಕ್ರಿಯೆ

ಮನೀಶ್​ ಪತ್ನಿ ಒಂದು ವಾರಗಳ ಕಾಲ ತವರಿಗೆ ಹೋಗಿದ್ದಳು. ಹೀಗಾಗಿ ಪ್ರತಿ ದಿನ ಪತ್ನಿಗೆ ಕರೆ ಮಾಡಿ ಮಾತನಾಡುತ್ತಿದ್ದ. ಅದೇ ರೀತಿ ಶುಕ್ರವಾರ ರಾತ್ರಿಯೂ ಕರೆ ಮಾಡಿದ್ದ. ಇಬ್ಬರು ಮಾತನಾಡುತ್ತಿರುವಾಗ ಇದ್ದಕ್ಕಿದ್ದಂತೆಯೇ ಪತಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ಮನೀಶ್​ ಪತ್ನಿ ನೆರೆಮನೆಯವರಿಗೆ ಮಾಹಿತಿ ಮುಟ್ಟಿಸಿದಳು.

ಸುದ್ದಿ ಕೇಳಿ ಪತ್ನಿಗೆ ಆಘಾತ

ಗಂಡನಿಗೆ ಅನೇಕ ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ನೆರೆಮನೆಯವರು ಮನೀಶ್​ಗಾಗಿ ಹುಡುಕಾಡಿದ್ದಾರೆ. ಈ ವೇಳೆ ಆತ ಬಾವಿಯಲ್ಲಿ ಪತ್ತೆಯಾಗಿದ್ದಾನೆ. ಮೇಲಕ್ಕೆ ಎತ್ತಿ ನೋಡಿದಾಗ ಆತ ಅಷ್ಟರಲ್ಲಾಗಲೇ ಮೃತಪಟ್ಟಿದ್ದ. ಈ ಸುದ್ದಿ ಕೇಳಿ ಪತ್ನಿಗೆ ಆಘಾತವಾಗಿದ್ದು, ಆಕ್ರಂದನ ಮುಗಿಲು ಮುಟ್ಟಿತು.

ಮೃತ ಮನೀಶ್​ ಆಲುವಾ-ಕೋತಮಂಗಲಂ ಮಾರ್ಗದಲ್ಲಿ ಸೇವೆ ಸಲ್ಲಿಸುವ ಬಸ್ ಯಾತ್ರಾಸ್‌ನ ಚಾಲಕರಾಗಿದ್ದರು. ಆತ ಮಜುವನ್ನೂರು ಮೂಲದ ತಮ್ಮ ಪತ್ನಿ ಕವಿತಾಮೋಳ್​ರನ್ನು ಅಗಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net