More

    ಗರ್ಭದಲ್ಲಿರುವಾಗಲೇ ಎರಡು ಶಿಶುಗಳಿಗೆ ತಗುಲಿದ ಕರೊನಾ!

    ನವದೆಹಲಿ: ಕರೊನಾ ಸೋಂಕಿನ ಆತಂಕ  ಕಳೆದ 2 ವರ್ಷಗಳಿಂದ ಮಾನವ ಸಂಕುಲವನ್ನು ನಡುಗಿಸುತ್ತಿದೆ.
    ತಾಯಿಯ ಗರ್ಭದಲ್ಲಿರುವಾಗಲೇ ಎರಡು ಶಿಶುಗಳಿಗೆ ಕರೊನಾ ಸೋಂಕು ತಗುಲಿದ್ದು, ಮೆದುಳಿಗೆ ಹಾನಿಯಾಗಿದೆ ಎಂದು ಅಧ್ಯನವೊಂದರಿಂದ ತಿಳಿದು ಬಂದಿದೆ.

    ಪೀಡಿಯಾಟ್ರಿಕ್ಸ್​ ಜರ್ನಲ್​ನಲ್ಲಿ ಪ್ರಕಟವಾದ ಮಿಯಾಮಿ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ 2020ರ ಎರಡನೇ ತ್ರೈಮಾಸಿಕದಲ್ಲಿ ಕರೊನಾದ ಡೆಲ್ಟಾ ರೂಪಾಂತರಕ್ಕೆ ಈ ಶಿಶುಗಳು ತುತ್ತಾಗಿದ್ದವು. ಈ ಶಿಶುಗಳು ಕರೊನಾ ವೈರಸ್‌ ವಿರುದ್ಧ ತಮ್ಮ ರಕ್ತದಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ, ಪ್ರತಿಕಾಯ ಬೆಳೆಸಿಕೊಂಡಿರುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆದರೆ, ಮೆದುಳಿಗೆ ಹಾನಿಯಾಗಿರುವುದರಿಂದ ಒಂದು ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.

    ತಾಯಿಯ ಗರ್ಭದಲ್ಲಿರುವಾಗಲೇ ಎರಡು ಶಿಶುಗಳಿಗೆ ಕರೊನಾ ಸೋಂಕು ತಗುಲಿ ಮೆದುಳಿಗೆ ಹಾನಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಗರ್ಭದಲ್ಲಿರುವಾಗಲೇ ಶಿಶುವಿಗೆ ಕರೊನಾ ಸೋಂಕು ದೃಢಪಟ್ಟಿತ್ತು, ಇದರಿಂದ ಎರಡು ಶಿಶುಗಳ ಮೆದುಳಿಗೆ ಹಾನಿಯಾಗಿದೆ. ಎರಡು ಶಿಶುಗಳಲ್ಲಿ ಒಂದು ಶಿಶು ಮೃತಪಟ್ಟಿದ್ದು, ಮತ್ತೊಂದು ಶಿಶುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಇದು ವಿಶ್ವದಲ್ಲೇ ಮೊದಲ ಪ್ರಕರಣವಾಗಿದೆ.

     ಇದನ್ನೂ ಓದಿ:  ಬುಲೆಟ್ ಪ್ರೂಫ್ ‘ನಿಸ್ಸಾನ್’ ಕಾರು ಖರೀದಿಸಿದ ನಟ ಸಲ್ಮಾನ್‌ ಖಾನ್‌

    ಕರೊನಾ ವೈರಸ್‌ ಪರೀಕ್ಷೆ ಮಾಡಿಸಿದ ಹೊರತಾಗಿಯೂ ತಾಯಂದಿರಲ್ಲಿ ಒಬ್ಬರು ಕೋವಿಡ್‌ 19ನ ಸೌಮ್ಯ ರೋಗಲಕ್ಷಣಗಳನ್ನು ಮಾತ್ರ ಹೊಂದಿದ್ದರು. ಅವರು ತನ್ನ ಹೊಟ್ಟೆಯಲ್ಲಿ ಮಗುವನ್ನು ಪೂರ್ಣಾವಧಿಗೆ ಹೊತ್ತಿದ್ದರು. ಆದರೆ, ಇನ್ನೊಬ್ಬರು ತಾಯಿ ಮಾತ್ರ ಡೆಲ್ಟಾ ವೈರಸ್‌ನಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಕರೊನಾ ಲಸಿಕೆ ಮಾರುಕಟ್ಟೆಯಲ್ಲಿಲ್ಲದ ಸಮಯವದು, ಆ ಮಕ್ಕಳು ಹುಟ್ಟಿದ ಒಂದೇ ದಿನದಲ್ಲಿ ಮಕ್ಕಳಿಬ್ಬರಿಗೂ ಪಾರ್ಶ್ವವಾಯು ಕಾಣಿಸಿಕೊಂಡು ಅವರ ಮಾನಸಿಕ ಬೆಳವಣಿಗೆ ನಿಧಾನವಾಗಿತ್ತು.

    ಗರ್ಭಾವಸ್ಥೆಯ ಮಹಿಳೆಯರಿಗೆ COVID-19 ವಿರುದ್ಧ ಲಸಿಕೆ ಹಾಕುವಂತೆ ಸಂಶೋಧಕರು ಒತ್ತಾಯಿಸಿದ್ದಾರೆ. ಗರ್ಭಾವಸ್ಥೆಯಲ್ಲಿ ಉಂಟಾಗುವ ಗಾಯಗಳಿಂದ ಈ ಸೋಂಕು ಬರುತ್ತದೆಯೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

    ಮದುವೆ ಮನೆಯ ಡಿಜೆ ನಿಲ್ಲಿಸಿದ ಪೊಲೀಸ್​; ಠಾಣೆ ಎದುರು ಪ್ರತಿಭಟನೆ ಕುಳಿತ ಜೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts