More

    ಮಂಜ್ರೇಕರ್​ಗೆ 35 ಕೋಟಿ ಹಫ್ತಾ ಕೇಳಿದ್ದ ವ್ಯಕ್ತಿ ಯಾರು ಗೊತ್ತಾ?

    ಬಾಲಿವುಡ್‍ನ ಖ್ಯಾತ ನಟ ಮತ್ತು ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರಿಗೆ ಇತ್ತೀಚೆಗಷ್ಟೇ ಒಬ್ಬ ವ್ಯಕ್ತಿ ಕರೆಮಾಡಿ, 35 ಕೋಟಿ ರೂಪಾಯಿ ಹಫ್ತಾ ಕೊಡುವಂತೆ ಧಮ್ಕಿ ಹಾಕಿದ್ದ. ಈ ವಿಷಯವಾಗಿ ಖುದ್ದು ಮಹೇಶ್ ಮಂಜ್ರೇಕರ್ ಅವರು ದಾದರ್ ಪೊಲೀಸ್ ಸ್ಟೇಶನ್‍ಗೆ ಹೋಗಿ ದೂರು ದಾಖಲಿಸಿದ್ದರು.

    ಇದನ್ನೂ ಓದಿ: ಸರಿಗಮಪದಲ್ಲಿ ಮಹಾಸಂಚಿಕೆ: ದಶಕದ ಸೂಪರ್ ಹಿಟ್ ಹಾಡುಗಳ ಮೂಲಕ ಮನರಂಜನೆ

    ಇದೊಂದು ಹೈಪ್ರೊಫೈಲ್ ಕೇಸ್ ಎಂಬ ಕಾರಣಕ್ಕೆ ದಾದರ್ ಪೊಲೀಸರು ಈ ಪ್ರಕರಣವನ್ನು ಆ್ಯಂಟಿ ಎಕ್ಸ್ಟಾರ್ಶನ್ ಸೆಲ್‍ಗೆ (ಎಇಸಿ) ಹಸ್ತಾಂತರಿಸಿದ್ದರು. ಈ ವಿಷಯವಾಗಿ ಎಇಸಿ ತನಿಖೆಯನ್ನು ಪ್ರಾರಂಭಿಸಿದ್ದು, ಈಗಾಗಲೇ 34 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.

    ಇಷ್ಟಕ್ಕೂ ಮಹೇಶ್ ಮಂಜ್ರೇಕರ್ ಅವರಿಗೆ ಕರೆ ಮಾಡಿದ್ದು ಯಾರು ಗೊತ್ತಾ? ಮಹೇಶ್ ಅವರು ದೂರಿನಲ್ಲಿ ದಾಖಲಿಸಿರುವಂತೆ, ಫೋನ್ ಮಾಡಿದವನು ತಾನು ಅಬು ಸಲೇಂ ಗ್ಯಾಂಗ್‍ನವನು ಎಂದು ಹೇಳಿಕೊಂಡಿದ್ದನಂತೆ. ಆದರೆ, ಎಇಸಿ ಅವರ ತನಿಖೆಯಂತೆ ಕರೆ ಮಾಡಿದ್ದು ಖೇಧ್ ಜಿಲ್ಲಿಎಯ ಮಿಲಿಂದ್ ತುಸಾಂಕರ್ ಎಂಬುವವರು.

    ಇದನ್ನೂ ಓದಿ: ಪ್ರಕಾಶ್ ರೈಗೆ ನೆಟ್ಟಿಗರಿಂದ ವಿರೋಧ

    ಈ ಮಿಲಿಂದ್‍ಗೆ ಅಬು ಸಲೇಂ ಗ್ಯಾಂಗ್ ಜತೆಗೆ ಯಾವುದೇ ಸಂಪರ್ಕವಿಲ್ಲವಂತೆ. ಕರೊನಾ ಮತ್ತು ಲಾಕ್‍ಡೌನ್‍ನಿಂದ ಕೆಲಸ ಕಳೆದುಕೊಂಡು, ಬೀದಿಗೆ ಬಂದಿದ್ದ ಮಿಲಿಂದ್, ಹಣ ಗಳಿಸುವ ದೃಷ್ಟಿಯಿಂದ ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಮಿಲಿಂದ್‍ನನ್ನು ವಶಕ್ಕೆ ಪಡೆದಿರುವ ಪೊಲೀಸರು, ಈಗ ಆತನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

    ವಾಯುಸೇನೆ ಅಧಿಕಾರಿಯಾದ ಕಂಗನಾ ರಣಾವತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts