More

    ಸದ್ಭಾವನಾ ಪ್ರಶಸ್ತಿಗೆ 34 ಸಾಧಕರ ಆಯ್ಕೆ

    ಮುದ್ದೇಬಿಹಾಳ: ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕೊಡಲಾಗುವ ಸ್ವಾಮಿ ವಿವೇಕಾನಂದ ರಾಷ್ಟ್ರ, ರಾಜ್ಯ ಸದ್ಭಾವನಾ ಪ್ರಶಸ್ತಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ 34 ಸಾಧಕರನ್ನು ಮತ್ತು 2 ಸಾಂಘಿಕ ತಂಡಗಳನ್ನು ಆಯ್ಕೆ ಮಾಡಲಾಗಿದೆ.

    ಇವರೆಲ್ಲರಿಗೂ ಪಟ್ಟಣದ ವಿಬಿಸಿ ಪ್ರೌಢಶಾಲೆಯ ಮೈದಾನದಲ್ಲಿರುವ ಸಿದ್ಧೇಶ್ವರ ಸ್ವಾಮೀಜಿ ವೇದಿಕೆಯಲ್ಲಿ ಜ. 28ರಂದು ಹಮ್ಮಿಕೊಳ್ಳಲಾಗುವ ಸ್ವಾಮಿ ವಿವೇಕಾನಂದರ 161ನೇ ಜಯಂತ್ಯುತ್ಸವ, ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ವೈಭವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಪುಂಡಲೀಕ ಮುರಾಳ ತಿಳಿಸಿದರು.

    ಮಂಗಳವಾರ ಸಂಜೆ ಇಲ್ಲಿನ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲರನ್ನೂ ಒಕ್ಕೂಟದ ರಾಜ್ಯಾಧ್ಯಕ್ಷ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಡಾ. ಎಸ್. ಬಾಲಾಜಿ ಅವರ ಸಮ್ಮುಖ ಆಯ್ಕೆ ಮಾಡಲಾಗಿದೆ.

    ಈ ಬಾರಿ ನಡೆಯುತ್ತಿರುವುದು 15ನೇ ವರ್ಷದ ಕಾರ್ಯಕ್ರಮವಾಗಿರುವುದರಿಂದ ಕಾರ್ಯಕ್ರಮಕ್ಕೂ ಮುನ್ನ ಸ್ವಾಮಿ ವಿವೇಕಾನಂದರ ಭಾವಚಿತ್ರದ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

    ಗದಗ ಜಿಲ್ಲೆಯಿಂದ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ, ಬಾಗಲಕೋಟೆಯಿಂದ ಶಂಭು ಬಳಿಗಾರ ಮತ್ತು ಅದಿತಿ ಅಕ್ಕಿ, ಮಂಡ್ಯದಿಂದ ಲಕ್ಷ್ಮೀ ಶ್ರೀನಿವಾಸ ಗುರೂಜಿ, ಚಾಮರಾಜನಗರದಿಂದ ರಾಜಯೋಗಿನ ಬ್ರಹ್ಮಕುಮಾರಿ ದಾನೇಶ್ವರಿ, ರಾಮನಗರದಿಂದ ಪ್ರೊ. ಅಶ್ವಿನಿ ಸಿ., ವಿಜಯನಗರದಿಂದ ಡಾ. ಕೆ.ಎಂ. ಮೇತ್ರಿ, ತುಮಕೂರಿನಿಂದ ಡಾ. ಎನ್. ಗೋವಿಂದರಾಜು, ಮೈಸೂರಿನಿಂದ ಡಾ. ಅಕ್ಕಮಹಾದೇವಿ, ಶಿವಮೊಗ್ಗದಿಂದ ಡಾ. ಎಂ. ವೆಂಕಟೇಶ, ಬೆಂಗಳೂರು ನಗರದಿಂದ ರವಿಚಂದ್ರನ್ ಎಸ್., ಬೆಂಗಳೂರು ಗ್ರಾಮಾಂತರದಿಂದ ಡಾ. ತೇಜಾವತಿ ಕೆ., ಬಳ್ಳಾರಿಯಿಂದ ಟಪಾಲ ಗಣೇಶ, ದಕ್ಷಿಣಕನ್ನಡದಿಂದ ಶೈಲೇಶ ಅಂಬೆಕಲ್ಲು, ದಾವಣಗೆರೆಯಿಂದ ಗಿರೀಶ ಡಿ., ಚಿಕ್ಕಮಗಳೂರಿನಿಂದ ಎ.ಸಿ. ಚಂದ್ರಪ್ಪ, ರಾಯಚೂರಿನಿಂದ ದಂಡಪ್ಪ ಬಿರಾದಾರ, ಹಾವೇರಿಯಿಂದ ಪರಿಮಳ ಜೈನ್, ವಿಜಯಪುರದಿಂದ ಮಲ್ಲಿಕಾರ್ಜುನ ಮದರಿ, ಸಿ.ಬಿ. ಅಸ್ಕಿ, ಎಸ್.ಯು. ಜಮಾದಾರ ಮತ್ತು ಭೀಮಣ್ಣ ಭಜಂತ್ರಿ, ಕೊಡಗಿನಿಂದ ಜಯಂತಿ ಬಿ.ಬಿ., ಹಾಸನದಿಂದ ಮಹೇಶ ಕೆ., ಉಡುಪಿಯಿಂದ ಯು.ಎಸ್. ಶೆಣೈ, ಗುಲಬರ್ಗಾದಿಂದ ಹಣಮಂತ್ರಾವ ಪಾಟೀಲ, ಯಾದಗಿರಿಯಿಂದ ಗವಿಸಿದ್ದೇಶ ಹೊಗರಿ, ಉತ್ತರಕನ್ನಡದಿಂದ ಉಮೇಶ ಕೃಷ್ಣಾನಾಯಕ, ಚಿಕ್ಕಬಳ್ಳಾಪುರದಿಂದ ಸುದರ್ಶನ ಪಿ.ಕೆ., ಕೋಲಾರದಿಂದ ಆರ್. ಹರೀಶ, ಚಿತ್ರದುರ್ಗದಿಂದ ಪಂಡಿತ ಅಶೋಕ ತುರಮುರಿ, ಧಾರವಾಡದಿಂದ ಡಾ. ಎಂ.ಎಸ್. ಹುಲಗರ, ಬೀದರ್‌ನಿಂದ ಚಂದ್ರಶೇಖರ ತೂಗಾ, ಕೊಪ್ಪಳದಿಂದ ವೆಂಕಟೇಶ ಕಟ್ಟಿಮನಿ, ವೈಯುಕ್ತಿಕ ವಿಭಾಗದಲ್ಲಿ ಮತ್ತು ದಕ್ಷಿಣಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಭಾವೈಕ್ಯ ಯುವಕ ಮಂಡಳ ಹಾಗೂ ಉಡುಪಿ ಜಿಲ್ಲೆಯಿಂದ ಕುಂದಾಪುರ ತಾಲೂಕು ಖಾರ್ವಿಕೇರಿಯ ವಿದ್ಯಾರಂಗ ಮಿತ್ರಮಂಡಳಿ ಸಾಂಘಿಕ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
    ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಘಟಕದ ನೇತೃತ್ವದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಧನಾ ಮಹಿಳಾ ಒಕ್ಕೂಟ, ಧರ್ಮಯುದ್ಧ ಬಳಗದ ಆಶ್ರಯದಲ್ಲಿ ಜ. 28ರಂದು ಸಂಜೆ 5ಕ್ಕೆ ಸಮಾರಂಭ ನಡೆಯಲಿದ್ದು ಸಚಿವ ಶಿವರಾಜ ತಂಗಡಗಿ ಉದ್ಘಾಟಿಸುವರು. ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಪ್ರಶಸ್ತಿ ಪ್ರದಾನ ಮಾಡುವರು. ಶಾಸಕ ಸಿ.ಎಸ್. ನಾಡಗೌಡ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಮೆರವಣಿಗೆಗೆ ಚಾಲನೆ ನೀಡುವರು.

    ಹಲವು ಗಣ್ಯರು, ಅಧಿಕಾರಿಗಳು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

    ಒಕ್ಕೂಟದ ತಾಲೂಕು ಅಧ್ಯಕ್ಷ ಮಹಾಂತೇಶ ಬೂದಿಹಾಳಮಠ, ಪದಾಧಿಕಾರಿಗಳಾದ ಚಂದ್ರಶೇಖರ ಕಲಾಲ, ಮಹ್ಮದರಫೀಕ ಶಿರೋಳ, ಶ್ರೀಕಾಂತ ಹಿರೇಮಠ, ಮಹಾಂತೇಶ ಬಿಜ್ಜೂರ, ಸಚಿನ್ ಚಲವಾದಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts