More

    ‘ಇನ್ನೂ ಗ್ಯಾರಂಟೀ..’ ಎನ್ನುತ್ತ ಆ ನೆನಪನ್ನು ಹಂಚಿಕೊಂಡ ರಾಘವೇಂದ್ರ ರಾಜಕುಮಾರ್​

    ಬೆಂಗಳೂರು: ನಟ ರಾಘವೇಂದ್ರ ರಾಜಕುಮಾರ್ ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಯಾವುದಾದರೂ ಒಂದು ವಿಷಯವನ್ನು ನೆನಪಿಸಿಕೊಂಡು, ಅವುಗಳನ್ನು ಹಂಚಿಕೊಂಡು ಖುಷಿ ಪಡುತ್ತಿರುತ್ತಾರೆ. ಇದೀಗ 33 ವರ್ಷಗಳ ಹಿಂದಿನ ಆ ನೆನಪೊಂದನ್ನು ಹಂಚಿಕೊಂಡು ಖುಷಿಪಡುವ ಜತೆಗೆ ಸಿನಿಪ್ರಿಯರನ್ನೂ ಮೂರು ದಶಕಗಳ ಹಿಂದೆ ಹೋಗುವಂತೆ ಮಾಡಿದ್ದಾರೆ.

    ಹೌದು.. ಇದು ಅವರ ‘ನಂಜುಂಡಿ ಕಲ್ಯಾಣ’ದ ಕುರಿತು. ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸದ್ದು ಮಾಡಿದ್ದ ‘ನಂಜುಂಡಿ ಕಲ್ಯಾಣ’ ತೆರೆಕಂಡು ಇಂದಿಗೆ ಭರ್ತಿ 33 ವರ್ಷಗಳಾಗಿದ್ದು, ಅವರು ಆ ನೆನಪನ್ನು ಸಣ್ಣ ವಿಡಿಯೋ ತುಣುಕೊಂದರ ಮೂಲಕ ಹಂಚಿಕೊಂಡಿದ್ದಾರೆ.

    ಪಾರ್ವತಮ್ಮ ರಾಜಕುಮಾರ್ ಅವರ ನಿರ್ಮಾಣ, ಎಂ.ಎಸ್. ರಾಜಶೇಖರ್ ಅವರ ನಿರ್ದೇಶನ, ಚಿ. ಉದಯಶಂಕರ್ ಅವರ ಸಂಭಾಷಣೆ, ಉಪೇಂದ್ರಕುಮಾರ್ ಅವರ ಸಂಗೀತ, ವಿ.ಕೆ. ಕಣ್ಣನ್​ ಅವರ ಛಾಯಾಗ್ರಹಣದಲ್ಲಿ ಮೂಡಿಬಂದಿದ್ದ ಈ ಸಿನಿಮಾ 1989ರ ಫೆ. 15ರಂದು ತೆರೆಕಂಡಿತ್ತು.

    ಇದಕ್ಕೂ ಮೊದಲು ರಾಘವೇಂದ್ರ ರಾಜಕುಮಾರ್ ‘ಚಿರಂಜೀವಿ ಸುಧಾಕರ್’ ಎಂಬ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರೂ ‘ನಂಜುಂಡಿ ಕಲ್ಯಾಣ’ ಚಿತ್ರ ಅವರಿಗೆ ಭರ್ಜರಿ ಯಶಸ್ಸು ಹಾಗೂ ಜನಪ್ರಿಯತೆ ತಂದುಕೊಟ್ಟಿತ್ತು.

    ಮಾತ್ರವಲ್ಲ, ಈ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದ ನಟಿ ಮಾಲಾಶ್ರೀ, ಇದರಲ್ಲಿನ ‘ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು..’ ಎಂಬ ಒಂದೇ ಒಂದು ಹಾಡಿನಿಂದ ಕನ್ನಡಿಗರ ಹಾಟ್​ ಫೇವರಿಟ್ ಆದರು. ಅಲ್ಲದೆ ಈ ಚಿತ್ರದ ಮೂಲಕ ನಾಯಕಿಯಾಗಿ ಪರಿಚಿತರಾದ ಮಾಲಾಶ್ರೀ ಬಳಿಕ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿ ‘ಕನಸಿನ ರಾಣಿ’ ಎಂದೇ ಚಿರಪರಿಚಿತರಾದರು.

    ಇನ್ನು ‘ನಂಜುಂಡಿ ಕಲ್ಯಾಣ’ದ ಈ ಜೋಡಿ ಎಷ್ಟು ಜನಪ್ರಿಯವಾಯಿತೆಂದರೆ, ಆ ಬಳಿಕ ಇವರಿಬ್ಬರ ಜೋಡಿಯಲ್ಲಿ ಮೂಡಿ ಬಂದಿದ್ದ ‘ಗಜಪತಿಯ ಗರ್ವಭಂಗ’ ಕೂಡ ಭಾರಿ ಯಶಸ್ಸು ಗಳಿಸಿತು. ವಿಶೇಷವೆಂದರೆ ಈ ಚಿತ್ರವನ್ನೂ ಎಂ.ಎಸ್. ರಾಜಶೇಖರ್ ನಿರ್ದೇಶಿಸಿದ್ದರು. ಹೀಗೆ ತಮ್ಮ ವೃತ್ತಿಜೀವನದಲ್ಲಿ ಮರೆಯಲಾಗದ ಮೈಲುಗಲ್ಲಾಗಿ ಉಳಿದ ‘ನಂಜುಂಡಿ ಕಲ್ಯಾಣ’ ಸಿನಿಮಾ 33 ವರ್ಷಗಳ ಈ ನೆನಪನ್ನು ರಾಘವೇಂದ್ರ ರಾಜಕುಮಾರ್ ಹಂಚಿಕೊಂಡಿದ್ದಾರೆ.

    ಎಂಥ ದುಸ್ಥಿತಿಯಲ್ಲಿದೆ ನೋಡಿ ನಿರ್ದೇಶಕ ಪುಟ್ಟಣ್ಣ ಕಣಗಾಲರ ಮನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts