More

    ಹೊಳೆನರಸೀಪುರ ಕ್ಷೇತ್ರ ವ್ಯಾಪ್ತಿಯಲ್ಲಿ 325 ಮತಗಟ್ಟೆಗಳು ಸಿದ್ಧ

    ಹಾಸನ : ಹೊಳೆನರಸೀಪುರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ತಾಲೂಕಿನಲ್ಲಿ ಒಟ್ಟು 325 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ. ಹೊಳೆನರಸೀಪುರ ವಿಧಾನಸಭಾ ವ್ಯಾಪ್ತಿಗೆ ಹಾಸನ ತಾಲೂಕಿನ ದುದ್ದ ಹಾಗೂ ಶಾಂತಿ ಗ್ರಾಮ ಹೋಬಳಿ, ಚನ್ನರಾಯಪಟ್ಟಣ ತಾಲೂಕಿನ ದುದ್ದ ಹೋಬಳಿಯ ಮತದಾರರು ಸೇರಿದ್ದಾರೆ. ತಾಲೂಕಿನಲ್ಲಿ 1,11,159 ಪುರುಷ ಮತದಾರರು, 1,12,041 ಮಹಿಳಾ ಮತದಾರರು ಸೇರಿ ಒಟ್ಟು 2,23,209 ಮತದಾರರಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಸತೀಶ್ ಬಾಬು ತಿಳಿಸಿದರು.


    85 ವರ್ಷಕ್ಕಿಂತ ಮೇಲ್ಪಟ್ಟ 3799 ಮತದಾರು, 2960 ಅಂಗವಿಕಲ ಮತದಾರರಿದ್ದು, ಇವರಲ್ಲಿ 619 ಜನರು ಮತಗಟ್ಟೆ ಬರಲು ಸಾಧ್ಯ ಇಲ್ಲದ ಕಾರಣ ಇವರ ಮನೆಗಳಿಗೆ ಹೋಗಿ ಮತದಾನ ಮಾಡಿಸಿಕೊಂಡು ಬರಲಾಗುವುದು. ಮನೆಗಳಿಗೆ ತೆರಳಿದಾಗಲೂ ಮತದಾನದ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.


    325 ಮತಗಟ್ಟೆಗಳಿಗೆ 1430 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ಏಪ್ರಿಲ್ 4 ಮತ್ತು 7 ರಂದು ತರಬೇತಿ ನೀಡಲಾಗುವುದು. ಅಗತ್ಯಕ್ಕೆ ತಕ್ಕಷ್ಟು ತನಿಖಾ ತಂಡಗಳನ್ನು ನಿಯೋಜಿಸಲಾಗಿದೆ. ಪ್ರಚಾರ ಮಾಡುವವರು 48 ಗಂಟೆ ಮೊದಲು ಅನುಮತಿ ತೆಗೆದುಕೊಳ್ಳಬೇಕು. ಅನುಮತಿ ಪಡೆದುಕೊಂಡ ಸಭೆಗಳಿಗೆ ನಮ್ಮ ನಿಯೋಜಿತ ತಂಡ ತೆರಳಿ ವಿಡಿಯೋ ಚಿತ್ರೀಕರಿಸಿ ಖರ್ಚು ವೆಚ್ಚದ ಅಂದಾಜು ವೆಚ್ಚವನ್ನು ಪಟ್ಟಿ ತಯಾರಿಸಿಕೊಳ್ಳಲಾಗುವುದು. ತಾಲೂಕಿನ ಮೂರು ಸ್ಥಳಗಳಲ್ಲಿ ಚೆಕ್‌ಪೋಸ್ಟ್ ಅನ್ನು ತೆರೆಯಲಾಗಿದ್ದು, 50 ಸಾವಿರಕ್ಕಿಂತ ಹೆಚ್ಚು ಹಣ ಸಾಗಿಸುವವರು ಸೂಕ್ತ ದಾಖಲೆಗಳನ್ನು ಹೊಂದಿರದಿದ್ದರೆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಎಸ್‌ಐಟಿ ತಂಡದಿಂದ ಒಟ್ಟು 8,12,000 ರೂ. ನಗದು ಹಾಗೂ 229 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

    ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹ ವಿದ್ಯಾ ಮಂದಿರ ಶಾಲೆಯಲ್ಲಿ ಅನುಮತಿ ಪಡೆಯದೆ ರಾಜಕಾರಣಿಗಳನ್ನು ಕರೆಯಿಸಿ ಚುನಾವಣೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಮೇರೆಗೆ ಕಾರಣ ಕೇಳಿ ಶಾಲೆಯ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು. ತಹಸೀಲ್ದಾರ್ ಪಿ.ಸಿ.ಪ್ರವೀಣ್ ಕುಮಾರ್, ಚುನಾವಣಾ ಶಾಖೆಯ ಶಿರಸ್ತೇದಾರ್ ಉದಯಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts