More

    ಡೆಪ್ಯೂಟಿ ಡೈರೆಕ್ಟರ್ ಶ್ರೀನಿವಾಸ್ ಮನೆಯಲ್ಲಿ ಎಂಟು ಲಕ್ಷ ನಗದು, 200 ಗ್ರಾಂ ಚಿನ್ನಾಭರಣ ಪತ್ತೆ

    ಬೆಂಗಳೂರು: ಕರ್ನಾಟಕದ 90 ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ. ಒಟ್ಟಾರೆ 17 ಮಂದಿ ಸರ್ಕಾರಿ ಅಧಿಕಾರಿಗಳ ವಿರುದ್ದ ಲೋಕಾಯುಕ್ತಕ್ಕೆ ದೂರು ಬಂದಿತ್ತು. ಇದೀಗ 250 ಮಂದಿ ಲೋಕಾಯುಕ್ತ ಅಧಿಕಾರಿಗಳಿಂದ ರಾಜ್ಯದ 17 ಜನ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 90 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.

    ಬೆಂಗಳೂರಿನಲ್ಲಿ ಇಬ್ಬರು ಅಧಿಕಾರಿಗಳಿಗೆ ಸೇರಿದ 11 ಕಡೆಗಳಲ್ಲಿ ದಾಳಿ ನಡೆಸಿದ್ದು, ಕಾರ್ಮಿಕ ಇಲಾಖೆ ಡೆಪ್ಯೂಟಿ ಡೈರೆಕ್ಟರ್ ಆದ ಶ್ರೀನಿವಾಸ್ ಗೆ ಸಂಬಂಧಿಸಿದ 9 ಕಡೆ, ಚಂದ್ರಪ್ಪಗೆ ಸೇರಿದ ಎರಡು ಕಡೆ ದಾಳಿ ನಡೆದಿದೆ ಎನ್ನಲಾಗಿದೆ. ಶ್ರೀನಿವಾಸ್ ಅವರ ಉಲ್ಲಾಳ ಉಪಕಾರ್ ಲೈಔಟ್ ನ ನಿವಾಸದ ಮೇಲೆ ಲೋಕಾ ದಾಳಿ ನಡೆಸಿ ಮನೆ, ಕಾರು ಪರಿಶೀಲಿಸಲಾಗುತ್ತಿದೆ.

    ಡೆಪ್ಯೂಟಿ ಡೈರೆಕ್ಟರ್ ಶ್ರೀನಿವಾಸ್ ಮನೆಯಲ್ಲಿ ಎಂಟು ಲಕ್ಷ ನಗದು, 200 ಗ್ರಾಂ ಚಿನ್ನಾಭರಣ ಪತ್ತೆ

    ಶ್ರೀನಿವಾಸ್ ಮನೆಯಲ್ಲಿ ಎಂಟು ಲಕ್ಷ ನಗದು, 200 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ. ಉಳ್ಳಾಲ, ಬ್ಯಾಡರಹಳ್ಳಿ, ಸುಂಕದಕಟ್ಟೆ, ಮೈಸೂರಲ್ಲಿ 40/60 ಸೈಟ್, ಕೊಳ್ಳೆಗಾಲದ ಸತ್ಯಗಾಲದ ಬಳಿ 7 ಎಕರೆ ಫಾರ್ಮ್ ಹೌಸ್, ಸಫಾರಿ ಕಾರು, ಎರಡು ಸ್ಕೂಟರ್ ಹೊಂದಿದ್ದು, ಶ್ರೀನಿವಾಸ್ ಬೇನಾಮಿ ಹೆಸರಲ್ಲಿ ಕಾರು ಹೊಂದಿದ್ದಾರೆ.

    ಡೆಪ್ಯೂಟಿ ಡೈರೆಕ್ಟರ್ ಶ್ರೀನಿವಾಸ್ ಮನೆಯಲ್ಲಿ ಎಂಟು ಲಕ್ಷ ನಗದು, 200 ಗ್ರಾಂ ಚಿನ್ನಾಭರಣ ಪತ್ತೆ

    ಕಡೆಗೆ ಆಯುಧಪೂಜೆ ವಿಡಿಯೋ ಮುಂದಿಟ್ಟು ಪ್ರಶ್ನಿಸಿದಾಗ ತನ್ನದೇ ಕಾರೆಂದು ಶ್ರೀನಿವಾಸ್ ಒಪ್ಪಿಕೊಂಡಿದ್ದಾರೆ. ಬನ್ನೂರು ರಸ್ತೆಯಲ್ಲಿ ತಂದೆ ಹೆಸರಲ್ಲಿ ಸೈಟ್, ಮಗಳ ಹೆಸರಲ್ಲಿ ಕಾರು, 10 ಕಾಸ್ಟ್ಲಿ ವಾಚ್​​​ಗಳಿವೆ.

    ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್‌; ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಏಕಕಾಲದಲ್ಲಿ 90 ಕಡೆ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts