More

    3 ಸಾವಿರ ಪಬ್ಲಿಕ್ ಶಾಲೆ ಪ್ರಾರಂಭಿಸಲು ನಿರ್ಧಾರ; ಮಧು ಬಂಗಾರಪ್ಪ

    ಬೆಂಗಳೂರು: ಎರಡು ಗ್ರಾಮ ಪಂಚಾಯಿತಿಗೆ ಒಂದರಂತೆ 3000 ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಿರುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

    ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಶಾಲೆ ಪ್ರಾರಂಭಿಸಲು ಸಿಎಂ, ಡಿಸಿಎಂ ಇಬ್ಬರೂ ಒಪ್ಪಿಗೆ ಕೊಟ್ಟಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇವುಗಳನ್ನು ಆರಂಭಿಸುತ್ತೇವೆ.

    ಸಿಎಸ್‌ಆರ್ ಯೋಜನೆಯಡಿ ಹಣ ಲಭ್ಯವಾಗಲಿದೆ. ಇದಕ್ಕೆ 600 ಕೋಟಿ ಖರ್ಚು ಬರಬಹುದು ಎಂದು ಅಂದಾಜಿಸಲಾಗಿದೆ ಎಂದರು.
    ಅಜೀಂ ಪ್ರೇಂಜಿ ೌಂಡೇಷನ್ ಜತೆ ಕೂಡ ಮಾತುಕತೆ ನಡೆದಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಅಜೀಂ ಪ್ರೇಂಜಿ ೌಂಡೇಷನ್‌ನಿಂದ ಮೂಲಸೌಕರ್ಯ ಕಲ್ಪಿಸುವ ವಿಚಾರದಲ್ಲಿ ನೆರವು ಸಿಗಬಹುದು ಎಂದು ಹೇಳಿದರು.

    ಕರ್ನಾಟಕ ಪಬ್ಲಿಕ್ ಶಾಲೆಗಳ ಗುಣಮಟ್ಟ ಚೆನ್ನಾಗಿದೆ. ದೆಹಲಿಯಲ್ಲಿ ಇದು ವರ್ಕೌಟ್ ಆಗಿದೆ. ಅದಕ್ಕೆ ಪೂರಕವಾಗಿ ನಾವು ಶಿಕ್ಷಕರನ್ನು ತಯಾರು ಮಾಡಬೇಕಿದೆ. ಇರುವ ಶಿಕ್ಷಕರು 20,30 ವರ್ಷಗಳಿಂದ ಇದ್ದಾರೆ. ಈಗ ಬರುತ್ತಿರುವ ಶಿಕ್ಷಕರು ಹೆಚ್ಚು ತಿಳಿದಿರುತ್ತಾರೆ. ಅವರಿಗೆ ಮತ್ತಷ್ಟು ಶಿಕ್ಷಣ ಕೌಶಲ ಕಲಿಸಬೇಕಿದೆ. ಡಯಟ್‌ನಲ್ಲಿ ತರಬೇತಿಗಳು ನಡೆದಿವೆ ಎಂದು ತಿಳಿಸಿದರು.

    ಶಿಕ್ಷಣ ಇಲಾಖೆ ದೊಡ್ಡದು. ಸಮಸ್ಯೆಗಳೂ ಸಾಕಷ್ಟಿವೆ. ಸರ್ಕಾರ ರಚನೆಯಾಗಿ ಆರು ತಿಂಗಳಾಗಿದೆ. ಜಿಲ್ಲಾವಾರು ಪ್ರಗತಿಪರಿಶೀಲನಾ ಸಭೆ ಮಾಡಿದ್ದೇನೆ. ಡಿಸೆಂಬರ್ ಒಳಗೆ ಎಲ್ಲ ಜಿಲ್ಲೆ ಪರಿಶೀಲನೆ ಮುಗಿಸುತ್ತೇನೆ. 1 ರಿಂದ 10 ನೇ ತರಗತಿ, ಪಿಯುಸಿ ಸಭೆ ನಡೆಸಿದ್ದೇನೆ. ಕೆಲವು ಕಾರ್ಯಕ್ರಮ ಸ್ಥಗಿತಗೊಂಡಿದ್ದವು. ವಿಧಾನಸಭೆ ಅಧಿವೇಶನ ಕೂಡ ಹತ್ತಿರವಾಗುತ್ತಿದೆ. ಅದರೊಳಗೆ ಸಮಸ್ಯೆ ಸರಿಪಡಿಸುವ ಪ್ರಯತ್ನ ನಡೆದಿದೆ ಎಂದರು.

    ಶಾಲೆಗಳಿಗೆ ಮೂಲಸೌಕರ್ಯಕ್ಕೆ ಕ್ರಮ

    ಶಿಕ್ಷಕರ ಕೊರತೆ ಹೆಚ್ಚಿದೆ. ಮಕ್ಕಳು ಹೆಚ್ಚಿದ್ದು, ಅಗತ್ಯ ಶಿಕ್ಷಕರಿಲ್ಲ. ಶಿಕ್ಷಕರನ್ನ ನಾವು ತೆಗೆದುಕೊಳ್ಳಬೇಕಿದೆ. 13 ಸಾವಿರ ಶಿಕ್ಷಕರ ನೇಮಕ ಆಗಬೇಕಿದೆ. ಕೋರ್ಟ್ ವಿಚಾರಣೆಗಳು ಕೂಡ ಇದ್ದವು. ಹಾಗಾಗಿ ನೇಮಕಾತಿಯಲ್ಲಿ ಸಮಸ್ಯೆಯಾಗಿತ್ತು. ಶಿಕ್ಷಕರ ಕೊರತೆ ಬಗ್ಗೆ ಸಿಎಂ ಜತೆ ಚರ್ಚಿಸಿದ್ದೇನೆ. ಇದರ ಜತೆಗೆ ಮೂಲಸೌಕರ್ಯಗಳು ಆಗಬೇಕಿದೆ. ಮಳೆಯಿಂದಾಗಿ ಶೌಚಾಲಯ, ಕಾಂಪೌಂಡ್ ಸಮಸ್ಯೆಗಳು ಹೆಚ್ಚಿವೆ. ಸಮಸ್ಯೆಯನ್ನ ಸರಿಪಡಿಸುವ ಕೆಲಸ ನಡೆದಿದೆ. 7500 ಕೊಠಡಿಗಳ ನಿರ್ಮಾಣ ಆಗಬೇಕಿದೆ. 510 ಶಾಲಾ ಕೊಠಡಿ ನವೀಕರಣ ಆಗಬೇಕಿದೆ. 7200 ಶೌಚಾಲಯ ನಿರ್ಮಾಣ ಮಾಡಬೇಕಿದೆ.
    ಅಡಿಗೆ ಮನೆ ರಿಪೇರಿ ಕಾರ್ಯ ನಡೆದಿದೆ ಎಂದು ಹೇಳಿದರು.

    ಮುಂದಿನ ತಿಂಗಳಿಂದ ರಾಗಿ ಮಾಲ್ಟ್

    ಮಧ್ಯಾಹ್ನದ ಬಿಸಿಯೂಟ ಉತ್ತಮವಾಗಿದೆ. ಯಾವುದೇ ಕಳಪೆ ಇಲ್ಲದೆ ನಡೆದಿದೆ. ಮಕ್ಕಳಲ್ಲಿ ಪೌಷ್ಠಿಕಾಂಶ ಕೊರತೆ ನೀಗಿಸಬೇಕಿದೆ. ಈಗ ಮೊಟ್ಟೆ ನೀಡಲಾಗುತ್ತಿದೆ. ಮುಂದಿನ ತಿಂಗಳಿಂದ ರಾಗಿ ಮಾಲ್ಟ್ ನೀಡಲಾಗುತ್ತದೆ. ಎನ್ ಜಿಒ ಜತೆ ಈಗಾಗಲೇ ಮಾತುಕತೆ ನಡೆದಿದೆ. ಕ್ಷೀರಭಾಗ್ಯ ಉತ್ತಮವಾಗಿ ನಡೆದಿದೆ. ಸಂವಿಧಾನ ಪೀಠಿಕೆ ಎಲ್ಲ ಕಡೆ ಹಾಕಲಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.

    *ಶಾಲಾ ಮಕ್ಕಳಿಗೆ ಹಿಜಾಬ್ ಧರಿಸುವ ವಿಚಾರ ಕೋರ್ಟ್‌ನಲ್ಲಿದೆ. ಇದರ ಬಗ್ಗೆ ಈಗ ಪ್ರತಿಕ್ರಿಯೆ ನೀಡುವುದಿಲ್ಲ.
    -ಮಧು ಬಂಗಾರಪ್ಪ, ಶಿಕ್ಷಣ ಸಚಿವ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts