More

    ಲಾಕಪ್​ ಕಿರುಕುಳಕ್ಕೆ ದಲಿತ ಮಹಿಳೆ ಸಾವು: ಮೂವರು ಪೊಲೀಸರು ವಜಾ

    ಹೈದರಾಬಾದ್ : ಲಾಕಪ್​ನಲ್ಲಿ ನೀಡಿದ ಕಿರುಕುಳದಿಂದಾಗಿ ದಲಿತ ಮಹಿಳೆಯೊಬ್ಬರು ಸಾವಪ್ಪಿದ್ದ ಪ್ರಕರಣದಲ್ಲಿ ಮೂವರು ಪೊಲೀಸರನ್ನು ಕೆಲಸದಿಂದ ವಜಾ ಮಾಡಲಾಗಿದೆ. ತೆಲಂಗಾಣದ ಅಡ್ಡಗುದೂರು ಪೊಲೀಸ್ ಠಾಣೆಯ ಇನ್ಸ್​​ಪೆಕ್ಟರ್​ ಆಗಿದ್ದ ವಿ.ಮಹೇಶ್ವರ್, ಪೇದೆಗಳಾಗಿದ್ದ ಎಂ.ಎ.ರಶೀದ್​ ಮತ್ತು ಪಿ.ಜನಯ್ಯ ವಜಾ ಆಗಿರುವವರು.

    ಖಮ್ಮಂ ಜಿಲ್ಲೆಯ ಚಿಂತಕಣಿಯ ನಿವಾಸಿಯಾಗಿದ್ದ 45 ವರ್ಷ ವಯಸ್ಸಿನ ಮರಿಯಮ್ಮ ಎಂಬುವರನ್ನು ಅಡ್ಡಗುದೂರು ಪೊಲೀಸರು ಕಳವಿನ ಆರೋಪದ ಮೇಲೆ ವಿಚಾರಣೆಗಾಗಿ ಕರೆತಂದಿದ್ದರು. ಪೊಲೀಸ್​ ಠಾಣೆಯಲ್ಲಿ ಪ್ರಜ್ನೆ ತಪ್ಪಿಬಿದ್ದಿದ್ದ ಆಕೆ ಜೂನ್ 18 ರಂದು ಸಾವಪ್ಪಿದ್ದರು. ಮೃತ ಮರಿಯಮ್ಮನೊಂದಿಗೆ ಠಾಣೆಗೆ ಕರೆತರಲಾಗಿದ್ದ ಆಕೆಯ ಮಗ, ಪೊಲೀಸರು ನೀಡಿದ ಕಿರುಕುಳದಿಂದಾಗಿ ಆಕೆ ಸಾವಪ್ಪಿದಳು ಎಂದು ಆರೋಪಿಸಿದ್ದರು.

    ಇದನ್ನೂ ಓದಿ: ಗಡಿಯ ತುಂಬಾ ಸಿಹಿ ಸಿಹಿ: ಪಾಕಿಸ್ತಾನ- ಭಾರತದ ಯೋಧರು ಪುನಃ ಹಂಚಿಕೊಂಡರು ಸ್ವೀಟ್ಸ್‌

    ಈ ಆರೋಪದ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಕೂಡಲೇ ಸಸ್ಪೆಂಡ್ ಮಾಡಲಾಗಿತ್ತು. ತೆಲಂಗಾಣ ಹೈಕೋರ್ಟ್ ಈ ಪ್ರಕರಣದಲ್ಲಿ ನ್ಯಾಯಾಂಗ ತನಿಖೆ ಆದೇಶಿಸಿದ್ದು, ನ್ಯಾಷನಲ್ ಕಮಿಷನ್ ಫಾರ್ ಶೆಡ್ಯೂಲ್ಡ್ ಕ್ಯಾಸ್ಟ್ಸ್, ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ನೋಟೀಸು ನೀಡಿತ್ತು. ತೆಲಂಗಾಣ ಸಿಎಂ ಕೆ.ಚಂದ್ರಶೇಖರ್​ ರಾವ್ ಅವರು ಮೃತ ಮಹಿಳೆಯ ಕುಟುಂಬಕ್ಕೆ 35 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದರು.

    ಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಸಬ್​ಇನ್ಸ್​ಪೆಕ್ಟರ್​ ಮಹೇಶ್ವರ್ ಮತ್ತು ಇಬ್ಬರು ಪೇದೆಗಳು ರಾಚಕೊಂಡ ಪೊಲೀಸ್ ಕಮಿಷನರ್ ಮಹೇಶ್ ಭಾಗವತ್ ಅವರು, ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. (ಏಜೆನ್ಸೀಸ್)

    ಭಾರತಕ್ಕೆ ಭೇಟಿ ನೀಡಲಿದ್ದಾರೆ, ಅಫ್ಘಾನಿಸ್ತಾನದ ಸೇನಾ ಮುಖ್ಯಸ್ಥ!

    VIDEO | ಬಕ್ರೀದ್ ಪ್ರಯುಕ್ತ ವಿಶೇಷ ಸಾಮೂಹಿಕ ಪ್ರಾರ್ಥನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts