More

    ವಾಯು ಮಾಲಿನ್ಯ: ವಿಶ್ವದಲ್ಲೇ ದೆಹಲಿ ನಂ.1, ಭಾರತದ ಇನ್ನೆರಡು ನಗರಗಳೂ ಡೇಂಜರ್ 10ರಪಟ್ಟಿಯಲ್ಲಿವೆ​…

    ನವದೆಹಲಿ: ಮಂಜನ ಜತೆಗೆ ಕಲುಷಿತ ಗಾಳಿಯಿಂದ ರಾಷ್ಟ್ರ ರಾಜಧಾನಿ ಜನ ಶೀತ ಸಂಬಂಧಿ ಕಾಯಿಲೆಗಳಿಂದ ತತ್ತರಿಹೋಗಿದ್ದು, ಸರ್ಕಾರ ಶಾಲೆಗಳಿಗೆ ರಜೆ, ವಾಹನಗಳ ಬಳಕೆ ಮೇಲೆ ನಿಷೇದದಂತಹ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಇದರ ಬೆನ್ನಲ್ಲೇ ಸ್ವಿಸ್ ಗ್ರೂಪ್ ಐಕ್ಯೂ ಎಐಆರ್​ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರ ಪ್ರಕಾರ ವಿಶ್ವದಲ್ಲೇ ದೆಹಲಿ ನಂ.1ಸ್ಥಾನದಲ್ಲಿದ್ದು, ಕೋಲ್ಕತ್ತಾ ಮತ್ತು ಮುಂಬೈ ಸಹ ಹೆಚ್ಚು  ವಾಯುಮಾಲಿನ್ಯ ಎದುರಿಸುತ್ತಿರುವ ಭಾರತೀಯ ನಗರಗಳಾಗಿವೆ.

    ಇದನ್ನೂ ಓದಿ: ಕುಶಾಗ್ರಾ ಅಪಹರಣ-ಕೊಲೆ ಪ್ರಕರಣ: ಬಯಲಾಗುವುದೇ ವಿದ್ಯಾರ್ಥಿ ಹತ್ಯೆ ರಹಸ್ಯ?
    ಭಾನುವಾರ ಬೆಳಗ್ಗೆ 7.30ರಲ್ಲಿ ಇದ್ದಂತೆ ಐಕ್ಯೂ ಎಐಆರ್​ ಪಟ್ಟಿಯಲ್ಲಿ ನವದೆಹಲಿ ಎಕ್ಯೂಐ(ಗಾಳಿ ಗುಣಮಟ್ಟ) – 483 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಲಾಹೋರ್ 371 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಕೋಲ್ಕತ್ತಾ ಮತ್ತು ಮುಂಬೈ ಕೂಡ ಹೆಚ್ಚು ವಾಯುಮಾಲಿನ್ಯ ಎದುರಿಸುತ್ತಿರುವ 5 ನಗರಗಳಲ್ಲಿಯೇ ಬರುತ್ತವೆ. ಈ ನಗರಗಳು ಕ್ರಮವಾಗಿ 206 ಮತ್ತು 162 ಎಕ್ಯೂಐ ಇರುವ ನಗರಗಳಾಗಿವೆ.

    ತಜ್ಞರು ಮತ್ತು ವೈದ್ಯರ ಪ್ರಕಾರ, ಯಾವುದೇ ಆರೋಗ್ಯವಂತ ವ್ಯಕ್ತಿಗೆ ಶಿಫಾರಸು ಮಾಡಲಾದ ಎಕ್ಯೂಐ 50 ಕ್ಕಿಂತ ಕಡಿಮೆ ಇರಬೇಕು. ಆದರೆ ವಿಶ್ವದ ಅತ್ಯಂತ ಕಲುಷಿತಗೊಂಡಿರುವ ನಗರಗಳಲ್ಲಿ 3 ಭಾರತೀಯ ನಗರಗಳು ಸ್ಥಾನ ಪಡೆದಿರುವುದು ಆತಂಕಕ್ಕೆ ಕಾರಣವಾಗಿವೆ.

    ಇನ್ನೂ ವಾಯು ಕಾಲುಷ್ಯಕ್ಕೆ ಗುರಿಯಾಗಿರುವ 10 ದೇಶಗಳಲ್ಲಿ ಮೊದಲ ಸ್ಥಾನದಲ್ಲಿ ಆಫ್ರಿಕಾದ ಚಾಡ್ ದೇಶ ಬರುತ್ತದೆ. ಭಾರತವು 8 ನೇ ಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿ ಇರಾಕ್​, ನಂತರ ಪಾಕಿಸ್ಥಾನ, ಬಹ್ರೇನ್​, ಬಾಂಗ್ಲಾದೇಶ, ಬುರ್ಕಿನೋಫಾಸೋ, ಕುವೈತ್, ಈಜಿಫ್ಟ್​, ತಜಕಿಸ್ಥಾನ ಬರುತ್ತವೆ.

    RBI ಅಂದಾಜು ಮೀರಲಿದೆ ಭಾರತದ GDP ದರ: ಶೇ.7ಕ್ಕೆ ತಲುಪಬಹುದು ಅಂದ್ರು ಆರ್ಥಿಕ ತಜ್ಞರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts