More

    ಮನೆಮನೆಗೂ ತಲುಪಲಿದೆ ಮುಖ್ಯಮಂತ್ರಿ ಯೋಗಿಯ ಪತ್ರ…

    ಉತ್ತರಪ್ರದೇಶ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮ ಮನೆ ಮಾಡಿದ್ದು, ಈಗಾಗಲೇ ಹಲವರು ಸೋಷಿಯಲ್ ಮೀಡಿಯಾದಲ್ಲಿ ತ್ರಿವರ್ಣ ಧ್ವಜವನ್ನು ಪ್ರೊಫೈಲ್​-ಕವರ್​ ಫೋಟೋ ಆಗಿ ಹಾಕಿಕೊಂಡು ದೇಶಭಕ್ತಿ ವ್ಯಕ್ತಪಡಿಸಲಾರಂಭಿಸಿದ್ದಾರೆ. ಮಾತ್ರವಲ್ಲ, ಕೇಂದ್ರ ಸರ್ಕಾರ ಹರ್​ ಘರ್ ತಿರಂಗ ಎಂಬ ವಿಶಿಷ್ಟ ಕಲ್ಪನೆ ಮೂಲಕ ಮನೆಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಲು ಯೋಜನೆ ಹಾಕಿಕೊಂಡಿದೆ.

    ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರ್ಕಾರ ಮತ್ತೊಂದು ಕ್ರಮಕ್ಕೆ ಮುಂದಾಗಿದೆ. ಅದೇನೆಂದರೆ ಅಲ್ಲಿನ ಪ್ರತಿ ಮನೆಗೂ ಮುಖ್ಯಮಂತ್ರಿ ಹೆಸರಿನಲ್ಲಿ ಪತ್ರವೊಂದು ತಲುಪಲಿದೆ. ‘ಯೋಗೀ ಕೀ ಪಾತೀ’ ಎಂಬ ಶೀರ್ಷಿಕೆಯೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದೇಶ ಉತ್ತರಪ್ರದೇಶದ ಸುಮಾರು 3 ಕೋಟಿ ಮನೆಗಳಿಗೆ ತಲುಪಲಿದೆ.

    ಆಗಸ್ಟ್​ 2ರಿಂದ 15ರ ವರೆಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪ್ರೊಫೈಲ್ ಫೋಟೋಗಳಲ್ಲಿ ತ್ರಿವರ್ಣ ಧ್ವಜ ಹಾಕಿಕೊಳ್ಳಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು. ಈಗಾಗಲೇ ಅದನ್ನು ಅನೇಕರು ಅಭಿಯಾನ ರೀತಿಯಲ್ಲಿ ಪಾಲಿಸಲಾರಂಭಿಸಿದ್ದಾರೆ. ಹಾಗೆಯೇ ಆ.13 ಮತ್ತು 15ರ ಅವಧಿಯಲ್ಲಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡಲಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಇದೇ ಮೊದಲ ಸಲ ರಾಜ್ಯ ಸಚಿವರ ಸ್ಥಾನಮಾನ ನೀಡಿದ ಸರ್ಕಾರ..

    ಸಿದ್ದರಾಮೋತ್ಸವಕ್ಕೆ ಹೊರಟ ವಾಹನ ಅಪಘಾತ; ಒಂದು ಸಾವು, ನಾಲ್ವರಿಗೆ ಗಂಭೀರ ಗಾಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts