More

    ಚೀನಾ ಪೋಷಿತ ಪಿಎಲ್​ಎ ಉಗ್ರರಿಂದ ದಾಳಿ; ಆಸ್ಸಾಂ ರೈಫಲ್ಸ್​ನ 3 ಯೋಧರು ಹುತಾತ್ಮ

    ಇಂಫಾಲ್​: ಮಣಿಪುರದ ಚಾಂದೇಲ್​​ನಲ್ಲಿ ಸ್ಥಳೀಯ ಉಗ್ರರು ನಡೆಸಿದ ದಾಳಿಯಲ್ಲಿ ಆಸ್ಸಾಂ ರೈಫಲ್​ ನಾಲ್ಕನೇ ಘಟಕದ ಮೂರು ಯೋಧರು ಹುತಾತ್ಮರಾಗಿದ್ದಾರೆ. ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

    ಮಣಿಪುರ ರಾಜಧಾನಿ ಇಂಫಾಲ್​ಗಿಂತ 100 ಕಿ.ಮೀ.ದೂರದಲ್ಲಿ ಈ ಘಟನೆ ನಡೆದಿದೆ. ಮಣಿಪುರದಲ್ಲಿರುವ ಪೀಪಲ್ಸ್ ಲಿಬರೇಶನ್​ ಆರ್ಮಿ (ಪಿಎಲ್​ಎ) ಎಂಬ ಹೆಸರಿನ ಉಗ್ರ ಸಂಘಟನೆ ಸುಧಾರಿತ ಸ್ಫೋಟಕ (ಐಇಡಿ)ಗಳನ್ನು ಬಳಸಿ ಯೋಧರತ್ತ ದಾಳಿ ನಡೆಸಿದೆ. ನಂತರ ಫೈರಿಂಗ್​ ಕೂಡ ನಡೆಸಿದ್ದಾರೆ.

    ಈ ಪೀಪಲ್ಸ್​ ಲಿಬರೇಶನ್​ ಆರ್ಮಿ ಉಗ್ರರಿಗೆ ಚೀನಾದಿಂದ ನಿರಂತರವಾಗಿ ಆರ್ಥಿಕ ನೆರವು ಸಿಗುತ್ತದೆ. ಹಾಗೇ ಆ ದೇಶ ಶಸ್ತ್ರಾಸ್ತ್ರಗಳನ್ನೂ ಒದಗಿಸುತ್ತದೆ.

    ಪಿಎಲ್​ಎ ಉಗ್ರರು ಭಾರತೀಯ ಸೈನಿಕರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುತ್ತಾರೆ. 2017ರಲ್ಲಿ ಕೂಡ ಮಣಿಪುರದ ಆಸ್ಸಾಂ ರೈಫಲ್ಸ್​ ಯೋಧರ ಮೇಲೆ ಇದೇ ಉಗ್ರರು ದಾಳಿ ಮಾಡಿದ್ದರು. ಅದಕ್ಕೆ ಸಂಬಂಧಪಟ್ಟಂತೆ ಒಟ್ಟು ಆರು ಉಗ್ರರ ವಿರುದ್ಧ ಈ ಬಾರಿ ರಾಷ್ಟ್ರೀಯ ತನಿಖಾ ದಳ ಚಾರ್ಜ್​ ಶೀಟ್​ ದಾಖಲಿಸಿದೆ. (ಏಜೆನ್ಸೀಸ್​)

    ಬೆಂಗಳೂರಿನಲ್ಲಿ ಕೋವಿಡ್​-19 ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿರುವುದು ಏಕೆ? ಇಲ್ಲಿದೆ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts